ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

22ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ…

ಸೇಡಂ, ಅ.8- ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಲ್ಪಡುವ ರಾಜ್ಯ ಮಟ್ಟದ ’ಅಮ್ಮ ಪ್ರಶಸ್ತಿ’ಗೆ 22ನೇ ವರ್ಷದ ಸಾಲಿಗಾಗಿ ಪ್ರಕಟಿತ ಕೃತಿಗಳನ್ನು ಆಹ್ವಾನಿಸಲಾಗಿದೆ.

ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ಅಮ್ಮನ ಸ್ಮರಣೆಯಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಕಳೆದ 22 ವರ್ಷಗಳಿಂದ ನಿರಂತರವಾಗಿ ನಿಶ್ಚಿತ ದಿನಾಂಕ ಹಾಗೂ ನಿಶ್ಚಿತ ಸ್ಥಳದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡುತ್ತಾ ಬರುತ್ತಿರುವ ’ಅಮ್ಮ ಪ್ರಶಸ್ತಿ’ಗೆ ಈ ಬಾರಿ’ 22ನೇ ವರ್ಷದ ಸಂಭ್ರಮ’ವಾಗಿದ್ದು, ಅಮ್ಮ ಪ್ರಶಸ್ತಿಗಾಗಿ ಲೇಖಕರು ತಮ್ಮ 2021-22 ರಲ್ಲಿ ಪ್ರಕಟವಾದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಎರಡು ಪ್ರತಿಗಳನ್ನು ಕಳಿಸಬಹುದು ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ತಿಳಿಸಿದ್ದಾರೆ.

ಪ್ರಕಟಿತ ಕೃತಿಗಳನ್ನು ಅಮ್ಮ ಪ್ರಶಸ್ತಿಗಾಗಿ ಎಂದು ಬರೆದು, ಅಕ್ಟೋಬರ್ 30, 2022 ರೊಳಗಾಗಿ ಕಳುಹಿಸಲು ಕೋರಲಾಗಿದೆ. ನವೆಂಬರ್ 26 ರಂದು ಸೇಡಂ ಪಟ್ಟಣದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ’ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪುಸ್ತಕ ಕಳಿಸುವ ವಿಳಾಸ:
ಮಹಿಪಾಲರೆಡ್ಡಿ ಮುನ್ನೂರ್,
ಅಮ್ಮ ನಂ.೩೩, ರಾಮಚಂದ್ರ ಬಡಾವಣೆ,
ಸೇಡಂ – 585 222,
ಕಲಬುರಗಿ ಜಿಲ್ಲೆ.

ಹೆಚ್ಚಿನ ಮಾಹಿತಿಗೆ : 9731666052, 7349460502 ಸಂಪರ್ಕಿಸಬಹುದು.

‍ಲೇಖಕರು Admin

9 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading