ನೀವು ನಂಬಲೇಬೇಕು ಈತ ಕನ್ನಯ್ಯ ಅಂತ ಹೇಳಿದ್ರೆ..
ಸುಮ್ನೆ ಯಾಕೆ ಕಾಲೆಳಿತೀರಿ ಅಂತೀರಾ ?
ಬುಲೆಟ್ ಪ್ರೂಫ್ ಜಾಕೆಟ್, ತಲೆಗೆ ಪೋಲೀಸ್ ಹೆಲ್ಮೆಟ್..
ಎಲ್ಲೋ ನಡೀತಿರೋ ದಂಗೆಯನ್ನ ಹತ್ತಿಕ್ಕೋದಿಕ್ಕೆ ಅಂತ ಬಂದಿರೋ ಕಟ್ಟುಮಸ್ತು ಪೋಲೀಸರನ್ನ ತೋರಿಸಿ ನಮಗ್ಯಾಕೆ ಯಾಮಾರಿಸ್ತೀರಿ?
ಇಲ್ಲ, ಇಲ್ಲ, ಇಲ್ಲ..
ಯಾವಾಗ ಪಾಟಿಯಾಲ ಕೋರ್ಟ್ ನಲ್ಲಿ ಕನ್ನಯ್ಯನ ಮೇಲೆ ಹಲ್ಲೆ ಆಯ್ತೋ
ಆಗ ಪೊಲೀಸರು ಮಾಡಿದ ಬದಲಿ ಪ್ಲಾನ್ ಇದು
ಕೋರ್ಟ್ ಗೆ ಕನ್ನಯ್ಯ ಕುಮಾರ್ ನ ಕರೆ ತರುವಾಗಲೇ ಲಾಯರ್ ಗಳು ಆತನ ಮೇಲೆ ಹಲ್ಲೆ ಮಾಡಿದ್ರು
ನಂತರ ಕೋರ್ಟ್ ನಿಂದ ಹೋಗುವಾಗ ಅವನನ್ನ ಮುಗಿಸೇ ಬಿಡ್ತೀವಿ ಅನ್ನೋ ಥರಾ ೨೦೦ ಕ್ಕೂ ಹೆಚ್ಚು ಲಾಯರ್ ಗಳು ಕೋರ್ಟ್ ಬಾಗಿಲಲ್ಲಿ, ಗೇಟ್ ಬಳಿ ಕಾಯ್ತಾ ಇದ್ದರು
ಆಗ ಪೋಲೀಸ್ ಪ್ರಧಾನ ಕಚೇರಿಯಲ್ಲಿ ತುರ್ತು ಸಭೆ ನಡೀತು . ಕನ್ನಯ್ಯನಿಗೆ ಏನಾದರೂ ಆದ್ರೆ ದೇಶ ಉರಿಯುತ್ತೆ ಅಂತ ಗೊತ್ತಾಗಿತ್ತು ಆಗ್ಲೇ ಈ ಪ್ಲಾನ್ ಬಂದದ್ದು
ತಕ್ಷಣವೇ ೫೦ ಜನರಿಗೆ ಆಗುವಷ್ಟು ಯೂನಿಫಾರ್ಮ್ ಕಳಿಸಿ ಅದರಲ್ಲಿ ಒಂದು ಕನ್ನಯ್ಯನಿಗೆ ಹಾಕಿಸಿ ಆತನೂ ಪೋಲೀಸ್ ಅನ್ನೋ ಹಾಗೆ ಮಾಡಿ ಹೊರಕ್ಕೆ ಎಸ್ಕೇಪ್ ಮಾಡಿಸಲಾಯಿತು






ನಮ್ಮ ಯೋಗ್ಯತೆ ಇದು. ಅಪರಾಧಿಗೂ ನ್ಯಾಯ ಕೇಳುವ ಹಕ್ಕು ಕೊಟ್ಟ ಸಂವಿಧಾನ ನಮ್ಮದು ಕರಿ ಕೋಟಿನವರು ಮಾಡುವ ಹಲ್ಲೆಗೆ ಬೆದರಿ ಪೋಲೀಸರು ವೇಷ ಮರೆಸುತ್ತಾರೆ. ಹಲ್ಲೆ ಮಾಡಿದವರ ಮೇಲೆ ಯಾವ ಕ್ರಮವೂ ಇಲ್ಲ….ಜೈ ಭಾರತ ಮಾತೆ
ಅದು ಹಾಗೇನೇಹುಟ್ಟು ಕುರುಡರ ರಾಜ್ಯದಲ್ಲಿ ಒಕ್ಕಣ್ಣಿನವ ಐಬು