ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

BREAKING NEWS: ಗಿರಡ್ಡಿ ಗೋವಿಂದರಾಜ ಇನ್ನಿಲ್ಲ

ಹಿರಿಯ ಸಾಹಿತಿ ಗಿರಡ್ಡಿ ಗೋವಿಂದರಾಜ ಇನ್ನಿಲ್ಲ

ಧಾರವಾಡದಲ್ಲಿ ತೀವ್ರ ಹೃದಯಾಘಾತದಿಂದ ನಿಧನ

ಖ್ಯಾತ ವಿಮರ್ಶಕ, ಧಾರವಾಡ ಸಾಹಿತ್ಯ ಸಂಭ್ರಮ ದ ರೂವಾರಿಯಾಗಿದ್ದ ಗಿರಡ್ಡಿ ಗೋವಿಂದರಾಜ

೧೯೩೯ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಜನನ

ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು

ಮನೆಯಲ್ಲಿ ಹೃದಯಾಘಾತವಾಗಿತ್ತು

ಕುಸಿದು ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯ ಸಾವು

ಐವತ್ತು ವರ್ಷಗಳ ಕಾಲ ಸಾಹಿತ್ಯ ಕೃಷಿ

ಕರ್ನಾಟಕ ವಿಶ್ವವಿದ್ಯಾಲಯ ದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ , ಮುಖ್ಯಸ್ಥರಾಗಿ ನಿವೃತ್ತಿಯಾಗಿದ್ದರು

ಧಾರವಾಡ ದ ಕಲ್ಯಾಣ ನಗರದಲ್ಲಿ ವಾಸವಾಗಿದ್ದರು

‍ಲೇಖಕರು avadhi

11 May, 2018

4 Comments

  1. ಬಿಳಿಮಲೆ

    ೭೯ ವರುಷದ ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜರು ಇನ್ನಿಲ್ಲ. ಸಾಹಿತ್ಯದ ಅನನ್ಯ ಗುಣಗಳ ಬಗ್ಗೆ ಅಸೀಮವಾದ ನಂಬಿಕೆ ಇರಿಸಿಕೊಂಡಿದ್ದ ಅವರು ಮೂಲತಹ ಒಳ್ಳೆಯ ಭಾಷಾ ಶಾಸ್ತ್ರಜ್ಞರಾಗಿದ್ದರು. ಕಾವ್ಯ, ವಿಮರ್ಶೆ, ಕತೆ, ರಂಗಭೂಮಿ, ಅನುವಾದ ಹಾಗೂ ಜಾನಪದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದ ಅವರು ಸಂಕ್ರಮಣ ಪತ್ರಿಕೆಯ ಸಂಪಾದಕರೂ ಆಗಿದ್ದರು. ನವ್ಯ ಸಾಹಿತ್ಯ ಕಾಲದಲ್ಲಿ ಗಿರಡ್ಡಿಯವರ ಲೇಖನಗಳಿಗೆ ತಾರಾ ಮೌಲ್ಯವೂ ಪ್ರಾಪ್ತಿಸಿತ್ತು. ಬಂಡಾಯ ಚಳುವಳಿಯ ಬಗ್ಗೆ ಅವರಿಗೆ ಅಂತಹ ಕುತೂಹಲವೇನೂ ಇರಲಿಲ್ಲ. ಈಚೆಗೆ ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಭ್ರಮದ ಸೂತ್ರಧಾರರು ಅವರೇ ಆಗಿದ್ದರು. ಅವರ ನಿಧನದೊಂದಿಗೆ ನಾವು ಅಪ್ಪಟ ಸಾಹಿತ್ಯ ಪ್ರೇಮಿಯೊಬ್ಬನನ್ನು ಕಳೆದುಕೊಂಡೆವು.

  2. C. N. Ramachandran

    ಸುದ್ದಿ ತಿಳಿದು ತುಂಬಾ ಖಿನ್ನತೆ ಕವಿದಿದೆ; ಗಿರಡ್ಡಿ, ಸರದಿ ಮುರಿದು ಹೋಗುವಂತಹ ಮಹತ್ಕಾರ್ಯ ಏನಿತ್ತು? ಇನ್ನೂ ಬಹು ಕಾಲ ನಮ್ಮೆಲ್ಲರೊಡನೆ ಇರಬೇಕಿತ್ತಲ್ಲವೆ? ನಿಮ್ಮ ಜಾಗವನ್ನು ತುಂಬಿ ನಿಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸುವವರು ಯಾರು?
    ರಾಮಚಂದ್ರನ್

  3. kvtirumalesh

    ಹಸುಳೆಯಂಥ ಮನುಷ್ಯ ಈ ಗಿರಡ್ಡಿ ಎಂದರೆ. ದೇವರೆ, ಅವರನ್ನು ಬಯ್ಯುತ್ತಿದ್ದ ನಮ್ಮನ್ನು ಕ್ಷಮಿಸು!

    ಕೆ.ವಿ.ತಿರುಮಲೇಶ್

  4. LAKSHMANA RAO

    VERY SAD NEWS

    – RIP

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading