ಪ್ಯಾಲಿಸ್ತೀನಿನ ಕಂದನಿಗೊಂದು ಜೋಗುಳ..

ಉರ್ದು ಮೂಲ: ಫೈಜ್ ಅಹಮದ್ ಫೈಜ್

ಕನ್ನಡಕ್ಕೆ: ಎಸ್. ಸಿರಾಜ್ ಅಹಮದ್

ಈ ಕವಿತೆಗೆ ಪ್ಯಾಲಿಸ್ತೀನ್ ನ ಮಕ್ಕಳು ರಚಿಸಿದ ಚಿತ್ರಗಳನ್ನು ಬಳಸಲಾಗಿದೆ. ಮಕ್ಕಳು ರಚಿಸಿದ ಚಿತ್ರಗಳನ್ನು ಪ್ರದರ್ಶಿಸುವ ವಿರುದ್ಧ ನಿಷೇಧ ಹೇರಲಾಗಿತ್ತು.

ಅಳಬೇಡ ಕಂದಾ

ನಿನ್ನ ಅಮ್ಮನಿಗೆ ಅತ್ತೂ ಅತ್ತೂ ಈಗ ತಾನೇ ಸಣ್ಣದೊಂದು  ಜೊoಪು 

ಹಿಡಿದಿದೆ

ಅಳಬೇಡ ಕಂದಾ

ನಿನ್ನ ಅಪ್ಪನಿಗೆ ಈಗ ತಾನೇ ನೋವುಗಳಿಂದ ಮುಕ್ತಿ ಸಿಕ್ಕಿದೆ

ಅಳಬಾರದು ಮಗುವೇ

ನಿನ್ನ ತಮ್ಮ ಈಗ ತಾನೇ ಕನಸಿನಲ್ಲಿ ಹಿಡಿದ ಚಿಟ್ಟೆಗಳನ್ನು ಹುಡುಕಿಕೊಂಡು ಇನ್ನೊಂದು ದೇಶಕ್ಕೆ ಕಾಲಿಟ್ಟಿದ್ದಾನೆ

ಅಳಬೇಡ ಕಣೋ

ನಿನ್ನ ದೊಡ್ಡಕ್ಕನ ಮದುವೆ ಮೆರವಣಿಗೆಯ ಪಲ್ಲಕ್ಕಿ ಈಗ ತಾನೇ ಗಂಡಿನ ಮನೆ ತಲುಪಿದೆ

ಅಳಬಾರದು ಕಂದಾ

ಅವರೆಲ್ಲ ಮನೆಯಂಗಳದಲ್ಲಿ ಇವಾಗ ಸೂರ್ಯನ ಶವಕ್ಕೆ ಸ್ನಾನ ಮಾಡಿಸಿ

ಚಂದ್ರನನ್ನು ಹೂಳಲು ಗುಣಿ ತೋಡಿ ಹೋಗಿದ್ದಾರೆ

ಅಳಬಾರದಪ್ಪಾ

ಅಮ್ಮ ಅಪ್ಪ , ಅಕ್ಕತಮ್ಮ  ಸೂರ್ಯಚಂದ್ರ

ನಿನ್ನ ನೋಡಿದರೆ ಇನ್ನಷ್ಟು ಅಳಿಸಿಬಿಡುತ್ತಾರೆ 

ನೀ ನಕ್ಕರೆ

ಅವರೆಲ್ಲ ಒಂದಲ್ಲ ಒಂದು ದಿನ ಇನ್ನಾವುದೋ ವೇಷದಲ್ಲಿ

ನಿನ್ನ ಜೊತೆ ಆಡಲು ಬಂದೇ ಬರುತ್ತಾರೆ

‍ಲೇಖಕರು avadhi

July 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: