ಫೆಸ್ಬುಕ್ ಎಂಬ ಜಾಗೃತ ಜಾಗ
– ವಿಜಯ್ ಹೂಗಾರ್
೧
ಭೌತಿಕ ಅಸ್ತಿತ್ವ ಇರದ
ಕೃತಕ ಕುತೂಹಲ ಜನಕ.
ನಮ್ಮ ಖಾಸಗಿ ಬದುಕಿನ
ಪ್ರಾಯೋಜಕ.
ನಾವು ಉಸಿರಾಡಿದ ಕ್ಷಣವನ್ನೂ
ಬಣ್ಣ ಬಡೆಯುವ ತಾಣ
೨
ಲೈಕು, ಕಾಮ್ಮೆಂಟು
ಘಳಿಸುವ ಗಂಭೀರ ಸ್ಪರ್ದೆ,
ಇವತ್ತಿನ ಗಳಿಕೆ ಇಷ್ಟು,ನಿನ್ನದೆಷ್ಟು….?
ಎಂಬ ಬಿಸಿನೆಸ್ಸಿನ ಮರ್ಯಾದೆ.
೩
‘ಅನುದಿನ ನೂರು ಲೈಕು,ನೂರು ಟ್ಯಾಗು,
ಲಲ್ಲೆಯಂಥ ಕಾಮ್ಮೆಂಟು,ಉದ್ದನೆಯ ಫ್ರೆಂಡ್ಸ್ ಲಿಸ್ಟು’
ಸಾಕಾಗಿದೆ ಅಂತ ಖುಷಿಯಿಂದಲೇ
ಹೇಳುವ ಹುಡುಗಿಯರ ಮೇಲೆ
ಹುಡುಗರ ಹೊಟ್ಟೆಯುರಿ.
೪
ಆಗಾಗ ಒಂಚೂರು
ಗಂಭೀರ ಪೋಸ್ಟು,
ಅಷ್ಟೇ ಗಂಭೀರ ಭಾವಚಿತ್ರ
ತಗುಲಿಸಿ
ಘಳಿಗೆಗೊಮ್ಮೆ ಬಾಗಿಲು
ತೆರೆಯುವ ಹುಡುಗರ ವೈಖರಿ .
೫
ಭಾವಚಿತ್ರ ಅದೆಷ್ಟೇ
ಕೆಟ್ಟದಾಗಿದ್ರು ಅಷ್ಟೇ
ಸುಂದರ ನೋಟದಿಂದ
ಸ್ವೀಕರಿಸಿ ‘ಸೂಪರ್ ಮಾಮ್’
ಹೇಳುವ ಅಗೋಚರ ಗೆಳೆಯರು
ಅದೆಷ್ಟೇ
ಗೂಗಲ್ ಮಾಡಿದರು ಸಿಗಲಾರರು.
೬
ಅರ್ಧ ಪುಟ ಬರೆದು
ಕಮೆಂಟಿಗಾಗಿ ದಾರಿ ಕಾಯೋ
ಹೊಸ ಪೀಳಿಗೆಯ ಬರಹಗಾರನಿಗೆ
ಭೇಷ್ ಅನ್ನಿಸಿಕೊಳ್ಳುವ ಆತುರ.
ಪ್ರೋತ್ಸಾಹದ ಸುರಿಮಳೆಗೆ ಮಾತ್ರ
ಹುಟ್ಟುವದು ಮುಂದಿನ ಬರಹ.
೭
ಇವರು ಕೂಡ ಗೆಳೆಯರೇ:
ಎದುರಿಗೆ ಸಿಕ್ಕರೆ
ಮುಖತಿರುಗಿಸಿ ಹೋಗುವರು,
ಹುಟ್ಟುಹಬ್ಬಕ್ಕೆ ಶುಭಾಶಯ
ಹೇಳುವದು ಮಾತ್ರ ಮರೆಯಲಾರರು.
೮
ಕಾಯಕದ ಮೆಚ್ಚುಗೆಗೆ,
ಹೇಳುವ ಸಂತೋಷಕ್ಕೆ
ಹೇಳಲಾಗದ ನೋವಿಗೆ
ಮುಕ್ತಿ ದೊರೆಯುವ ಜಾಗೃತ ಜಾಗ.]]>
Like this:
Like Loading...
Related
Very nicely said.
Swarna
Good one.
ಜೊತೆಗೆ
ಅಸಾಂಜ್ ಫೇಸ್ಬುಕ್ಅನ್ನು cia,fbi ನ ಗೂಢಚಾರಿಕೆಯ ಅತ್ಯಾಧುನಿಕ ಸಾಧನ ಎಂದು ಗುರುತಿಸಿದ್ದಾರೆ