ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಜ್ಜೆ ಬರೆಯಲು ಬಿಟ್ಟೆ..

-ವಿಶಾಲ್ ಮ್ಯಾಸರ್

ನನ್ನೆದೆಗೆ ಬರುವಾಗ
ಹಾದಿಯ ಗುಂಗೆಕೆ
ಓ ನನ್ನ ಚಿಟ್ಟೆ
ಯಾವ ಸಾಲಿನ ನಡುವೆ
ಯಾವ ಹುಕಿಯ ಗೊಡವೆ

ಮರುಳು
ಮಾಡುವ ರೆಕ್ಕೆ
ರೆಕ್ಕೆಗಷ್ಟು ಚಿತ್ರ
ಓ ನನ್ನ ಚಿಟ್ಟೆ
ಹಾಳೆ ಹಾಳೆಯ ನಡುವೆ
ಹೆಜ್ಜೆ ಬರೆಯಲು ಬಿಟ್ಟೆ
ಗುರುತು ನಡೆಯಲು
ಬೆರಳ ತುದಿಯ ಕೊಟ್ಟೆ

ಸಂಜೆ ಗತ್ತಲ ಬಣ್ಣ
ಬೆಳಕು ಗಾಳಿಗೆ ತೂರಿ
ಕತ್ತಲಾಗುವ ಮುನ್ನ
ಹಾರಿ ಬಾ ಬನಕೆ
ತೋರಿ ಬಾ ಘನಕೆ
ತುಸು ಕುಂತು ತುಸು ನಿಂತು
ಕನಸುಗಳ ಹೆಣೆಯೇ
ಗಮ್ಯಕ್ಕೆ ನಿನ್ನ ಹೆಸರಿಡುವೆ

‍ಲೇಖಕರು Admin

24 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading