ಪಿ ಸಾಯಿನಾಥ್ ಇಷ್ಟವಾಗುವುದೇ ಇದಕ್ಕೇ. ವಿ ವಿ ಗಿರಿ ಮೊಮ್ಮಗ ಎಂಬ ಕೋಡು ಇಟ್ಟುಕೊಂಡು ನಡೆದಾಡಿದವರಲ್ಲ. ‘ಬ್ಲಿಟ್ಜ್’ ಪತ್ರಿಕೆ ಝಗಮಗ ಅಂತಾ ಹೊಳೀತಾ ಇದ್ದ ದಿನಗಳಲ್ಲೇ ಈ ಪೇಜ್ ೩ ಜರ್ನಲಿಸಂ ನನಗಲ್ಲ ಅಂತ ದೊಡ್ಡ ಪ್ಯಾಕೆಟ್ ಸಂಬಳಕ್ಕೆ ಗುಡ್ ಬೈ ಹೇಳಿ ಎದ್ದು ಬಂದವರು. ಮುಂಬೈನ ಮಹಾನ್ ಅಸೈನ್ಮೆಂಟ್ ಗಳು ಅವರನ್ನ ಯಾವತ್ತೂ ಅಲುಗಾಡಿಸಲಿಲ್ಲ. ನನ್ನ ಕೆಲಸ ಇರೋದು ಇಲ್ಲಲ್ಲ ಅಂತ ಅವ್ರಿಗೆ ಗೊತ್ತಾಗಿ ಹೋಗಿತ್ತು. ‘ಟೈಮ್ಸ್ ಆಫ್ ಇಂಡಿಯಾ’ ಬಾಗಿಲು ತಟ್ಟಿದರು. ಹಳ್ಳಿ ಹಳ್ಳಿ ಸುತ್ತೋಕೆ ನಾನ್ ರೆಡಿ ಇದ್ದೀನಿ. ಸುತ್ತೋದಕ್ಕೆ ಬೇಕಾಗಿರೋ ಶಕ್ತಿ ಕೊಡಿ. ಸುತ್ತಿದ್ದು ಹೇಳೋದಿಕ್ಕೆ ಪೇಪರ್ ನಲ್ಲಿ ಒಂದಿಷ್ಟು ಜಾಗ ಕೊಡಿ ಅಂದ್ರು. ಟೈಮ್ಸ್ ಆಫ್ ಇಂಡಿಯಾ ಕೊಟ್ಟ ಫೆಲೋಶಿಪ್ ಅನ್ನ ಬಗಲಿಗಿಟ್ಟುಕೊಂಡು ಸಾಯಿನಾಥ್ ಹಳ್ಳಿ ಹಳ್ಳಿ ಸುತ್ತೋದಿಕ್ಕೆ ರೆಡಿ ಆಗ್ಬಿಟ್ರು. ಮಾಧ್ಯಮಕ್ಕೆ ಎಂದೂ ಗೊತ್ತಿರದ ಒಂದು ಲೋಕ ಬಿಚ್ಚಿಕೊಳ್ಳೋದಿಕ್ಕೆ ಶುರುವಾಯ್ತು
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ಹೊಸ 'ಮೀಡಿಯಾ ಮಿರ್ಚಿ' ಬಂದಿದೆ
ನಿಮಗೆ ಇವೂ ಇಷ್ಟವಾಗಬಹುದು…





0 Comments