ಈಶ್ವರ ಕಿರಣ ಭಟ್
ಬೆನ್ನಿನಲ್ಲಿ ಗೆರೆಯೆಳೆದ ಮೊನ್ನಿನ ಮಳೆಗೆ ಹೀಗೆಯೇ ! ಹುಟ್ಟಲಾರದ ಕೆಲವು ಆಸೆಗಳು ಮೊಟ್ಟೆಯಿಟ್ಟಿದೆ. ಈ ಸಲವಾದರೂ ಮೋಸವಾಗದೆ ಹೊಸ ಜೀವದ ಹುಟ್ಟು ಕಾಯುವ ಕ್ರೌಂಚ! ಬೇಡ! ಕೆಮೆರಾದ ಕಣ್ಣಲ್ಲಿ ಕಾಯುತ್ತಿದ್ದಾನೆ ! ಸುಡದೆ ಶುದ್ದವಾಗುವ ಸೀತೆ ಸಿದ್ದಳಾಗುವಳೆಂದು, ಒಳಗೆ ರಾವಣ ನಗುತ್ತಿದ್ದಾನೆ ! ಇದನ್ನೆಲ್ಲ ಒಂದೇ ಚೌಕಟ್ಟಿನಲ್ಲಿ ಹಿಡಿದಿಡಲಾಗದೆ! ಬೆಳಗಿನ ಜಾವದ ಅವಳ ಮುಂಗುರುಳಾಗಿದೆ ]]>





ಧನ್ಯವಾದಗಳು 🙂
ಸುಡದೆ ಶುದ್ದವಾಗುವ ಸೀತೆ
ಸಿದ್ದಳಾಗುವಳೆಂದು,
ಒಳಗೆ ರಾವಣ ನಗುತ್ತಿದ್ದಾನೆ !
ತುಂಬಾ ಇಷ್ಟವಾದ ಸಾಲುಗಳು
ಸ್ವರ್ಣಾ
ಶಬ್ದಗಳು
ಸಾಲುಗಳು
ವಾಕ್ಯಗಳು
ಒಂದೇ ಮಾತಿನಲ್ಲಿ ಇಷ್ಟವಾಗಿವೆ
ಕವಿತೆ ಇಷ್ಟವಾಯಿತು.
Padha saalugalu shikhara saalinanthe anupama!