ಬಂದೇಸಾಬ ಮೇಗೇರಿ ರಾಮಾಪುರ
ದಿನಂಪ್ರತಿ ಬೋರು ಹೊಡೆಯುವ ಕ್ಲಾಸುಗಳು. ಅದೇ ಹಳೆ ಮಾಸ್ತರರ ಓಣಗಿದ ಮುಖಗಳು. ಒಂದೆ ತೆರನಾದ ಕೊರೆಯುವ ಸ್ಟೈಲ್. ಮೊಳೆ ಹೊಡೆಯುವ ವಿಷಯಗಳನ್ನು ಕೇಳಿ ಕೇಳಿ ಕಿವಿಗಳು ತೂತು ಬಿದ್ದಿದ್ದವು. ಪಿ.ಜಿ.ಯ ಲೈಫ್ ಸಾಕೆನಿಸಿತ್ತು. ಆಗ ಬಂದಿದ್ದೇ ಓ.ಈ.ಸಿ ಎಂಬ ಆಪದ್ಭಾಂದವ. ದ್ವಿತೀಯ ಸೆಮಿಸ್ಟರ್ನಲ್ಲಿ ಧುತ್ತೆಂದು ಪ್ರತ್ಯಕ್ಷನಾದ. ಪ್ರತಿ ಡಿಪಾರ್ಟ್‍ಮೆಂಟ್ ಗಳಿಗೂ ಓ.ಈ.ಸಿ ಎಂಬ ಸಬ್ಜೆಕ್ಟ್ ಇರುವುದರಿಂದ ಫಾರ್ಮನಲ್ಲಿ ಹಲವು ವಿಷಯಗಳನ್ನು ಕುತೂಹಲದಿಂದ ಫಿಲ್ ಅಪ್ ಮಾಡಿದ್ದೆವು. ಯಾವ ವಿಷಯ ಬರಬಹುದು, ಅದು ಈಜಿಯಾಗಿರುವುದೊ, ಏನೋ ಕಠಿಣವಾಗಿರುವುದೊ ಎಂಬ ಶಂಕೆ ಬೆಳೆದು ಹೆಮ್ಮರವಾಗುತ್ತಿತ್ತು. ಈ ಶಂಕೆಗೆ ಫುಲ್ ಸ್ಟಾಪ್ ಇಡುವ ಸುದಿನ ಬಂದೇ ಬಿಟ್ಟಿತು. ನಾವು ನಿರೀಕ್ಷಿಸಿದ ವಿಷಯ ಬರದಿದ್ದರೂ, ಪತ್ರಿಕೋದ್ಯಮಕ್ಕೆ ರಿಲೆಟೆಡ್ ಆದ ಕನ್ನಡ ಸಾಹಿತ್ಯದ ಶಬ್ಧ ಸಂಗ್ರಹ ಜ್ಞಾನವನ್ನು ಶ್ರೀಮಂತಗೊಳಿಸುವ ಕನ್ನಡ ವಿಷಯ ನನ್ನ ಪಾಲಿಗೆ ಒಲಿದು ಬಂದಿತ್ತು. ಮರುದಿನ ಶುಕ್ರವಾರ ಓ.ಈ.ಸಿ ಕ್ಲಾಸು ಮದ್ಯಾಹ್ನ ಬರೊಬ್ಬರಿ 3 ಗಂಟೆಗೆ ಶುರುವಾಗುವುದೆಂದು ಸ್ನೇಹಿತನೊಬ್ಬನಿಂದ ತಿಳಿದು ಬಂತು. ಆ ಓ.ಈ.ಸಿ ಕ್ಲಾಸ್ ಹೇಗಿರಬಹುದು ಮಾಸ್ತರರು ಹೇಗಿರುವರು ಕಾಮಿಡಿಯಾಗಿ ಪಾಠ ಮಾಡುವರೋ, ತಲೆ ಕೊರೆಯುವ ಪಾರ್ಟಿಯೋ, ಹುಡುಗರು, ಹುಡುಗಿಯರು ಹೇಗಿರುತ್ತಾರೋ, ಚೆನ್ನಾಗಿರಬಹುದೇ, ನಮ್ಮ ಹಾಗೆಯೆ ಸಾಧಾರಣವಾಗಿರುವರೋ ಎಂಬ ಹಲವಾರು ಯಕ್ಷ ಪ್ರಶ್ನೆಗಳು ಉದ್ಭವಿಸಿದವು.
ಬಿಸಿಲಿಗೆ ಬಸವಳಿದು ಬರುತ್ತಿದ್ದಾಗ ವಿದ್ಯಾಮಹಲ್ ನ ರೋಮನ್ ಅಂಕಿಗಳ ಹಾಗೇ ಕಾಣುವ ದೊಡ್ಡ ಗಡಿಯರದಲ್ಲಿ ರೋಮನ್ ಅಂಕಿಗಳೇ ಇರಲಿಲ್ಲ. ಸಮಯ ಆಗಲೇ 3 ಗಂಟೆ ಬಾರಿಸಿತ್ತು. ಮನದಲ್ಲಿ ಕಳವಳವೊಂದು ಹುಟ್ಟಿತು. ಅಯ್ಯೋ! ಮೊದಲನೇ ದಿನವೇ ಕ್ಲಾಸ್ಗೆ ಲೇಟಾಗಿ ಹೋದರೆ ಮಾಸ್ತರರ ಬೈಗುಳಕ್ಕೆ ಆಹಾರವಾಗುವ ಹಾಗಿತ್ತು ನನ್ನ ಪರಿಸ್ಥಿತಿ. ರಾಂಗ್ ಎಂಟ್ರಿ ಅನ್ನುವುದು ಕನ್ಫರ್ಮ್ ಆಗಿತ್ತು. ಮೆ ಆಯ್ ಕಮ್ ಇನ್ ಸರ್ ಎಂದಾಗ ನಗುಮುಖದಿಂದಲೇ ಮಾಸ್ತರರು ಸ್ವಾಗತಿಸಿದರು. ನನಗಾಗಿ ಲಾಸ್ಟ್ ಬೆಂಚ್ ಖಾಲಿ ಉಳಿದು ಬಿಕೋ ಎನ್ನುತ್ತಿತ್ತು. ಅದು ನಮ್ಮ ಪಾರಂಪರಿಕ ವಿರಾಜಮಾನ ಸ್ಥಾನ. ಪಕ್ಕದಲ್ಲೇ ಕುಳಿತ ಹುಡುಗಿಯನ್ನು ಕಂಡಾಗ ದಿಗ್ಬ್ರಮೆಯಾಯಿತು. ಡಿಗ್ರಿಯಲ್ಲಿ ಕೂಡಿ ಕಲಿತ ಗೆಳತಿ ಅವಳಾಗಿದ್ದಳು. ಖುಷಿಯ ಜೊತೆ ಆಶ್ಚರ್ಯದ ಸಂಗತಿ ಸಮ್ಮೀಳಿತವಾಗಿತ್ತು. ಕಾರನ ಅವಳು ಹೇಳಿದ್ದಳು ನಾನು ಉನ್ನತ ಶಿಕ್ಷಣಕ್ಕೆ ತೆರಳುವುದಿಲ್ಲ ಎಂಬ ಹಳೆಯ ಡ್ಯಲಾಗ್ ನೆನಪಾಯಿತು. ಕ್ಲಾಸ್ ಮಾಸ್ತರರು ತಮ್ಮನ್ನು ಪರಿಚಯಿಸಿಕೊಳ್ಳುವ ಮುಖಾಂತರ ತರಗತಿಯನ್ನು ಸ್ಟಾರ್ಟ್ ಮಾಡಿದರು. ಕ್ಲಾಸೆನೋ ಸ್ಟಾರ್ಟ್ ಆಯ್ತು.
ಆದರೆ ನನ್ನ ಮನದಲ್ಲಿ ಬೇರೆ ಏನೋ ಮೂಡತೊಡಗಿತು. ಬೆಂಚುಗಳನ್ನು ಅಲಂಕರಿಸಿರುವ ಎಲ್ಲ ಮುಖಗಳು ಒಂದೊಂದು ವಿಭಿನ್ನ ರೂಪ ತಾಳಿದ್ದವು. ಸುರಸುಂದರಿ, ಕೃಷ್ಣ ಸುಂದರಿ ಹುಡುಗಿಯರೇ ಆ ಕ್ಲಾಸ್ನಲ್ಲಿ ವಿರಾಜಮಾನರಾಗಿದ್ದರು. ಇನ್ನು ಕೆಲವರಂತೂ ಅನ್ಯ ಗ್ರಹದ ಈಲೀಯನ್ಸ್ ಗಳ ಹಾಗೇ ಕಾಣಿಸುತ್ತಿದ್ದರು. ಓಬಿರಾಯನ ಕಾಲದ ಬ್ಲ್ಯಾಕ್ ಬೋರ್ಡ್ , ಚಕ್ಕೆ ಕಿತ್ತ ಗೋಡೆಗಳು, ಜಂಗು ಹತ್ತಿದ ಹಳೆಯ ವಿಮಾನದ ಬಿಳಿ ರೆಕ್ಕೆಗಳಂತಿರುವ ಫ್ಯಾನುಗಳು ಹತ್ತಲೇ ಬೇಡವೋ ಎಂಬಂತೆ ಗೋಗರೆಯುತ್ತಿರುವ ಮಂದಾದ ಬೆಳಕಿನ ಟ್ಯೂಬ್ಲೈಟ್ಗಳು. ಒಡೆದ ಕಿಟಕಿಯ ಗ್ಲಾಸುಗಳು, ಹಣ್ಣು ಹಣ್ಣಾದ ಮುದುಕಿಯ ಬಾಯಲ್ಲಿರುವ ಹಲ್ಲುಗಳ ಹಾಗಿರುವ ಸ್ವಿಚ್ ಬೋರ್ಡ್ ನ ಕಿತ್ತೋದ ಬಟನ್ಗಳು. ಹೀಗೆ ಕ್ಲಾಸ್ ಮಾತ್ರ ಅಯೋಮಯವಾಗಿತ್ತು. ಆದರೂ ಮಾಸ್ತರರ ಸ್ಪೀಚ್ ಆಲಿಸಲು ತುಂಬಾನೇ ಆಕರ್ಷಣೀಯವಾಗಿತ್ತು. ಒಂದು ಹುಡುಗಿಯಂತೂ ವಿಶ್ವಸುಂದರಿಯ ರೂಪತಾಳಿ ಹುಡುಗರನ್ನೇ ತಿನ್ನುವ ಹಾಗೆ ನೋಡುತ್ತಿದ್ದಳು. ಹಳೇ ಕ್ಲಾಸಿನ ಪಾಠಗಳಿಗಿಂತ ಓ.ಈ.ಸಿಯ ಪ್ರವಚನಗಳು ಆಲಿಸಲು ಹಿತವಾಗಿದ್ದವು. ಓ.ಈ.ಸಿ ಎನ್ನುವುದು ಅಪಾಯವು ಹೌದು, ಸುದೈವವು ಹೌದು ಎಂಬ ಮೇಷ್ಟ್ರ ಮಾತು ವಾಸ್ತವಕ್ಕೆ ಕನ್ನಡಿ ಹಿಡಿಯುವ ಹಾಗಿತ್ತು.






olleya baraha bandesab
Thank you sir, how are you sir?