ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೆ ನೆನಪಾಗುವರು…

ಡಾ ಚಿದಾನಂದ ಕಮ್ಮಾರ

ಈ ಜೀವಂತ ನೆಲದ ಮೇಲೆ
ನಾಕು ದಿನದ ಬದುಕು ಬಾಳಿ
ಇತಿಹಾಸದ ಪುಟಗಳಲಿ
ಹೂತು ಹೋದವರು

ಭವಿಷ್ಯತ್ತಿಗಾಗಿ ವರ್ತಮಾನದ ಬವಣೆಯಲಿ
ಬೆಂದೂ ಬಿಸಿಯುಸಿರಗೈಯದವರು
ಮುಳುಗದ ಸೂರ್ಯನ ಕಡುಬಿಸಿಲಿಗೆ ಮೈಯೊಡ್ಡಿ
ತಂಗಾಳಿಯ ಹಿತವನೆಮಗೆ ತೂರಿಬಿಟ್ಟವರು

ಸ್ಬಾತಂತ್ರ್ಯದ ಸೌಭಾಗ್ಯಕ್ಕಾಗಿ
ಹಣೆ ಉಳಿಸಿಕೊಂಡು ಬರಹ ಅಳಿಸಿಕೊಂಡವರು
ಸ್ವರಾಜ್ಯ ಕಲ್ಪನೆಯ ಸುಖವನುಂಡು ಡೇಗಿದವರು
ಭವಿಷ್ಯತ್ತಿನ ಕನಸ ಕೊಂಡು ವರ್ತಮಾನದ
ಬದುಕ ಕಳೆದುಕೊಂಡವರು

ರಕ್ತ, ಮಾಂಸ, ಮೂಳೆಗಳ ಚರಕದಲಿ
ವಿಶ್ವಾಸದ ನೂಲ ನೂತು
ಬದುಕ ಬಟ್ಟೆಯೆಮಗೆ ತೊಡಿಸಿದವರು
ಪಾರತಂತ್ರ್ಯವ ಪಾತಾಳಕ್ಕಿಳಿಸಿ
ದಾಸ್ಯವನು ಕೊಂದ ನಿರ್ದೋಷಿಗಳು

ಸ್ವಾತಂತ್ರ್ಯವ ಸೂರೆ ಮಾಡಿ
ಸಮಾಧಿಯಾದವರು
ಸತ್ಯ, ಅಹಿಂಸೆ, ನ್ಯಾಯ, ನೀತಿಗಳೊಂದಿಗೆ
ಮರೆತು ಹೋಗುವವರು;
ಆಗೊಮ್ಮೆ, ಈಗೊಮ್ಮೆ ಹೀಗೆ
ನೆನಪಾಗುವವರು…

‍ಲೇಖಕರು Admin

2 October, 2022

1 Comment

  1. Sunita B.Tewari

    Rumba Valle kavitegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading