ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸದೆನ್ನುವುದು ಈ ಜಗದಲ್ಲಿ..

-ಲಕ್ಷ್ಮೀದೇವಿ ಪತ್ತಾರ

ಮುಂದುವರಿದಿದೆ

ಹೊಸದೆನ್ನುವುದು ಈ ಜಗದಲ್ಲಿ
ಯಾವುದಿದೆ ?
ಗಮನವಿಟ್ಟು ನೋಡಿದರೆ
ಎಲ್ಲವೂ ಹಳೆಯದರ ಹೊಸ ರೂಪವಷ್ಟೆ

ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳು
ಸತ್ತಿರುವುದು ಹಳೆಯ ಸಂಬಂಧ
ಹುಟ್ಟುವುದು ಮತ್ಯಾವುದೋ ಹೊಸ ಬಂಧ

ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು ಆಗದು
ಸೃಷ್ಟಿಯು ಇಲ್ಲ , ಲಯವೂ ಇಲ್ಲ
ಅದೇ ಮುರಿದು ಕಟ್ಟುವ ( ಕಾರ್ಯ )ದೃಷ್ಟಿ

ಕೆಟ್ಟದ್ದು ಕಳೆಯುವುದಿಲ್ಲ
ಒಳ್ಳೆಯದು ಅಳಿಯುವುದಿಲ್ಲ
ಕೊರಗಿ,ಮರುಗಲು ಕಾರಣವೇ ಇಲ್ಲ.

ಈಗ ಇರುವುದೆಲ್ಲವೂ ಮೊದಲೂ ಇತ್ತು
ಮತ್ತೆ ಮತ್ತೆ ಮುಂದುವರಿಯುವದು
ಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣ

‍ಲೇಖಕರು Admin

12 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading