ಹಾರುವ ತಟ್ಟೆಗಳು – ನಾ ಕಂಡದ್ದು!
– ಸುಧೀಂದ್ರ ದೇಸಾಯಿ
ಅದು 2000ರ ಏಪ್ರಿಲ್ ತಿಂಗಳು, ನಾನು ಧಾರವಾಡದ JSS ಕಾಲೇಜಿನಲ್ಲಿ ಪಿಯುಸಿ ಓದುತ್ತಿದೆ. ಸಮ್ಮರ್ ಹಾಲಿಡೇಸ ನಡೀತಿತ್ತು, ಹಂಚಿನಮನೆ ಕ್ಲಾಸೆಸ್ಗೆ ಹೊಗ್ತೀದ್ದೆ. ಬಹಳ ಆರಾಮಾಗಿ ಸ್ಟುಡೆಂಟ್ ಲೈಫ್ ನಡಿಸುತ್ತಾ, ಗೆಳೆಯರೊಂದಿಗೆ ಲೇಟ್ ನೈಟ್ ಮೂವೀಸ್, ಚಾಟಿಂಗ್, ಮಧ್ಯರಾತ್ರಿಯಲ್ಲಿ ಒಂದಿಬ್ಬರ ಫ್ರೆಂಡ್ಸ್ ಜೊತೆ ವಾಕಿಂಗ್ ಭರವಾಗಿ ಸಾಗುತಿದ್ದ ದಿನಗಳು. ಮಾಮೂಲಿಯಾಗಿ ಲೇಟಾಗಿ ಮಲಗಿ, ಬೇಗ ಏಳುವ ಅಭ್ಯಾಸವಾಗಿತ್ತು, ಏಕೆಂದರೆ ಬೆಳೆಗ್ಗೆ ಟ್ಯೂಶನ್ ಕ್ಲಾಸ್ಸೆಸ್ಗೆ ಹೋಗಬೇಕಿತ್ತು. ಬೆಳೆಗ್ಗೆ 5.30 ಗೆಲ್ಲಾ ಟ್ಯೂಶನ್ಗೆ ಹಾಜಿರಾತಿ, ಆಮೇಲೆ ಒಂದಿಸ್ಟು ಹುಡಿಗೀರ್ನ ಲೈನ್ ಹೊಡಿಯೋದು, ಪಾಠ ಕೇಳೋದು ಅಸ್ಟಕಸ್ಟೇ. ನನಗೆ ಓದುವದರ ಮೇಲೆ ಸ್ವಲ್ಪ ಆಸಕ್ತಿ ಕಡಿಮೆಯಿತ್ತು, ಆದರೆ ಜನರಲ್ ನಾಳೆಡ್ಜ ವಿಷಯಗಳಲ್ಲಿ ಬಹಳ ಇಂಟರೆಸ್ಟ ಇತ್ತು. ಅದರಲ್ಲೂ ಹಾರುವ ತಟ್ಟೆಗಳ(UFO) ಬಗ್ಗೆ ರಿಸರ್ಚ್ ಮಾಡುತಿದ್ದೇ, ಅವುಗಳ ನಿಜವಾಗಿಯೂ ಇವೆಯಾ ಅಥವಾ ಇವೆಲ್ಲಾ ಬರಿ ಕಟ್ಟು ಕಥೆಗಳಾ ಎಂದು ತಿಳಿಯಲು ಪ್ರಯತ್ನ ಮಾಡುತಿದ್ದೇ.ಅದೇನೂ ಹೇಳ್ತಾರಲ “ಬಯಸಿದ್ದು ಅದೇ, ಸಿಕ್ಕಿದ್ದು ಅದೇ” ಅಂತ, ಹಾಗೆ ಆಯಿತು ನನ್ನ ವಿಷಯದಲ್ಲಿ.ಒಂದು ರಾತ್ರಿ ನಾನು ಮತ್ತೆ ನನ್ನಿಬ್ಬರ ರೂಮಮೆಟ್ಸ್ ಜೊತೆ ಹೊರಗೆ ನನ್ನ ರೂಮಿನ ಎದುರಿಗಿರುವ ರೋಡಿನ ಮೇಲೆ ಕುಳಿತಿದ್ದೆ. ಏನೋ ಮಾತಗಳು ಆಡುತ್ತಾ ಕುಳಿತುಕೊಂಡಿದ್ವಿ, ಅಸ್ಟರಲ್ಲೇ ನಮ್ಮ ಓನರ್(Landlord or owner) ಮಗ ಹೊರಗೆ ಬಂದು, ಆಕಾಶ ನೋಡುತ್ತಾ“ ಅಣ್ಣಾ ಮೇಲೆ ನೋಡ್ರಿ ಅಂದ….!”, ನಾವು ಥಟ್ಟನೆ ಮೇಲೆ ನೋಡಿದೆವು. ಅವಾಗ ನಮಗೆ ದರ್ಶನವಾಗಿದ್ದು ಒಂದು “ತ್ರಿಯಾನ್ಗುಲರ್ ಯುಯಫೋ(Triangular UFO)”.
ಅದು ಸದ್ದಿಲ್ಲದೆ ನಮ್ಮ ತಲೆಯ ಮೇಲೆ ಹಾದು ಹೋಗುತಿತ್ತು, ಬಹುಶ ಆ ನಮ್ಮ ಓನರ್ ನ ಮಗ ನಮಗೆ ಮೇಲೆ ನೋಡು ಅಂತ ಹೇಳದಿದ್ದರೆ, ನಾವು ಅದನ್ನು ನೋಡಿರತ್ತಿರಲ್ಲಿಲ. ಅದನ್ನು ನಾವು ಹಿಂಬಾಲಿಸುತ್ತಾ ಓಡಿದೆವು, ಸ್ವಲ್ಪ ದೂರದಲ್ಲೇ ಅದು ಒಂದು ಗುಡ್ಡದ(Mountain) ಮೇಲೆ ಹೊರಟು ಹೋಯಿತು. ನಾವು ಅದನ್ನ ಹಿಂಬಾಲಿಸಿ ಹೋಗೋಣವೆಂದು ಪ್ರಯತ್ನಿಸಿದೆವು, ಆದರೆ ಆಗಲಿಲ್ಲ. ಕಣ್ಣೆದುರಿಗಿದ್ದ ಅಚ್ಚರಿ, ನಿಮಿಷದಲ್ಲಿ ಮಾಯವಾಯಿತು. ಇದು ಕನಸೋ ? ಎಂಬ ಪ್ರಶ್ನೆ ಮೂಡಿತು. ನೋಡಿದ್ದು ಸಹಜವಾದದ್ದಲ್ಲ, ಎಂದೂ ಕಂಡಿದ್ದಿಲ್ಲದ್ದು. ಅವಗಾಗಿದ್ದ ಸಮಯ ರಾತ್ರಿ 12.30 AM, ರೂಮಿಗೆ ವಾಪಸ್ ಬಂದು ಮಲಗಿದೆ, ಎಸ್ಟೋ ಹೊತ್ತು ನಿದ್ದೆ ಬರಲಿಲ್ಲ. ಮತ್ತೆ ಬೆಳೆಗ್ಗೆ ಬೇಗ ಎದ್ದು ಟ್ಯೂಶನಗೆ ಹೋದೆ, ಎಲ್ಲರಲ್ಲೂ ರಾತ್ರಿ ನಡೆದ ಘಟನೆ ಬಗ್ಗೆ ತಿಳಿಸಿದೆ. ಆದರೆ ಯಾರು ನಂಬಲಿಲ್ಲ, ಕೆಲವರು ನಕ್ಕರು, ಇನ್ನೂ ಕೆಲವರು “ನಿನ್ ತಲೆ ಕೆಟ್ಟಿದೆಯ” ಎಂದು ಕೇಳಿದರು. ನನ್ನ ರೂಮಮೆಟ್ಸ್ ಕೂಡ ನನ್ನಜೊತೆ ಧ್ವನಿಗೂಡಿಸಿದರು, ಆದರು ಯಾರು ನಂಬಲಿಲ್ಲ. ನನಗು ಒಂದು ನಿಮಿಷ ನಾನು ಕಂಡಿದ್ದ “ಹಾರುವ ತಟ್ಟೆಗಳ” ಬಗ್ಗೆ ಶಂಕೆಯಾಯಿತು. ಆಮೇಲೆ 10 ಘಂಟೆಗೆ ಟ್ಯೂಶನ್ ಬಿಡ್ತು, ಹೊರಗಡೆ ದಿನ ಪತ್ರಿಕೆಗಳನ್ನು ಓದುವಾಗ ಫ್ರಂಟ್ ಪೇಜಿನಲ್ಲಿ ಈ ಸುದ್ಧಿ ಪ್ರಕಟವಾಗಿತ್ತು, ಆ ಸುದ್ಧಿ ಹೀಗಿತ್ತು “ ಧಾರವಾಡ ನ ಕೆಲ ಭಾಗಗಳಲ್ಲಿ ಹಾರುವ ತಟ್ಟೆಗಳು ಕಾಣಿಸಿಕೊಂಡಿವೆ, ನಮ್ಮ ವರದಿ ವಿಭಾಗಕ್ಕೆ ಹಲವಾರು ಜನಗಳು ಫೋನು ಮಾಡಿ ತಿಳಿಸಿದ್ದಾರೆ” ಇದನ್ನು ಓದಿ ನನ್ನ ಸಂತೋಷಕ್ಕೆ ಪಾರವೆ ಇರಲಿಲ್ಲ. ಇದನ್ನು ಎಲ್ಲರಿಗೂ ತೋರಿಸಿದೆ, ಎಲ್ಲರೂ ನಂಬಿದರು, ಇನ್ನು ಕೆಲವರಂತೂ ನಾ ಕಂಡ ಅಚ್ಚರಿಯ ಬಗ್ಗೆ ಚಿಕ್ಕ ಮಕ್ಕಳಂತೆ ಕುಳಿತು ಕಥೆ ಕೇಳಿದರು. ನನಗಂತೂ ಎಲ್ಲಿಲ್ಲದ ಸಂತೃಪ್ತಿ ಹಾಗು ಯುಯಫೋ(UFO) ಗಳ ಬಗ್ಗೆ ಇನ್ನಸ್ಟು ಉತ್ಸಾಹ ಹುಟ್ಟಿಸಿತು. ಅಲ್ಲಿಗೆ ನನ್ನ ರೀಸರ್ಚ್ ಮುಗಿಯಲಿಲ್ಲ, ಸಮಯ ಸಿಕ್ಕಾಗಲೆಲ್ಲ ಈ ವಿಸ್ಮಯ ತಟ್ಟೆಗಳು, ಹಾರುವ ಈ ನಿರ್ಜೀವ ಹಕ್ಕಿಗಳ ಬಗ್ಗೆ ವಿಷಯಗಳನ್ನು ಹೆಕ್ಕಿ ಹಾಕುತ್ತಿದ್ದೆ.ನನ್ನ ಈ ಅನುಭವವನ್ನು ಆನ್ಲೈನ್ ವೆಬ್ಸೈಟ್ನಲ್ಲಿ ರೆಜಿಸ್ಟರ ಮಾಡಿದ್ದೇನೆ, ಲಿಂಕ್ ಇಲ್ಲಿದೆ
http://aliensthetruth.com/UFO_sightings.php?view=1&ID=290
ಅಲ್ಲಿಗೆ ಯುಯಫೋಗಳ ಬಗ್ಗೆ ನನ್ನ ಪರಿಶೋದನೆ ನಿಲ್ಲಲಿಲ್ಲ, ಅವುಗಳ ಬಗ್ಗೆ ಎಸ್ಟೋ ಗೂಗಲ್(google)ಮಾಡಿದ್ದೇನೆ. ಯುಯಫೋ ಎಂದರೆ unidentified flying objects ಕೆಲವರಂತೂ ಅವುಗಳನ್ನು ಫ್ಲಯಿಂಗ್ ಸಾಸೆರ್ಸ್(flying saucers)ಎಂದು ಕರೆಯುತ್ತಾರೆ, ನಾನು ಕನ್ನಡದಲ್ಲಿ ಅವುಗಳನ್ನು ಚೊಕ್ಕವಾಗಿ ಹಾರುವ ತಟ್ಟೆಗಳೆಂದು ಹೆಸರಿಟ್ಟುಕೊಂಡಿದ್ದೇನೆ.ನಿಮಗೆ ನನ್ನ ನೈಜ ಕಥೆ ಇಷ್ಟವಾಯೀತಾ ?




This is very interesting and I heard about the same incident from Sudheendra when i was working with him. This was more exiting to directly hear from him. Also, The magazine has done well to post it. Congrats Gurugale 🙂
i m a film maker ….i have a new project abt UFO so pls contact me ,then we will discuss abt that…. my number 9900023616 reply plz
Chennaagide… Ondu kutoohalada vishaya. Conrats.
I heard this when was studying togeather at JSS and also did not believe in it initially. Then realized that he was very few of the lucky ones, who has seen UFO..
ನಿಮ್ಮ ಅನುಭವಗಳ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ನಿಮ್ಮ ಫೋನ್ ನಂಬರ್ ಕೊಟ್ಟರೆ ನನ್ನಲ್ಲು ಕೆಲವು ವಿಚಾರಗಳಿವೆ, ಅದನ್ನ ವಿಚಾರ ಮಾಡ್ಕೋ ಬೇಕು ಅನ್ನಿಸ್ತಿದೆ. ನನ್ನ ಫೋನ್ ನಂಬರ್ 9900023616
ಸಮಯವಿದ್ದಾಗ ದಯವಿಟ್ಟು ಓದಿ:
kannascien.blogspot.com/…/palahalli-vishwanath_985…
Nov 23, 2012 – ಭ್ರಮಾಲೋಕದ ನೌಕೆಗಳು – ಪಾಲಹಳ್ಳಿ ವಿಶ್ವನಾಥ್ Palahalli Vishwanath. ಈ ಲೇಖನ – ಭ್ರಮಾಲೋಕದ ನೌಕೆಗಳು – ವಿಜಯ ನೆಕ್ಸ್ಟ್ (ವಾರಪತ್ರಿಕೆ)ಯಲ್ಲಿ ೧೮ ಅಕ್ಟೋಬರ್ ೨೦೧೨ ರ೦ದು ಪ್ರಕಟವಾಗಿದ್ದಿತು