ಈ ದೇಶದವನೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಏನು ಮಾಡಲಿ? ನನ್ನ ಇಳಿವಯಸ್ಸಿನಲ್ಲಿ ಇದನ್ನೆಲ್ಲ ನಿಸ್ಸಹಾಯಕನಾಗಿ ನೋಡುವ ಸ್ಥಿತಿ ಬಂತಲ್ಲ! ಸುಸ್ತಾಗಿಹೋಗಿದ್ದೇನೆ. ಮೂರು ಹುಡುಗಿಯರ ತಂದೆ ನಾನು. ನನ್ನ ಮಕ್ಕಳೂ ಕೂಡ ಪುರುಷಾಧಮರ ಕೈಯಲ್ಲಿ ಸಾಕಷ್ಟು ಬವಣೆ ಅನುಭವಿಸಿದ್ದಾರೆ. ಈಗಿನ್ನು ಮುಂದಿನ ಜನಾಂಗವಾದರೂ ಸಕಾರಾತ್ಮಕವಾಗಿ ಶಾಲೆ ಕಾಲೇಜುಗಳಿಂದಲೇ ಸಮಾನತೆ, ಸ್ವಾತಂತ್ರ್ಯ, ಸ್ತ್ರೀಗೌರವ ಮಂತಾದ ಮೌಲ್ಯಗಳನ್ನು ಅಭ್ಯಾಸ ಮಾಡುವ, ಇವನ್ನು ಕಾಪಾಡಲು ಶಪಥ ತೊಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ. ಸ್ತ್ರೀಯರ ಅಂಗಾಂಗಳನ್ನು ಕಾಮಪ್ರಚೋದಕವಾಗಿ ಬಳಸುವ ಎಲ್ಲಾ ಫಿಲ್ಮುಗಳನ್ನೂ ಜನ ಬಹಿಷ್ಕರಿಸಬೇಕು. ಯಾವುದೇ ವಿಷಯದಲ್ಲಿ ಸಂಶಯ ಬಂದಾಗ ಸಂಶಯದ ಲಾಭವನ್ನು ಸ್ತ್ರೀಯರಿಗೆ ಕೊಡಬೇಕು. ಪಾಪಿಗಳಿಗೆ ಜೀವಾವಧಿ ಶಿಕ್ಷೆಯೆಂದರೆ ಅವರು ಸಾಯುವ ತನಕ ನೀಡಬೇಕು. ಅವರಿಗೆ ಯಾವುದೇ ಪರೋಲ್ ಗಿರೋಲ್ ಸಿಗಬಾರದು. ಗ್ಯಾಂಗ್ ರೇಪ್ ಮತ್ತು ಒಂಟಿ ರೇಪ್, ಎಲ್ಲಾ ತರದ ರೇಪುಗಳಿಗೂ ಕಠಿಣವಾದ ಶಿಕ್ಷೆ ವಿಧಿಸುವುದು ಕಡ್ಡಾಯವಾಗಬೇಕು; ಅರ್ಥಾತ್ ಇದರಲ್ಲಿ ನ್ಯಾಯಾಧೀಶರು ಯಾವುದೇ ಕಾರಣಕ್ಕೆ ರಿಯಾಯಿತಿ ತೋರಿಸುವಂತೆ ಆಗಬಾರದು.
ರೇಪ್ ಕಾನೂನಿನ ಕೆಳಗೆಯೇ ಹುಡುಗಿಯರನ್ನು ಚುಡಾಯಿಸುವುದು, ಮದುವೆಗೆ ಒತ್ತಾಯಿಸುವುದು, ಯಾವುದೇ ತರದ ಪೀಡನೆ, ಆಸಿಡ್ ಧಾಳಿ ಮುಂತಾದ ಅಪರಾಧಗಳನ್ನೂ ಪರಿಗಣಿಸಬೇಕು. ಯಾಕೆಂದರೆ ಇವೆಲ್ಲವೂ ಸ್ವಾತಂತ್ರ್ಯ ಹರಣವೇ ಸರಿ.
ರೇಪ್ ಅತ್ಯಂತ ಘೋರವಾದ ಅಪರಾಧವೆಂದು ಪರಿಗಣಿಸಲ್ಪಡಬೇಕು.
ಕೆ.ವಿ. ತಿರುಮಲೇಶ್
Loading...
ಭಾರತೀಯ
on 29 December, 2012 at 4:55 PM
ರೇಪ್ ಅಪರಾಧಿಗಳನ್ನು ಭಯೋತ್ಪಾದನೆಯಡಿ ವಿಚಾರಣೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕು … ಇದು ಜನರಲ್ಲಿ ಭಯದ ವಾತಾವರಣವನ್ನು ಮೂಡಿಸಿ ಸಾಮಾಜಿಕ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಈಗೀಗ ಈ ಅಪರಾಧಿಗಳಿಗೆ ಗಂಡಸು, ಹೆಂಗಸು, ಚಿಕ್ಕವರು, ದೊಡ್ಡವರು, ಹುಡುಗಿಯರು, ಕೂಸುಗಳು, ಮುದುಕರು, ವಿವಾಹಿತರು ಎನ್ತೆಂಬ ಭೇದವಿಲ್ಲ. ಇದರಿಂದ ಯಾವುದೇ ಮನುಷ್ಯನೂ (ಹುಡುಗನ/ಹುಡುಗಿಯ ಅಕ್ಕ/ತಂಗಿ/ಅಣ್ಣ/ತಮ್ಮ/ತಂದೆ/ತಾಯಿ etc ಎತ್ಚ್) ನಿಶ್ಚಿಂತೆಯಿಂದ ಜೀವನ ನಡೆಸುವುದು ಸಾಧ್ಯವಿಲ್ಲ. ಒಂದಿಷ್ಟು ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದರೆ ರಾಷ್ಟ್ರಕ್ಕಾಗುವ ನಷ್ಟವೇನು? ಇದರಲ್ಲಿ ಮಾನವ ಹಕ್ಕುಗಳ ಸಂಘಟನೆಗಳೂ ವಿಚಾರ ಮಾಡುವ ಅಗತ್ಯವಿದೆ. ಸುಮ್ಮನೆ ಮರಣದಂಡನೆಯನ್ನು ಬೇಡವೆನ್ನುವವರು ಬಲಿಯಾದ ವ್ಯಕ್ತಿಗಳ ಬಗೆಗೂ ಚಿಂತಿಸಬೇಕು.