
ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಶತಮಾನ ತುಂಬುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ 2015ನೇ ವರ್ಷವನ್ನು ‘ಕನ್ನಡ ವರ್ಷ-2015’ ಎಂದು ಘೋಷಿಸಬೇಕು. ಈ ವರ್ಷದುದ್ದಕ್ಕೂ ವಾರದಲ್ಲಿ ಒಂದು ದಿನವನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಛೇರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಕನ್ನಡ ವರ್ಷದ ಆಚರಣೆಗಾಗಿ ಮೀಸಲಿಡಬೇಕು. ಆ ದಿನವನ್ನು ‘ಕನ್ನಡ ದಿನ’ ಎಂದು ಕರೆಯಬೇಕು. ಆ ದಿನದಂದು ಕನ್ನಡ ಭಾಷೆ, ಸಾಹಿತ್ಯ, ಕಲೆ, ಶಿಕ್ಷಣ ಮುಂತಾದ ಕ್ಷೇತ್ರಗಳ ಸಂಬಂಧವಾಗಿ ಚರ್ಚೆ, ಉಪನ್ಯಾಸ, ವಿಚಾರ ಸಂಕಿರಣ ಮುಂತಾದ ಸಾಂಸ್ಕೃತಿಕ ಹಾಗು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಬೇಕು.
೨೦೧೫ ಕನ್ನಡ ವರ್ಷವಾಗಲಿ
ನಿಮಗೆ ಇವೂ ಇಷ್ಟವಾಗಬಹುದು…




0 Comments