ಹೆಚ್ ಎಂ ಗಂಗಾಧರಯ್ಯ ಜೀವನಾಧಾರಿತ ‘ಅಕ್ಷರ ಗಂಗೆ’

ಸಂಕೇತದತ್ತ

ನಾಡು ಕಂಡ ಅತ್ಯಂತ ಹಿರಿಯ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಭೀಷ್ಮ ಎಂದೇ ಖ್ಯಾತರಾದವರು ಹೆಚ್ ಎಂ ಗಂಗಾಧರಯ್ಯ ಅವರು. ತುಮಕೂರು ಮೂಲದ ಈ ಮಹಾನ್ ಸಾಧಕ ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ತುಮಕೂರಿನಲ್ಲಿ ಶ್ರೀ ಸಿದ್ಧಾರ್ಥ ಸಂಸ್ಥೆಯನ್ನು ಕಟ್ಟಿ ಉತ್ತುಂಗಕ್ಕೆ ಬೆಳಸಿದ್ದಾರೆ. ಈ ಮೂಲಕ ಇಲ್ಲಿನವರ ಜನಮಾನಸದಲ್ಲಿ ನೆಲೆಯೂರಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಖ್ಯಾತರಾಗಿ ಊರಿಗೂ ಕೀರ್ತಿ ತಂದರು. ಒಂದು ಸಂಸ್ಥೆ ಮಾಡಬಹುದಾದ ಕೆಲಸವನ್ನು ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ಸಾಧಿಸಿ ತೋರಿಸಿದ್ದಾರೆ. ಇಂತಹ ವ್ಯಕ್ತಿಯು ನಮ್ಮೊಂದಿಗೆ ಇಲ್ಲವಾದರೂ ಅವರ ಸಾಧನೆಯ ಶಿಕ್ಷಣ ಸಂಸ್ಥೆಯು ಹಲವಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ. ಇಂತಹ ಗಂಗಾಧರಯ್ಯನವರ ಜೀವನವನ್ನು ಆಧಾರಿಸಿ ರಂಗಪ್ರಯೋಗವನ್ನು ಇದೇ ಮಾರ್ಚ್ 14ರಂದು ಸಂಜೆ 6ಕ್ಕೆ ಮೊದಲ ಬಾರಿಗೆ ಪ್ರದರ್ಶಿಸುತ್ತಿದ್ದಾರೆ.

ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿನ ‘ಕನ್ನಡ ಭವನ’ ದಲ್ಲಿ ಪ್ರದರ್ಶನ ಕಾಣಲಿದೆ. ತುಮಕೂರಿನಲ್ಲಿ ಕ್ರಿಯಾತ್ಮಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರಾದ ಕಲ್ಚರಲ್ ವ್ಯಾಲಿ ಟ್ರಸ್ಟ್’ ನವರು ಈ ಪ್ರಯೋಗವನ್ನು ಮೊದಲ ಬಾರಿಗೆ ರಂಗಕ್ಕೆ ತರುತ್ತಿದ್ದಾರೆ. ಭೂಮಿ ಬಳಗದ ಜಿ ಎಸ್ ಸೋಮಣ್ಣ ಅವರ ನೆನಪಿಕ ಕಾರ್ಯಕ್ರಮವಾಗಿ ಇದನ್ನು ಹಮ್ಮಿಕೊಳ್ಳಲಾಗಿದೆ. ತುಮಕೂರಿನ ಕ್ರಿಯಾಶೀಲ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳಸುವ ನಿಟ್ಟಿನಲ್ಲಿ ಈ ಸಂಸ್ಥೆಯು ಕೆಲಸ ಮಾಡುತ್ತಾ ಬಂದಿದೆ.

ರಂಗತಜ್ಞರಾದ ತುಮಕೂರು ಶಿವಕುಮಾರ್, ಮಹಾಲಿಂಗು ನಾಟಕಮನೆ, ಕಲಾವಿದ ಪ್ರಭು ಹರಸೂರ್ ಹಾಗೂ ಕಲರ್ಸ್ ಗ್ರೂಪ್ನ ಸಹಕಾರವಿದೆ. ಪ್ರಯೋಗದ ಹೂರಣ ಹೆಚ್ ಎಂ ಗಂಗಾಧರಯ್ಯ ಎಂಬ ಈ ಮಹಾನ್ ವ್ಯಕ್ತಿ ತಮ್ಮ ಜೀವಮಾನವನ್ನೇ ಮಕ್ಕಳ ಓದಿಗಾಗಿ ಮುಡಿಪಿಟ್ಟು ‘ಅಕ್ಷರದಾತ’ ಎನ್ನಿಸಿದ್ದರು. ಇಂತಹವರ ಜೀವನಚರಿತ್ರೆಯೇ ಈ ನಾಟಕ ‘ಅಕ್ಷರ ಗಂಗೆ’ ರಂಗಪ್ರಯೋಗ. ಹಸಿದವರ, ಅಕ್ಷರ ಕಾಣದವರ ಬದುಕನ್ನು ಕಟ್ಟಲು ಮುಂದಾದ ಗಂಗಾಧರಯ್ಯನವರ ಬದುಕು ತೀರಾ ಬಡತನದಿಂದ ಕೂಡಿತ್ತು. ಸುಂದರ ಕನಸು ಹಾಗೂ ಛಲವೇ ಅವರಲ್ಲಿ ತುಂಬಿತ್ತು.

ತಮ್ಮಂತಹ ಸಾವಿರಾರು ಮಕ್ಕಳಿಗೆ ಅಕ್ಷರ ದೊರೆಯುವಂತೆ ಮಾಡಿದರು. ತಮಗೆ ಸಿಗದದ್ದನ್ನ ಮುಂಬರುವ ಮಕ್ಕಳಿಗೆ ಸಿಗುವಂತೆ ಮಾಡುವ ಕನಸು ಇವರದಾಗಿತ್ತು. ಅಂಬೇಡ್ಕರ್, ಬುದ್ಧ, ಗಾಂಧಿ, ವಿನೋಭ ಬಾವೆಯವರಂತವರ ಮಾರ್ಗದರ್ಶನವನ್ನು ಗಂಗಾಧರಯ್ಯನವರು ಅನುಸರಿಸಿದ್ದರು.

ಈ ಪ್ರಯೋಗದಲ್ಲಿ ಗಂಗಾಧರಯ್ಯನವರ ಬಾಲ್ಯದ ಘಟನೆಗಳು ಹಾಗೂ ಅವರ ಆವತ್ತಿನ ಆಸೆ-ಆಕಾಂಕ್ಷೆ ಹಾಗೂ ಕನಸುಗಳನ್ನು ಈ ರಂಗಪಠ್ಯದಲ್ಲಿ ತರಲಾಗಿದ್ದು ಆ ಎಲ್ಲಾ ಮಜಲುಗಳನು ಇಲ್ಲಿ ದೃಶ್ಯೀಕರಿಸಲಾಗಿದೆ. ಇವರು ಚಿತ್ರಕಲಾ ಪ್ರವೀಣರಾಗಿದ್ದರಲ್ಲದೇ ಚಿತ್ರಕಲಾ ಶಿಕ್ಷಕರೂ ಆಗಿದ್ದರು. ಹಾಗಾಗಿ ಅವರ ಕನಸುಗಳೆಲ್ಲ ಅವರೇ ಬಿಡಿಸಿದ ಚಿತ್ರಗಳಂತೆಯೇ ಗೋಚರಿಸುತ್ತವೆ.ಇಂತಹ ದೃಶ್ಯಗಳನ್ನು ಈ ಪ್ರಯೋಗದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

ಗಾಂಧೀಜಿ ಹಾಗೂ ವಿನೋಭಾಜಿ ಅವರನ್ನು ಭೇಟಿ ಮಾಡಿದ ನಂತರದಲ್ಲಿ ಗಂಗಾಧರಯ್ಯನವರಲ್ಲಿ ಹೊಸ ಚೇತನವು ಹೇಗೆಲ್ಲಾ ಸಾಧನೆಯ ದಾರಿಯಲ್ಲಿ ಕ್ರಮಿಸಲು ಅನುವಾಯ್ತು ಎಂಬುದನ್ನು ಇಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಮಾಡಲಾಗಿದೆ. ರಂಗದ ಮೇಲೆ ಮದನ್ ಮೋಹನ್, ಬಿ ಶಿವಪ್ರಸಾದ್, ಶ್ರೀನಿವಾಸ ಮೂರ್ತಿ ಎಲ್, ಮಹದೇವ ಮುಂಜಿ, ಸುವi ಜಿ, ಲಿಖಿತ್ ನಾಯಕ್ ಎಂ ಎನ್, ಡಾ ರಂಗಸ್ವಾಮಿ ಎಂ ಆರ್, ಸುದೀಪ್ ಸ್ವಾಮಿ, ಕಿರಣ್ ಆರ್, ರಶ್ಮಿ, ಅಂಜನಾ ದೇವಿ ಬಿ, ಪ್ರಕೃತಿ ಹಾಗೂ ಪುಷ್ಪಲತ ಕೆ ಜಿ ಅಭಿನಯಿಸುತ್ತಿದ್ದಾರೆ.

ರಂಗದ ನೇಪಥ್ಯ ಪ್ರಯೋಗದ ರಚನೆ ಹಾಗೂ ರಂಗಪಠ್ಯ ನವೀನ್ ಭೂಮಿ ಅವರದ್ದಾಗಿದ್ದು, ಪರಿಕಲ್ಪನೆ ಡಾ ಕೆ ಎಸ್ ಕುಮಾರ್ ಅವರದ್ದು. ಚೇತನ್ ತುಮಕೂರು ಈ ಪ್ರಯೋಗವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿ ನಿರ್ದೇಶಿಸುತ್ತಿದ್ದಾರೆ. ಸಂಗೀತವನ್ನು ಚಿದಾನಂದ ದೇವರಮನಿ, ವಸ್ತ್ರವಿನ್ಯಾಸವನ್ನು ಗಿರೀಶ್ ಹರಸೂರ್ ಹಾಗೂ ನಿರ್ವಹಣೆಯನ್ನು ದೀಕ್ಷಾ ಕೋಟೆ ಮಾಡಲಿದ್ದಾರೆ. ಪ್ರಸಾದನವನ್ನು ಸುನೀಲ್ ಚೇತನ್, ಬೆಳಕಿನ ವಿನ್ಯಾಸವನ್ನು ನವೀನ್ ಭೂಮಿ ಹಾಗೂ ಪ್ರಚಾರ ಕಾರ್ಯವನ್ನು ಎಂ ಎಸ್ ಸಿದ್ಧರಾಜು ನಿರ್ವಹಿಸುತ್ತಿದ್ದಾರೆ.

‍ಲೇಖಕರು Avadhi

March 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: