BIG BREAKING NEWS: ‘ಟೈಮ್ಸ್ ನೌ’ನಿಂದ ಅರ್ನಬ್ ಹೊರಕ್ಕೆ..

download-5

‘ಟೈಮ್ಸ್ ನೌ’ನಿಂದ ಅರ್ನಬ್ ಹೊರಕ್ಕೆ..

ಹೌದು, ಹಾಗಂತ ಟೈಮ್ಸ್ ನೌ ನಿಂದ ಹೊರಬಿದ್ದಿರುವ ಸುದ್ದಿ ತಿಳಿಸಿದೆ.

ಇಂದು ಸಂಜೆ ನಡೆದ ಸಂಪಾದಕೀಯ ಸಭೆಯಲ್ಲಿ ಅರ್ನಾಬ್ ತಾನು ಪ್ರಧಾನ ಸಂಪಾದಕ ಹಾಗೂ ಸುದ್ದಿ ವಿಭಾಗದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಆದರೆ ತಾವು ಟೆಲಿವಿಷನ್ ಪತ್ರಿಕೋದ್ಯಮದಲ್ಲೇ ಮುಂದುವರಿಯುವುದಾಗಿ ಸಹಾ ಅವರು ತಿಳಿಸಿದ್ದಾರೆ ಎಂದು ‘ಅವಧಿ’ ಯ ಮೂಲಗಳು ಖಚಿತಪಡಿಸಿವೆ

ಟೆಲಿವಿಷನ್ ಪತ್ರಿಕೋದ್ಯಮದ ವಾಚಾಳಿ, ಬಾಯಾಳಿ ಎಂದೆಲ್ಲಾ ಹೆಸರಾಗಿದ್ದ- ದ್ವೇಷ, ಪ್ರೀತಿ ಎರಡನ್ನೂ ದೇಶಾದ್ಯಂತ ಗಳಿಸಿದ್ದ ಅರ್ನಾಬ್ ಅವರ ಈ ತೀರ್ಮಾನ ಹಲವರಿಗೆ ‘ಷಾಕ್’

ಖಚಿತವಾಗದ ಮೂಲಗಳ ಪ್ರಕಾರ ಅರ್ನಾಬ್

ರಾಜೀವ್ ಚಂದ್ರಶೇಖರ್ ಅವರ ಜೊತೆ ಸೇರಿ

ಹೊಸ ಚಾನಲ್ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ 

ಟೆಲಿವಿಷನ್ ಪತ್ರಿಕೋದ್ಯಮಕ್ಕೆ ಹೊಸ ವ್ಯಾಕರಣ ಬರೆದದ್ದು, ಅದು ಯಶಸ್ಸು ತಂದುಕೊಡುತ್ತದೆ ಎನ್ನುವುದನ್ನು ಸಾಬೀತಪಡಿಸಿದ್ದು ಅರ್ನಾಬ್. ಮಾರ್ಗ ಯಾವುದಾದರೂ ಸರಿ, ಗುರಿ ಮುಖ್ಯ ಎನ್ನುವಂತೆ ಟಿ ಆರ್ ಪಿ ಗಳಿಸುವ ಗುರಿ ಮಾತ್ರ ಇರಿಸಿಕೊಂಡು ಎಲ್ಲರನ್ನೂ ಬಾಯಿ ಬಡಿಯುತ್ತಾ, ಸರ್ಕಾರದ ಪರವಾಗಿ ಅತಿ ವಿನಯಶೀಲವಾಗಿ ವರ್ತಿಸುತ್ತಾ ಅರ್ನಾಬ್ ಅನಿವಾರ್ಯ ಮಾದರಿ ಎನ್ನುವಂತಾಗಿ ಹೋಗಿದ್ದರು

ಈ ಮಾದರಿಯೇ ಸರಿಯಾದ ಮಾದರಿ ಎನ್ನುವಂತೆ ಉಳಿದ ಚಾನಲ್ ಗಳೂ ಸಹಾ ಹಿಂಬಾಲಿಸಲು ಆರಂಭಿಸಿದ್ದವು

ಟೈಮ್ಸ್ ನೌ ಮಾತ್ರವಲ್ಲದೆ ತಾವು ಪ್ರಧಾನ ಸಂಪಾದಕರಾಗಿದ್ದ ‘ಇ ಟಿ ನೌ’ ಗೆ ಸಹಾ ಅವರು ರಾಜೀನಾಮೆ ನೀಡಿದ್ದಾರೆ

UPDATE

ಈ ಮಧ್ಯೆ ARNAB IS BACKಎನ್ನುವ ಪ್ರೊಮೊ ಹಾಗೂ ಟ್ವೀಟ್ ಸಹಾ ಕಾಣಿಸಿಕೊಂಡಿದೆ

e41347a1-09ed-45c4-9875-ec616f360bb8 7c99558f-8f3a-4c98-961d-5f797716cc9b

arnab

arnab modi

arnab interview satish acharya

arnab interview

 

‍ಲೇಖಕರು Admin

November 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Anonymous

    ಏನಾದರೂ ಈ ಅರಚೋರಾಯ ಹೋಗಬಾರದು. ಇತ್ತ ಈ ರಾಯರು ಅರಚ್ತಾ ಇರಬೇಕು. ಅತ್ತ ದೇವಿ ಬರ್ಕಾ ಅವರು ಕೊಚ್ತಾ ಇರಬೇಕು. ಅದೇ ಬ್ಯೂಟಿ ಆಫ್ ಮಾಧ್ಯಮಪ್ರಭುತ್ವ .

    ಪ್ರತಿಕ್ರಿಯೆ
  2. Prabhakar joshi

    ಅರ್ನಾಬ್ ಅರಚುವಿಕೆಯಿಂದ ಕೆಲಕಾಲ ದೂರವಿರಬಹುದು. ಆದ್ಮಿ ಆದತ್ ಸೆ ಮಜಬೂರ್ ಹೋತಾ ಹೈ..

    ಪ್ರತಿಕ್ರಿಯೆ
  3. nempe devaraj

    ಅರ್ನಾಬ್ ಗೋಸ್ವಾಮಿ ಎಂಬ ಅರಚಾಟದ ಯಂತ್ರ ಹೊರ ಹೋದ ಮೇಲೆಯೂ ಒಂದಷ್ಟು ಕಾಲ ಇಡೀ ಟಿ.ವಿ ಪ್ರಪಂಚ ಅದೇ ಗುಂಗಲ್ಲಿ ಇರುತ್ತದೆ. ತುರ್ತು ಪರಿಸ್ಥಿತಿಯ ನಂತರ ಇಂಡಿಯಾದಲ್ಲಿ ವ್ಯಕ್ತಿ ಸ್ವಾತಂತ್ರ್ಯ ದಮನಗೊಂಡ ಒಳ್ಳೆಯ ಉದಾಹರಣೆ ಇದ್ದರೆ ಅದು ಅರ್ನಾಬ್ ಕಿರುಚಾಟ.ಒಬ್ಬ ಜನಸಾಮಾನ್ಯ ಮತ್ತು ಮಾಧ್ಯಮ ಎರಡಕ್ಕೂ ಒಂದೇ ಅಭಿಪ್ರಾಯ ಸ್ವಾತಂತ್ರ್ಯ ನೀಡಲಾಗಿದೆ ಎಂಬ ಪ್ರಾಥಮಿಕ ಪರಿಜ್ಞಾನವೂ ಇಲ್ಲದ ಮನುಷ್ಯ..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: