ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ATM ನೋಡಿ ಜುಂ ಜುಂ..

whatsapp-image-2016-12-12-at-12-13-52-pm

ಬಿ ವಿ ಭಾರತಿ 

ಅನಿವಾರ್ಯ ಕಾರಣಕ್ಕೆ ವಾಕಿಂಗ್ ನಿಲ್ಲಿಸಿ ಎರಡು ತಿಂಗಳಾಗಿ ಹೋಗಿತ್ತು.

ಸೋಮಾರಿತನಕ್ಕೆ ಒಗ್ಗಿಹೋದ ಮನಸ್ಸನ್ನು ಒದ್ದು ನೆನ್ನೆಯಿಂದ ಮತ್ತೆ ಶುರು ಮಾಡಿದೆ. ಆದರೆ ದೇಹ ಇನ್ನೂ ಮಾತು ಕೇಳ್ತಿಲ್ಲ. ಹಾಗಾಗಿ 8th ಮೇನ್ ಗೆ ಬರುವುದರಲ್ಲಿ ಹೆಣ ಬಿದ್ದುಹೋಗಿತ್ತು.

ಕಾಲೆಳೆದುಕೊಂಡು ಬರುತ್ತಿರುವಾಗಲೇ ಎದುರಿಂದ ಬರ್ತಿದ್ದ ನಾಲ್ಕು ದ್ವಿಚಕ್ರಗಳ ಸವಾರರು ಇದ್ದಕ್ಕಿದ್ದ ಹಾಗೆ ಎಡಗಡೆಗೆ ನೋಡ್ತಾ ಗಾಡಿ ರಸ್ತೆ ಬದಿಗೆ ತಂದು ಗಕ್ಕಂತ ಎದುರಿಗೇ ನಿಲ್ಲಿಸಿಬಿಟ್ಟರು.

ಥು ಎಷ್ಟು ಕೆಟ್ದಾಗಿ ಡ್ರೈವ್‌ ಮಾಡ್ತಾರೆ ಅಂತ ಬಯ್ದುಕೊಳ್ತಾ ಕೆಕ್ಕರಿಸಿ ನೋಡಿದರೆ ಅವರ ಗಮನವೆಲ್ಲ ಮತ್ತೆಲ್ಲೋ ಕೇಂದ್ರೀಕೃತವಾಗಿತ್ತು.

ಅಂಥ ಅದ್ಭುತ ಏನಿರಬಹುದು ಅಂತ ನೋಡಿದರೆ SBI ನ ATM ನಲ್ಲಿ ಕೇವಲ ಒಂದೇ ಗಿರಾಕಿ ಹಣ ತಗೊಳ್ತಿದ್ದು, Q ಇರಲಿಲ್ಲ … ಅಷ್ಟೇ!

ಪಾಪ ಹುಡುಗರು ಎಷ್ಟು ಮುದ್ದಾಗಿ ಹೆಣ್ಣೈಕ್ಳನ್ನ ನೋಡ್ಕೊಂಡು ಹೀರೋಗಳ ಥರ ಓಡಾಡ್ತಿದ್ದವು  ATM ನೋಡಿ ರೋಮಾಂಚನವಾಗೋ ಸ್ಥಿತಿ ಬಂತಲ್ಲಾ ಪಾಪ ಅಂದ್ಕೊಂಡೆ …ರೋಮಾಂಚನವಾಗೋ ಸ್ಥಿತಿ ಬಂತಲ್ಲಾ ಪಾಪ ಅಂದ್ಕೊಂಡೆ …

corruption

‍ಲೇಖಕರು Admin

12 December, 2016

1 Comment

  1. ಶಮ, ನಂದಿಬೆಟ್ಟ

    ಇಂಥವೆಲ್ಲ ನೀ ಮಾತ್ರ ಬರಿಯೋಕ್ ಸಾಧ್ಯ ತಾಯೀ.. ಎಲ್ಲಿ ಆ ಬರಿಯೋ ಕೈಯನ್ನ ಒಸಿ ನನ್ ತಲೆ ಮೇಲಿಕ್ಕು.. ನಾನೂ ಚೂರು ಪಾರು ಬರಿಯೋ ಹಾಗಾಗ್ಲಿ ಇನ್ನಾದ್ರೂ.. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading