ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ಪಕ್ಕದಲ್ಲೇ ಒಂದು ಹೆಜ್ಜೆ ಬಿಕ್ಕಳಿಸುತ್ತಿದೆ…

ಹೆಜ್ಜೆಗಳು

– ವಿಜಯ್ ಹೂಗಾರ್

೧ ಪೇಟೆಯಿಂದ ಖರೀದಿಸಿ ತಂದ ಅಜ್ಞಾತ ಪದಗಳು ಕವಿತೆಯಲ್ಲಿ ಕಟ್ಟಿ ಹಾಕಿದ ಕವಿಯನ್ನು ಶಪಿಸುತ್ತ ತನ್ನ ಮರೆತ ಹೆಜ್ಜೆಯ ಹುಡುಕುತಿವೆ. ೨ ನೀರಿನಲ್ಲಿ ಗಾಳಿಯ ಹೆಜ್ಜೆಯ ಹುಡುಕುತ ಮೀನು ಹೊಳೆಯ ತುಂಬಾ ತನ್ನ ಹೆಜ್ಜೆಯಿಂದ ಬಳೆಯಾಕಾರ ಮೂಡಿಸುತಿದೆ.   ೩ ಮಾಮರಕೆ ಕಾವಲು ನಿಂತ ಪೋರನ ಕಣ್ಣು ತಪ್ಪಿಸಿ ದೋಚಿದ ಹೆಜ್ಜೆಗಳು ಜಾಡಿಗೆ ಒಂದೆರೆಡು ಕಾಯಿಯ ನೈವೇದ್ಯ ನೀಡಿದೆ. ೪ ಮಳೆಗೂ ಹೆಜ್ಜೆಗೂ ಒಂದು ನಂಟಿದೆ . ಎಲ್ಲರಿಗು ತಮ್ಮ ಹೆಜ್ಜೆ ಬರೆದಿಡುವ ಒಂದು ಅವಕಾಶ ಮೊದಲ ಆದ್ಯತೆ ಮಾತ್ರ ನೀರಿಗೆ . ಅದರ ಮೇಲೆ ನಮ್ಮ ಕರಡುಪ್ರತಿ ೫ ಕಡಲ ತೀರದಲ್ಲಿ ಮೂಡಿವೆ ಅಜ್ಞಾತ ಹೆಜ್ಜೆಯ ರಾಶಿಗಳು ಕಳಚಿ ಹೋದವರ ವಿಕಾರ ಹೆಜ್ಜೆಗಳು ದೂರದಲ್ಲಿ ಸಾಗುತಿವೆ ದುಃಖ ಹಂಚಲು ಹೋದರೆ ಪಕ್ಕದಲ್ಲೇ ಒಂದು ಹೆಜ್ಜೆ ಬಿಕ್ಕಳಿಸುತ್ತಿದೆ, ಅದರ ಇನ್ನೊಂದು ಜೊತೆ ಮಣ್ಣಾಗಿರುವದಕ್ಕೆ .  ]]>

‍ಲೇಖಕರು G

12 September, 2012

1 Comment

  1. Swarna

    ನೀರಿನ ಮೇಲೆ ನಮ್ಮ ಕರಡು ಪ್ರತಿ.
    ತುಂಬಾ ಸುಂದರವಾಗಿದೆ.
    ಸ್ವರ್ಣಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading