15th BIFFES: ದಿನ-4: ‘ಸ್ವರ್ಗ’ ಸಿಗಲಿಲ್ಲ

ಜಯರಾಮಾಚಾರಿ

**

‘ಸ್ವರ್ಗ’ ಸಿಗಲಿಲ್ಲ –

ತುಂಬ ಜನರ ಮೆಚ್ಚುಗೆಗೆ ಒಳಗಾದ ‘ಪ್ಯಾರಡೈಸ್’ ಅಷ್ಟೊಂದು ಹೊಗಳಿಸಿಕೊಂಡಿದ್ದು ಯಾಕೆ ಎಂದು ಗೊತ್ತಾಗಲಿಲ್ಲ

೨೦೨೨ ರಲ್ಲಿ ಶ್ರೀಲಂಕಾ ದಿವಾಳಿಯೆದ್ದ ಸಮಯದಲ್ಲಿ ಭಾರತದಿಂದ ಐದನೇ ವಾರ್ಷಿಕೋತ್ಸವ ಆಚರಿಸಲು ಹೋದ ದಂಪತಿಗಳ ಐಪೋನು ಐಪ್ಯಾಡ್ ಅಲ್ಲಿ ಯಾರೋ ಕದ್ದು ಹೋಗುತ್ತಾರೆ, ಅದರ ವಿಚಾರಣೆಯಲ್ಲಿ ಹಳ್ಳಿಯವರು ಸಿಕ್ಕಿಬಿದ್ದು ಅದರಲ್ಲೊಬ್ಬ ಸತ್ತು ಹೋಗುತ್ತಾನೆ, ಕೊನೆಗೆ ಏನಾಗುತ್ತದೆ ಅನ್ನುವುದೇ ಸಿನಿಮಾ.

ಸಿನಿಮಾದ ಅಂತ್ಯ ಅಷ್ಟೊಂದು ಕನ್ವಿನ್ಸ್ ಆಗಲಿಲ್ಲ. ಎಲ್ಲ ಸಿನಿಮಾಗಳು ಎಲ್ಲರಿಗೂ ಒಂದೇ ರೀತಿ ಕನೆಕ್ಟ್ ಆಗೊಲ್ಲ

ಹಾಗಾಗಿ ನನಗೆ ಆಸೆ ಪಟ್ಟು ಹೋದರೆ ಸ್ವರ್ಗ ಸಿಗಲಿಲ್ಲ !

ಸ್ನೇಹಕ್ಕೆ ಸ್ನೇಹ –

ಲಾಸ್ಟ್ ಸೋಲ್ಜ್ ಮತ್ತು ಮೀ ಕ್ಯಾಪ್ಚನ್ ಸ್ನೇಹದ ಬಗ್ಗೆ ಬಂದ ಚೆಂದದ ಚಿತ್ರಗಳು ಒಂದು ಅಮೆರಿಕಾದ ಸಿನಿಮಾ ಮತ್ತೊಂದು ವೋಲ್ಫ್‌ ಸಿನಿಮಾ.

ಸೋಲ್ ಎನ್ನುವ ಯುವ ರ್ಯಾಪರ್ ತನ್ನ ಜೀವದಂತ ಗೆಳೆಯನ ಜೊತೆ ಡ್ರಗ್ಸ್ ಮಾರುತ್ತ ಸಿಂಗರ್ ಆಗುವ ವರ್ಲ್ಡ್ ಟೂರ್ ಮಾಡುವ ಆಸೆಯಲ್ಲಿರುತ್ತಾನೆ, ಒಂದು ಕಾನ್ಸರ್ಟಲ್ಲಿ ಪೋಲಿಸರಿಂದ ಬಚಾವಾಗುತ್ತಾನೆ, ಅವನನ್ನು ಬಚಾವು ಮಾಡಿದವರ ಮ್ಯೂಸಿಕ್ ತಂಡದೊಂದಿಗೆ ಸೇರಿಕೊಳ್ಳುತ್ತಾನೆ ಇತ್ತ ಅವನ ಜೀವದ ಗೆಳೆಯ ಆಸ್ಪತ್ರೆ ಸೇರಿಕೊಳ್ಳುತ್ತಾನೆ, ಆತ ಸತ್ತ ದಿನ ಸೋಲೋ ಹೊಸದಾಗಿ ಸೇರಿಕೊಂಡ ಬ್ಯಾಂಡ್ ಜೊತೆ ಪರ್ಫಾರ್ಮ್ ಮಾಡುತ್ತಿರುತ್ತಾನೆ.

ಸ್ನೇಹ, ಬದುಕು, ಬಡತನ, ಹತಾಶೆ, ಗೆಲುವು ಎಲ್ಲವನ್ನೂ ಅತ್ಯದ್ಭುತ ರ್ಯಾಪ್ ಸಂಗೀತದ ಮೂಲಕ ಕಟ್ಟಿಕೊಡುವ ಸಿನಿಮಾ

ಮೀ ಕ್ಯಾಪ್ಟನ್ ಈ ವರ್ಷದ ಬಿಫ್ಫೇಸ್ ಬೆಸ್ಟ್ ಚಿತ್ರಗಳಲ್ಲಿ ಒಂದು, ಸೇಡೌ ಮತ್ತು ಮೌಸ ಎಂಬ ಜೀವದ ಗೆಳೆಯರು ಯೂರೋಪ್ ಸೇರುವ ಕನಸು ಹೊತ್ತು ಸೆನಗಲ್ ಇಂದ ಪರಾರಿಯಾಗುತ್ತಾರೆ. ಅದಾದ ಮೇಲೆ ನಕಲಿ ಪಾಸ್ ಪೋರ್ಟ್, ಮರಳುಗಾಡಿನಲ್ಲಿನ ಮಾಫಿಯ, ಮಾಫಿಯದ ಹಿಂಸೆ ಮಧ್ಯದಲ್ಲಿ ಅವರಿಬ್ಬರೂ ದೂರವಾಗುತ್ತಾರೆ, ಮತ್ತೆ ಒಂದಾದಾಗ ಮೌಸನ ಕಾಲಿಗೆ ಬಂದೂಕಿನ ಗುಂಡು ಹೊಕ್ಕಿರುತ್ತದೆ, ಆಗ ಸ್ನೇಹಿತನಿಗಾಗಿ ಸಣ್ಣ ಬೋಟಿನಲ್ಲಿ ಲಿಬಿಯಾ ಗಡಿ ದಾಟುವ ಚಿತ್ರ.

ಸೇಡೌ ಪಾತ್ರಧಾರಿ ಅದೆಷ್ಚು ಜೀವಿಸಿದ್ದಾನೆಂದರೆ ತೆರೆ ಮೇಲೆ ಅವನನ್ನು ನೋಡುವುದೇ ಸಂಭ್ರಮ, ಕ್ಯಾಮೆರವರ್ಕ್ ಟಾಪ್ ಕ್ಲಾಸ್, ಸಂಗೀತ ಅಷ್ಟೇ ಚೆಂದ ಒಟ್ಟಾರೆ ಒಂದು ಒಳ್ಳೆ ಅನುಭವ ಕೊಡುವ, ಪ್ರೇಕ್ಷಕರಿಂದ ಚಪ್ಪಾಳೆ ಶಿಳ್ಳೆ ಗಿಟ್ಟಿಸಿಕೊಂಡ ಚಿತ್ರ

ಗಣ್ಯರ ಉಪಸ್ಥಿತಿ

ಡಾ.ವಿಜಯಮ್ಮ, ಎಸ್ ದಿವಾಕರ್, ಜಯಶ್ರೀ ಕಾಸರವಳ್ಳಿ, ಭಾರತಿ ಬಿವಿ, ಸಂಧ್ಯಾರಾಣಿ, ಜಯಲಕ್ಷ್ಮಿ ಪಾಟೀಲ್, ನಾಗತಿಹಳ್ಳಿ ಚಂದ್ರಶೇಖರ್ ಡಿಂಗ್ರಿ ನಾಗರಾಜ್, ಅಭಿಮನ್ಯು ಭೂಪತಿ, ಬಾದಲ್ ನಂಜುಂಡಸ್ವಾಮಿ, ಮಂಸೂರೆ ಉಪಸ್ಥಿತಿ ಇತ್ತು

ಮೋಯೇ ಮೋಯೇ ~

ಆದ್ರೂ ಲೈನಲ್ಲಿ ಒಬ್ರು ನಿಂತಿರೋ ಜೊತೆ ಇನ್ನೊಬ್ರು ಸೇರ್ಕಂಡ್ರೆ ಓಕೆ ಒಬ್ರೂ ನಿಂತ್ಕಂಡು ಗ್ಯಾಪ್ ಗ್ಯಾಪಲ್ಲಿ ಹತ್ ಜನ ಸೇರ್ಕಂಡ್ರೆ ಹೆಂಗ್ ಸ್ವಾಮಿ ಜೀವ ತಡ್ಕಳುತ್ತೆ ಅವರಿಂದ ಹತ್ತು ಜನ ಸಿನಿಮಾ ವಂಚಿತರಾದರಲ್ಲ ?!

ಹಾಗೇ ಸೇರಿಕೊಂಡವರು ಸಾಮಾಜಿಕ ಕಳಕಳಿ, ಸಮಾನತೆ, ಅವಕಾಶ ವಂಚಿತ ವರ್ಗದ ಬಗ್ಗೆ ದೊಡ್ಡ ದೊಡ್ಡ ಮಾತುಗಳು ಬೇರೆ ಆಡ್ತಾರೆ. ಅದು ಬೇರೆ ನೆನಪಾಗುತ್ತೆ.

ಮೋಯೇ ಮೋಯೇ ಅಂತ ಇರುತ್ತೆ ಮನಸು

‍ಲೇಖಕರು avadhi

March 4, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: