ಫೋಟೋಗಳು: ಶ್ರೀಜಾ ವಿ ಎನ್, ಪ್ರವರ ಕೊಟ್ಟೂರು, ಮಹೇಶ್ ಎಸ್.ಪಿ, ವಿಷ್ಣು ಬೀ ಕಲ್ಚರ್, ಮುರಳಿ ಕಾಟಿ ಸಂಗ್ರಹದಿಂದ
—
ಖ್ಯಾತ ಲೇಖಕಿ ಹೆಚ್ ಆರ್ ಸುಜಾತಾ ಅವರ ಮೊದಲ ಕಥಾ ಸಂಕಲನ ಪದುಮ ಪುರುಷ ವನ್ನು ಆತಮ್ಮೆಯರ ಸಮ್ಮುಖದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ಹಿರಿಯ ಅಧಿಕಾರಿಗಳೂ, ಸಾಹಿತ್ಯ ಪ್ರಿಯರೂ ಆದ ಡಾ ಬಿ ಆರ್ ರವಿಕಾಂತೇಗೌಡ, ಜಯರಾಂ ರಾಯಪುರ, ಡಾ ನೆಲ್ಲುಕುಂಟೆ ವೆಂಕಟೇಶ್ ಹಾಗೂ ವಿಮರ್ಶಕ ಕೆ ವೈ ನಾರಾಯಣ ಸ್ವಾಮಿ ಅವರು ಮುಖ್ಯ ಅತಿಥಿಗಳಾಗಿದ್ದರು.
ಇದು ಡಾ ಮಮತಾ ಹಾಗೂ ಮುರಳಿ ಕಾಟಿ ಅವರ ‘ಕೌದಿ ಪ್ರಕಾಶನ’ದ ಪ್ರಕಟಣೆ. ‘ಬೀ ಕಲ್ಚರ್’ನ ವಿಷ್ಣು ಕುಮಾರ್ ಅವರ ವಿನ್ಯಾಸ.
ಭೂಮಿಕಾ ರಾಜನ್, ಚೈತ್ರಾ ಶಿವಯೋಗಿಮಠ, ಬಿ ಆರ್ ಶ್ರುತಿ, ದಯಾ ಗಂಗನಘಟ್ಟ, ಜಿ ಎನ್ ಮೋಹನ್, ಎ ಆರ್ ಪ್ರಕಾಶ್ ಕೃತಿ ಹಾಗೂ ಕೃತಿಕಾರರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಲೇಖಕಿ ಹೆಚ್ ಆರ್ ಸುಜಾತಾ ತಮ್ಮ ಬರಹದ ಹಿನ್ನೆಲೆಯ ಪ್ರೇರಣೆಗಳ ಬಗ್ಗೆ ಮಾತನಾಡಿದರು, ಕವಿ ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.























0 Comments