ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ಏಕಾ೦ತ

ಏಕಾಂತ

– ವಿಜಯಕುಮಾರ್ ಹೂಗಾರ್

೧ ದಾರ ಕಡಿದು ಹಾರುವ ಗಾಳಿಪಟದಲ್ಲಿದೆ ಏಕಾಂತದ ಶುದ್ಧತೆ. ಯಾರ ಹಿಡಿತದಲ್ಲಿರದೆ ತೇಲುತಿದೆ ಅಪ್ಪಳಿಸಿ ಶರಣಾಗುವ ಮುನ್ನ   ೨ ಮೈಥುನದ ತುತ್ತ ತುದಿ ಏಕಾಂತದ ಪರಮಾವಧಿ, ಏಕಗ್ರತೆಯನ್ನೇ ಮೆಟ್ಟಿ ನಿಲ್ಲುವ ಸಮಯ. ನಮ್ಮನ್ನರಿಯದೆ ನಮ್ಮಲ್ಲಿ ಅಡಗಿರುವ ನಗ್ನ ಏಕಾಂತದ ಖಜಾನೆ.     ೩ ಕವಿ ಬರೆದ ಕವಿತೆಯಲ್ಲಿ ಅಡಗಿದ ಏಕಾಂತವೋ ? ಅಥವಾ ಏಕಾಂತ ಹುಡುಕುವ ನೆಪದಲ್ಲಿ ಬರೆದ ಕವಿತೆಯೋ ? ಕವಿ,ಕವಿತೆ ಇಬ್ಬರಿಗೂ ತಿಳಿಯದ ಸಂಗತಿ.   ೪ ಸಾವು ಎದುರಾಗಿ ಮರೆಯಾದ ಘಳಿಗೆಯಲ್ಲಿದೆ ಶೂನ್ಯ ಏಕಾಂತ. ಬಯಸದೆ ಅನುಭವಕ್ಕೆ ಸಿಗುವುದು ವ್ಯಕ್ತಪಡಿಸುವದಕ್ಕೂ ಆಗದು.   ೫ ಉಸಿರು ಏರಿ ಇನ್ನೇನು ಇಳಿಯುವ ಮುನ್ನ ಬಂದು ಹೋಗುವದು ಒಂದು ಕಳ್ಳ ಏಕಾಂತ ಅನುಭವಿಸಿದವನಿಗೆ ಮಾತ್ರ ಗೊತ್ತು ಅದರ ಗಮ್ಮತ್ತು.  ]]>

‍ಲೇಖಕರು G

13 August, 2012

1 Comment

  1. Vijaykumar Hugar

    Thanks Avadhi…:-)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading