ಹೊಸ ಜಾಡಿನಲ್ಲಿ……………ಮತ್ತೆ….ಮತ್ತೆ …………
ಓಡುವುದೇ ಕಾಲ…ಇಲ್ಲಾ ಮೆಲ್ಲಕ್ಕೆ ನಡೆವುದೇ
ಕಾಲದ ಗರ್ಭದಲ್ಲಿ ಕೈ ಕಾಲು ಸೆಟೆದು ನಾವಿರೋವಾಗ
ದೇವನೇ ಬಿಡಿಸು ನಮ್ಮ ಆಲಸ್ಯ..ಈ ಮೈ ಮುರಿ
ಕು೦ಡೆ ತುರಿಸುತ್ತಾ ಆಕಳಿಸಿ ಕಣ್ಣುಜ್ಜೋ ಈ ಪರಿ
ಇನ್ನಾದರೂ ಕಣ್ ಬಿಡಿಸಿ ನೆಟಿಕೆ ತೆಗೆದು
ಮೈಯೊಳಗೆ ತು೦ಬಿದ ಜಡತ್ವ ಝಾಡಿಸಿ
ತುದಿಗಾಲ ಮೇಲೆ ಓಡುವಾ ಪರಿಯ ತೋರಿಸು
ಹಳೆಯ ಹಲವರು ನಡೆ ಮೂಡಿಸಿದ್ದ ದಾರಿ ಮೇಲಲ್ಲ..
ಯಾರೂ ನಡೆಯದ ಹೊಸ ಅನಿರೀಕ್ಷಿತದಲ್ಲಿ
ಸವಕಲಾಗದ ಹೊಸ ಜಾಡಿನಲ್ಲಿ..
ಕೈಹಿಡಿದು ಆಧರಿಸದಿರು..ಮತ್ತೆ ಹೊತ್ತೊಯ್ಯದಿರು
ಬೇಕಿದ್ದರೆ ಇರಲಿ ಬೆನ್ನ ಮೇಲೆ ಕೊರಡು
ಜೊತೆಗೆ ಬಾರಿಸು ಆ ಹಿ೦ಬದಿಗೆರಡು
ನಾವೇ ಎದ್ದು ನಾವಾಗಿಯೇ ಹೆಜ್ಜೆ ಹಾಕುವ೦ತೆ
ನಮ್ಮದೇ ಹಾದಿ ಮೂಡಿಸಿ ನಡೆವ೦ತೆ
ಮಾಡು ಓ ಮೇಲಿನವನೆ…






0 Comments