ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು : ಇರುಳು ಮೌನದಷ್ಟೇ ಕ್ರೂರ

ಇರುಳು

ವಿಜಯಕುಮಾರ್ ಹೂಗಾರ್

೧ ಇರುಳಿಗಾಗಿ ಕಾದು ನೆರಳ ಚಿಂದಿ ಆಯುತ ಬಂದ ಚಂದಿರ ಬೆತ್ತಲ ಜನರ ಬದುಕ ಕಂಡು ಮೋಡದಲ್ಲಿ ಅಡಗಿ ಕಳುಹಿಸಿದ ಮಂಕು ಬೆಳಕನು. ೨ ದಣಿದ ಕೈಗಳು ಇರುಳ ಮಡಿಲಲ್ಲಿ ತಲೆಯಿಟ್ಟು ಬೇಡುತಿವೆ ಬಿಡುವಿಗಾಗಿ, ಮರಭೂಮಿಯ ಚಿರತೃಷೆಯಂತೆ. ೩ ಇರುಳು ಮೌನದಷ್ಟೇ ಕ್ರೂರ ಭಯ, ದಿಗಿಲು, ನೆನಪು, ಸಾವು ಹೀಗೆ ಕಾಣದ ಕೈಗಳಿಂದ ನಮ್ಮ ತಲೆಸವರುತ್ತ ನಿಂತಿದೆ ಸುಮ್ಮನಿರುವ ಗುಮ್ಮನಂತೆ. ಎಲ್ಲರು ಅದಕೆ ಶರಣಾಗಲೇ ಬೇಕು , ಇರುಳ ಬೆರಳು ಹಿಡಿದ ಬದುಕು ಬೆಳಕು ಕಾಣವವರೆಗೂ. ೪ ಸ್ವರ ಹೊರ ಸೂಸುವ ನೊಂದ ದನಿಯನ್ನೆಲ್ಲ ಕೂಡಿಸಿ ಇರುಳಿಂದ ಗಂಟು ಕಟ್ಟಿದರು ಕಿರ್ರೆನ್ನುವ ಅದರ ಬಿಕ್ಕು ಹಿಡಿದಿಡಲು ಸೋತಿತು.  ]]>

‍ಲೇಖಕರು G

15 September, 2012

3 Comments

  1. jogi

    ನೆರಳ ಚಿಂದಿ ಆಯುತಾ ಬಂದ ಚಂದಿರ- ಚಂದದ ಚಿತ್ರ.

    • Vijaykumar Hugar

      Thank u sir….:-)

  2. ಗವಿಸಿದ್ಧ ಬಿ. ಹೊಸಮನಿ

    ಅರ್ಥಪೂರ್ಣ ಸಾಲುಗಳು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading