ಹೆಣ್ಣು ದೇವರುಗಳೇ ಕಾಣಿಸುತ್ತವೆ ಧೂಪದ ನಡುವೆ

ಪ್ರವರ ಕೊಟ್ಟೂರು

ಇಂಡಿಯಾದ ಜನಗಳೇ
ಎದೆಯನ್ನು ಕಲ್ಲು ಮಾಡಿಕೊಳ್ಳಿ,
ಭಾರತವನ್ನು ತೋರಿಸಲಿದ್ದೇನೆ
ಅಸಲಿ, ಭಾರತವನ್ನು ತೋರಿಸಲಿದ್ದೇನೆ.
 
ಹೆಣ್ಣು ಹುಟ್ಟಿದರೆ
ಮನೆಯಲ್ಲಿ ಸೂತಕ ಕಟ್ಟಿಕೊಳ್ಳುತ್ತದೆಯಂತೆ
ಮೂಲೆ ಮೂಲೆಯಲ್ಲಿನ ಗಾಢ ಜೇಡದಂತೆ,
ಹಸಿ ಬಾಣಂತಿಯ ಮೂತಿಗೆ
ನಾಲ್ಕು ತಿವಿಯದೆಲೆ ಸೂತಕ
ಕಳೆಯುವುದಿಲ್ಲ,
 
ಹೆಣ್ಣು ಮಗು ಬೆಳೆದು
ಋತುಮತಿಯಾಗುವಂತಿಲ್ಲ,
“ಎಲ್ಲಿಗೇ ಹೋಗಿ ಸಾಯುತ್ತಿ, ಮನೆಯಲ್ಲೇ ಇರು,
ದೇವರು ನಮಗೊಳ್ಳೆ ಶನಿ ಗಂಟು ಹಾಕಿದ”
ಕನ್ನಡಿಯಲ್ಲಿ ನೋಡಿಕೊಳ್ಳುವಂತಿಲ್ಲ
ಮತ್ತದೇ ಬೈಗಳು,
ಕತ್ತಲ ಕೋಣೆಯಲ್ಲಿಯೇ ಗೃಹಬಂಧನ,
ಜೋರಾಗಿ ಅಳುವಂತಿಲ್ಲ
ರಕ್ತಸ್ರಾವಕ್ಕೆ ತಿಂಗಳಿನ ಮೂರ್ನಾಲ್ಕುದಿನ
ಅಸ್ಪೃಶ್ಯಳು,
ಆಕೆ ಮುಟ್ಟಿದರೆ ಮೈಲಿಗೆಯಾಗುತ್ತದೆಯಂತೆ,
 
ದೇವರ ಮನೆಯನ್ನೋಮ್ಮೆ ಹೊಕ್ಕಿ ನೋಡಿ
ಹೂವಿನಾಲಂಕಾರದ
ಹೆಣ್ಣು ದೇವರುಗಳೇ ಕಾಣಿಸುತ್ತವೆ
ಧೂಪದ ನಡುವೆ.
 
ಇನ್ನೂ ಏನೋ ಹೇಳಲು ಮರೆತೆ
ಇಂಡಿಯಾದ ಜನಗಳೇ
ಕಲ್ಲೆದೆ ಕರಗಿದರೂ ಕರಗಬಹುದು
ಇತ್ತ ಅಳುಕದೇ ಕೇಳಿ
 
ನಮ್ಮ ಭಾರತದಲ್ಲಿ
ಹೆಣ್ಣು ಸೆಕ್ಸ್ ಟಾಯ್ ಥರ ಆಗಿ ಹೋಗಿದ್ದಾಳೆ,
ರೇಪು ಮಾಡಿದವರು ಮೂರೆ ದಿನಗಳಲ್ಲಿ
ರೊಕ್ಕ ಕೊಟ್ಟು ಹೊರ ಬರಬಹುದು,
ಅವಳ ಸಾವುಗಳನ್ನು ಯಾರೂ ಲೆಕ್ಕಹಾಕುವುದಿಲ್ಲ,
ಯಾಕೆ ಎನ್ನುತ್ತೀರ?
ಶತ ಶತಮಾನಗಳಿಂದಲೂ
ನಮ್ಮ ಅಸಲಿ ಭಾರತ ಇರುವುದು
ಹೀಗೆ ಅಲ್ಲವೆ,
 
ಬೇಕಾದರೆ ನ್ಯೂಸುಗಳಲ್ಲಿ
ಲೈವು ನೋಡಬಹುದು,
ನಮ್ಮ ಜನಗಳು ತುಂಬಾ ಒಳ್ಳೆಯವರು
ಸುಮ್ಮನೇ ನೋಡುತ್ತಾರೆ,
ಯಾಕೆಂದರೆ ಆ ಹುಡುಗಿ
ನಮ್ಮ ಮನೆಯವಳಲ್ಲವಲ್ಲ!!!
ನಮಗ್ಯಾಕೆ ಬೇಕು,
ಪೋಲಿಸರಿದ್ದಾರೆ, ಅವರೆಲ್ಲಾ ನೋಡಿಕೊಳ್ಳುತ್ತಾರೆ.
 
ಹೆಣ್ಣು ಬೆತ್ತಲೆಯಾಗಿ ಬದುಕಲು ಓಡಿದರೆ
ಜೊಲ್ಲಿಳಿಸಿಕೊಂಡು ನೋಡುವ
ಜಾಯಮಾನದ ಜನ,
ಭಾರತದ ಜನ…
 
ಅಯ್ಯೋ ಅಳಬೇಡಿ
ಇಂಡಿಯಾದ ಜನಗಳೇ,
ನಮ್ಮ ಭಾರತದ ಜನಕ್ಕೆ ಇದೆಲ್ಲಾ ಕಾಮನ್,
ಬಿಡಿ ನಾವಿದರ ನಡುವೆ ಹೇಗೊ
ಅಡ್ಜೆಸ್ಟ್ ಮಾಡಿಕೊಂಡು ಬದುಕುತಿದ್ದೇವೆ

‍ಲೇಖಕರು avadhi

May 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Mohan V Kollegal

    ಕವಿತೆಯಲ್ಲಿ ಆಕ್ರೋಶವಿದೆ, ಕಾಳಜಿ ಇದೆ. ನಮ್ಮಂತಹ ಯುವಕರಿಂದ ಇಂತಹ ಕವಿತೆಗಳು ಪಡಿಮೂಡಿದಾಗ ಅದಕ್ಕೆ ಹೆಚ್ಚು ಬೆಲೆಯಾಗುತ್ತದೆ. ಇಷ್ಟವಾಯಿತು. ಕವಿತೆಯ ಜರಡಿಗೆ ಹಾಕಿದಾಗ ಸಾಲುಗಳು ಕೆಲವು ರೂಪಕಗಳೊಂದಿಗೆ ಇನ್ನೂ ಬಿಗಿಯಾಗಬೇಕಾಗಿತ್ತು. ಕವಿತೆಯ ವಸ್ತುವಿನ ಬಗ್ಗೆ ಎರಡು ಮಾತುಗಳಿಲ್ಲ.

    ಪ್ರತಿಕ್ರಿಯೆ
  2. Roopa Satish

    Kavana, KaaLaji ishtavaaythu!
    oLagoLage alutiddaaLe bharataambe!
    idu nanna desha,
    suttella nanna janaru,
    nanan mannu, nanna ooru!!!!!!!!!!!!

    ಪ್ರತಿಕ್ರಿಯೆ
    • pravara

      ಜಯಕ್ಕ ನಿಮ್ಮ ಪ್ರತಿಕ್ರಿಯೆಯ ಗೂಢಾರ್ಥ ತಿಳಿಯಲಿಲ್ಲ

      ಪ್ರತಿಕ್ರಿಯೆ
  3. Badarinath Palavalli

    ಶತಮಾನ ಶತಮಾನಗಎಲ್‌ಈ ಕಳೆದರೂ ಹಲವು ಹೆಣ್ಣು ಮಕ್ಕಳ ಕಣ್ಣೀರ ಕಥೆ ಇಲ್ಲಿ ಮನೋವಿದ್ರಾವಕವಾಗಿ ಮೂಡಿಬಂದಿದೆ. ಎಂದು ತಿದ್ದೀತೋ ಕಾಲ?

    ಪ್ರತಿಕ್ರಿಯೆ
  4. chalam

    ತುಂಬಾ ಅವಸರವೇನಿತ್ತು ಪ್ರವರ.ಭಾರತದ ಬಗ್ಗೆ,ಇಂಡಿಯಾದ ಬಗ್ಗೆ,ಹೆಣ್ಣಿನ ಬಗ್ಗೆ ಬರೆದಿದ್ದೀರಿ ಅಂತಾ ಗೊತ್ತಾಯಿತು.ಆದರೆ ಕವನಕ್ಕೆ ಬೇಕಾದ ತೀವ್ರತೆ ಕಾಣಿಸಲಿಲ್ಲ.ನಿಮ್ಮ ಹಲವು ಒಳ್ಳೆ ಕವನಗಳನ್ನು ಓದಿರುವ ಸಲುಗೆಯಿಂದ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: