ಮಾಲತಿ ಶೆಣೈ ಅವರ ‘ನೆನಪಿನ ಸಂಚಿಯಿಂದ‘ ಬ್ಲಾಗ್ ನಲ್ಲಿದ್ದ ಉಪ್ಪಿಟ್ಟು ಮತ್ತೊಂದಿಷ್ಟು potpourriಲೇಖನದಲ್ಲಿ
ಉಪ್ಪಿಟ್ಟಿನ ಕಥೆ ಮಾತ್ರ ಆಯ್ದು ಇಲ್ಲಿ ಇಡಲಾಗಿದೆ
ಇತ್ತೀಚೆಗೆ ನ್ಯು ಯಾರ್ಕ್ ನಲ್ಲಿ ನಡೆದ ಅಡಿಗೆ contest ನಲ್ಲಿ ಉಪ್ಪಿಟ್ಟಿಗೆ $ 100,000 ಬಂದಿದ್ದು ಓದಿದಿರಷ್ಟೆ.
ನಮ್ಮ ಮನೆಯಲ್ಲಿ ಶ್ರೀಕಾಂತ್ ಹಾಗೂ ಮಾಲವಿಕ ಉಪ್ಪಿಟ್ಟು ಪ್ರಿಯರು. ನನ್ನ ಆಸಕ್ತಿ ಅದನ್ನು ಮಾಡಿ ಬಡಿಸುವದರಲ್ಲಿ ಮಾತ್ರ ಸೀಮಿತ. ತಿಂದರೆ ತಿಂದೆ ಇಲ್ಲದಿದ್ದರೆ ಇಲ್ಲ. ಅದು ತಿನ್ನಲೂ ಬೇರೆ ಬೇರೆ style ಗಳಿವೆ. ನಮ್ಮ ಮನೆಯಲ್ಲಿ ಎಲ್ಲರೂ ಅಡಿಗೆ ಮನೆಯಲ್ಲಿ ವಿರಾಜಮಾನರಾದ ಮೇಲೆ ನೆ ನಾನು ಹುರಿದಿಟ್ಟ ಉಪ್ಪಿಟ್ಟಿಗೆ ನೀರು ಹಾಕಿ ರೆಡಿ ಮಾಡುವುದು. ಬಾಣಲೆ ಒಲೆಮೇಲಿಂದ ಇಳಿದ ಕೂಡಲೆ ಬಿಸಿ ಬಿಸಿಯಾದ ಉಪ್ಪಿಟ್ಟನ್ನು ತಿನ್ನಲು ಮಾಲವಿಕ ಇಷ್ಟ ಪಡುತ್ತಾಳೆ. ಕೆಲವೊಮ್ಮೆ ಹಬೆಯಾಡುವ ಉಪ್ಪಿಟ್ಟಿಗೆ ತುಪ್ಪಹಾಕಿ ತಿನ್ನುತ್ತಾಳೆ. ಇಲ್ಲದಿದ್ದಲಿ ಮಿಕ್ಸರ್(ಚೂಡಾ) ಜತೆ, ಇಲ್ಲದಿದ್ದರೆ ಕರಿಬೇವಿನ ಚಟ್ನೀ ಪುಡಿ ಮತ್ತು ಮೊಸರು. ನಾನು ಗೋಡಂಬಿ ಹಾಕಿದರೆ ಅದು deluxe ಅಥವ a-classಉಪ್ಪಿಟ್ಟ್ ಆಗಿ ರೂಪಾಂತರ ಗೊಳ್ಳುತ್ತೆ. ಶ್ರೀಕಾಂತ ಗೆ ಉಪ್ಪಿಟ್ಟಿನ ಜತೆ ಕಲಿಸಿದ ಅವಲಕ್ಕಿ ಇದ್ದರೆ ಸಂತೋಷ- ಅದನ್ನು ಸಿಮೆಂಟ್-ಕಾಂಕ್ರೀಟ್ ಅನ್ನುವ ಬಿರುದು ಬೇರೆ. ಉಪ್ಪಿಟ್ಟಿನ ಜತೆ ಅವಲಕ್ಕಿ ತಿಂದರೆ ಬೇಗ ಹಸಿವೆ ಯಾಗುವುದಿಲ್ಲ ಅಂತ ಅವರೇನೋ ಅನ್ನುತ್ತಾರೆ, ಆದರೆ ನನಗಂತೂ ಉಪ್ಪಿಟ್ಟು ಮಾಡಿದ ದಿನ ಜಾಸ್ತಿ ಹಸಿವು. ಕೆಲವೊಮ್ಮ ಉಪ್ಪಿಟ್ಟಿಗೆ side dish ಆಗೆ ಪೈನ್ ಆಪಲ್ ಪುಡ್ಡಿಂಗ್ ಅಥ್ವಾ ಶಿರಾ ಮಾಡುತ್ತೇನೆ. ಅಂತೂ ನಮ್ಮ ಮನೆಯಲ್ಲಿ ವಾರಕ್ಕೆರಡು ದಿನ ಉಪ್ಪಿಟ್ಟು ಕಟ್ಟಿಟ್ಟ ಬುತ್ತಿ 🙂
ಅಮ್ಮ ಕೆಲ ಸಮಯದ ಹಿಂದೆ 6 ತಿಂಗಳ ಮಟ್ಟಿಗೆ ನನ್ನ ತಂಗಿಯ ಬಳಿಗೆ ಅಮೆರಿಕ ಕ್ಕೆ ಹೋಗಿದ್ದರು. ಆಗ ತಂದೆಯವರನ್ನು ನಾನು ಬೆಂಗಳೂರಿಗೆ ಮತ್ತು ನನ್ನ ತಮ್ಮ ಮುಂಬೈಗೆ ಕರೆದರೂ ಅವರು ಎಲ್ಲೂ ಬರಲು ಒಪ್ಪಲಿಲ್ಲ. ನಮ್ಮ ತಂದೆಗಂತು ಅಡಿಗೆ ಮನೆಗೆ ಹೋಗಿ ಗೊತ್ತೇ ಇರಲಿಲ್ಲ. ಅಮ್ಮ ಕೆಲದಿನಗಳಿಗಾಗುವಷ್ಟು ಪಲ್ಯ ಸಾಂಬಾರ ರೆಡಿ ಮಾಡಿ ಫ್ರಿಜ್ ನಲ್ಲಿ ಹಾಕಿಟ್ಟಿದ್ದರೂ ಅದು ಎಷ್ಟು ದಿನ ನಡೆಯುತ್ತೆ. ಅವರಿರೋದು ಬೆಳಗಾವಿಯಲ್ಲಿ. ಯಾವಾಗ ನೋಡಿದರೂ ಪವರ್ ಕಟ್. ಮನೆಯ ರೂಮು ಗಳಿಗೆ ಇನ್ವರ್ಟರ್ ಸೌಲಭ್ಯವಿದ್ದರು, ಫ್ರೀಜ್ ಗೆ , ಮಿಕ್ಸಿಗೆ ಅದನ್ನು ಅಳವಡಿಸಿರಲಿಲ್ಲ. ಅಮ್ಮ ಅವರಿಗೆ ಕುಕ್ಕರ್ ನಲ್ಲಿ ಅನ್ನ ಬೇಯಿಸುವುದನ್ನು ಕಲಿಸಿ ಕೊಟ್ಟರು. ಮೈಕ್ರೋ ವೇವ್ ನಲ್ಲಿ ಅಡಿಗೆ ಬಿಸಿ ಮಾಡುವುದನ್ನು ಹೇಳಿ ಕೊಟ್ಟರು. ಬೆಳಿಗ್ಗೆ ಅಪ್ಪ ದಿನಾ ಬ್ರೆಡ್ ತಿನ್ನುತ್ತಿದ್ದರು. ಅಮ್ಮನ ಪಲ್ಯ ಸಾಂಬಾರ್ ಮುಗಿದ ಮೇಲೆ ಅಪ್ಪ ಅನ್ನ ಬೇಯಿಸಿ ಅದಕ್ಕೆ ಹಾಲು ಹಾಕ್ಕೊಂಡು ಉಣ್ಣುತ್ತಿದ್ದರು. ಮದ್ಯ ಮಧ್ಯ ಪುರುಸೊತ್ತು ಮಾಡಿಕೊಂಡು ನಾನು ಹೋಗಿ ಬರುತಿದ್ದೆ. ಆಗ ನನಗೆ ಉಪ್ಪಿಟ್ಟಿನ ರಡಿ ಮಿಕ್ಸ್ ಮಾಡಿ ಕೊಡುವ idea ಹೋಳೀತು. ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಗೋಡಂಬಿ ಚೂರು ಒಗ್ಗರಣೆಗಿಟ್ಟು, ಅದರಲ್ಲಿ ಬಾಂಬೆರವೆಯನ್ನು ಹಾಕಿ, ಸಣ್ಣ ಉರಿ ಮೇಲೆ ಹುರಿದು, ಅದು ಗಮ್ಮೆನ್ನುವ ಪರಿಮಳ ಬೀರಿದಾಗ ಉಪ್ಪು ಸಕ್ಕರೆ ಕೊತ್ತಂಬರಿ ಸೊಪ್ಪು ಹಾಕಿ ಇನ್ನೂ ಸ್ವಲ್ಪ ಹೊತ್ತು ಬಾಣಲೆಯಲ್ಲಿ ಹುರಿದೆ. ಪೂರ್ತಿ ತಣ್ಣಗಾದ ಮೇಲೆ ಅದನ್ನು ಡಬ್ಬಿಯೊಳಗೆ ಹಾಕಿಟ್ಟು. ಅಪ್ಪನಿಗೆ ಒಂದು ಗ್ಲಾಸ್ ಉಪ್ಪಿಟ್ಟಿನ ರೆಡಿ ಮಿಕ್ಸ್ ಗೆ ಮೂರು ಗ್ಲಾಸ್ ನೀರು ಕುದಿಸಿ ಹಾಕಲು ಹೇಳಿದೆ. ಅಪ್ಪನಿಗಂತೂ ತುಂಬ ಖುಶಿ. ಎರಡು ದಿನಕ್ಕೊಂದು ಸಲ ಅದನ್ನೆ ಮಾಡಿ ತಿನ್ನುತ್ತಿದ್ದರು. ನನಗೆ ಬೇಜಾರು ಬಂತು. ಅಮ್ಮ ಸೀಸನ್ ನಲ್ಲಿ ಬಟಾಣಿ ಕಾಳನ್ನು (green peas) ನ್ನು freeze ಮಾಡಿಡುತ್ತಾರೆ. ಸ್ವಲ್ಪ ನೀರುಳ್ಳಿ ಟೊಮೇಟೊ, ತುರಿದ ಕ್ಯಾರೆಟ್ ಹಾಕಿ vegetable ಉಪ್ಪಿಟ್ಟು ಹೇಳಿಕೊಟ್ಟೆ. ಅದಾದ ಮೇಲೆ ರೆಡಿ ಮಿಕ್ಸ್ ಗೆ ತರಕಾರಿ ಚೂರು ಬೆರೆಸಿ, ಮೊಸರನ್ನು ಬೆರೆಸಿ, ಒಂಚೂರು ಸೋಡಾ ಪುಡಿ ಬೆರೆಸಿ ರವಾ ಇಡ್ಲಿ ಮಾಡಲು ಕಲಿಸಿದೆ. ಮುಂದೊಮ್ಮೆ ಹೋದಾಗ ಉದ್ದು ಮೈದಾ ದೋಸೆ ಹಿಟ್ಟು ಮಾಡಿ ಕೊಂಡು ಹೋದೆ. ಆ ದೋಸೆ ಬಗ್ಗೆ ಅಂತೂ ಅಪ್ಪ totally mesmerized. ಪೇಪರ್ ತರಹ ತೆಳುವಾದ crisp ದೋಸೆ ಹುಯ್ಯಬಹುದು. ಹಿಂಗಿನ ಚಟ್ನಿ ಇದ್ದರಂತೂ……..ಅಪ್ಪ ನನಗೆ ಫೋನ್ ಮಾಡಿ ಅದನ್ನು ಮಾಡುವ ವಿಧಾನದ ಬಗ್ಗೆ ಕೇಳಿ ತಿಳಿದುಕೊಂಡರು. (ಅದು ನನ್ನ top secret recipe) ಅದರ ರೆಸಿಪಿ ಇಲ್ಲಿ ಬರೆಯಲ್ಲ. ಮುಂದೊಮ್ಮೆ ನಾನು ಮಾಲವಿಕ ಸೇರಿ ಒಂದು restaurant ತೆರೆಯುವವರಿದ್ದೇವೆ. ಆಗ ನೀವೆಲ್ಲ ಬಂದು ಆ ದೋಸೆಯನ್ನು ಸವಿಯಬಹುದು.) ನನ್ನ ಅಮ್ಮ ಮಾಡುವುದಕ್ಕಿಂತ ಚೆನ್ನಾಗಾಗುತ್ತದೆಂದು ಅಪ್ಪನ ಶಿಫಾರಸ್ಸು ಬೇರೆ ಇದೆ ಈ ದೋಸೆಗೆ).ಹೀಗೆ ಆರು ತಿಂಗಳು ಅಪ್ಪನದು ಮಿಕ್ಸ್ ಅನ್ಡ್ ಮ್ಯಾಚ್ ಅಡುಗೆ.
ಅಕ್ಕನ (ಮಾಲವಿಕ) ಕಾಲೇಜು ಮೇಟ್ ಗಳು ಹೆಚ್ಚಾಗಿ northies. ಗೌರವ್ ಮತ್ತು ಹರ್ಷ್ , ಒಂದು ಸಂಜೆ ಹಸಿವೆಯಾದಾಗ ಹೋಟೆಲ್ ಗೆ ಹೋಗಿ ಮೆನ್ಯು ನಲ್ಲಿದ್ದ ಚೌ ಚೌ ಭಾತ್ ಗೆ ಆರ್ಡರ್ ಕೊಟ್ಟರಂತೆ. ನಂತರ ಮಾಲವಿಕನಿಗೆ ಫೋನ್ ಮಾಡಿ ’ಕ್ಯಾ ಯಾರ್! ಹಮ್ ನೆ ಸಮಝಾ ಚೌ ಚೌ ಭಾತ್ ಯಾನೆ ಕೊಯಿ ಚೈನೀಸ್ ಡಿಶ್ ಮಿಲೆಗಾ ಖಾನೆ ಕೆ ಲಿಯೆ, ಯೆ ಕ್ಯಾ ಯೆ ತೊ ಉಪ್ಮಾ, ಸುಜಿ ಕಾ ಸ್ವೀಟ್ ಔರ್ ಮಿಕ್ಸರ್ ದಿಯಾ ಹೈ…








madam.nimma lekhana tumba chennagide, nanu primary shale oduttiddaga mekkejola uppittu tumba kushiyagi tinnuttidde,namma maneya nayi kuda shalege bandu uppittu tinnutittu,but amele nanu mcom maduvaga bahu sari uppitttu maduttidde later days uppittu kanduhididavaru yaro gottadare avarnnu shoot maduvastu besaragondidde adare nijavaglu heltini uppittu madodu bahala sulaba swalpa echhara tagondu madidre ondistu kotumbri,ondistu hasi kobri turudu haki uppittu madi onchru nimbe hannu hindre uppitte holige uta vaditu, nimma lekhanakke abinandanegalu d.ravi varma.uppittu priya
hahaha thank you upittu priya Ravivarma avare!!!