
ಕುವೆಂಪು ಮನೆಯಲ್ಲಿ ಪದಕ ಕದ್ದ ಕಳ್ಳನಿಗೆ ಈಗ ದೊಡ್ಡ ಪಾಪಕ್ಕೆ ಸಿಲುಕಿದ ಭಯ ಕಾಡತೊಡಗಿದೆ. ಕುವೆಂಪು ರೈತ ಗೀತೆ ಬರೆದಿದ್ದಾರೆ ಎನ್ನುವುದು ಪದಕ ಕದಿಯುವಾಗ ಗೊತ್ತಿರಲಿಲ್ಲ.
ಅಣ್ಣ ರಾಜಕುಮಾರ್ ಕಾಮನಬಿಲ್ಲಿನಲ್ಲಿ ಹಾಡಿ ನಾಡಿನ ಎಲ್ಲಾ ರೈತರಿಗೆ ನೇಗಿಲ ಯೋಗಿ ಎನ್ನುವ ಮರ್ಯಾದೆ ತಂದುಕೊಟ್ಟದ್ದು ಕುವೆಂಪು ಅವರ ಗೀತೆಯಿಂದಲೇ ಎನ್ನುವುದು ಗೊತ್ತಿಲ್ಲ. ಆದರೆ ಈಗ ಆತನಿಗೆ ಕುವೆಂಪು ರೈತರ ಒಡನಾಡಿ ಎಂದು ಗೊತ್ತಾಗಿದೆ. ಅದರಿಂದಾಗಿಯೇ ಆತ ಇನ್ನಿಲ್ಲದಂತೆ ಪಶ್ಚಾತ್ತಾಪ ಪಡುತ್ತಿದ್ದಾನೆ
ಇದಕ್ಕೆ ಕಾರಣ ಮಾತ್ರ ವಿಚಿತ್ರ ಆದರೂ ನಿಜ. ಏಕೆಂದರೆ ಕಳ್ಳ ರೇವಣಪ್ಪ ಕೂಡಾ ರೈತನೇ. ರೈತ ಎಂದರೆ ಅಂತಿಂತ ರೈತನಲ್ಲ, ಪ್ರಗತಿಪರ ರೈತ. ತನ್ನ ಹೊಲದಲ್ಲಿ ಇತರ ರೈತರಿಗೆ ಮಾದರಿಯಾಗುವಂತೆ ಬೆಲೆ ಬೆಳೆದಿದ್ದಾನೆ. ಅದಕ್ಕಾಗಿ ಜಿಲ್ಲಾ ಆಡಳಿತದಿಂದ ಪ್ರಶಂಸೆ, ಪುರಸ್ಕಾರ ಪಡೆದಿದ್ದಾನೆ.
ಈಗ ಆತನಿಗೆ ರೈತನಾಗಿ ತಾನು ಒಬ್ಬ ರೈತ ಪ್ರೇಮಿಯ ಮನೆಗೆ ಕನ್ನ ಹಾಕಿದ್ದೇನೆ ಎನ್ನುವುದು ಗೊತ್ತಾಗಿದೆ ಪ್ರತೀ ವಿಚಾರಣೆಯಲ್ಲೂ ಆತ ಅದನ್ನೇ ಪಶ್ಚಾತ್ತಾಪದಿಂದ ನೊಂದು ನುಡಿಯುತ್ತಿದ್ದಾನೆ ಎನ್ನುವುದು ತನಿಖಾಧಿಕಾರಿಗಳ ವಿವರ.





0 Comments