ಪ್ರಿಯರೇ

ಡಾ| ಮನೋಹರ ಉಪಾಧ್ಯ ಮತ್ತು ನನ್ನ ಜಂಟಿ ನಿರ್ಮಾಣದ ಯಕ್ಶ ದಾಖಲೀಕರಣದಲ್ಲಿ ಬಡಗು ತಿಟ್ಟಿನ ಹಿಡಿಂಬಾ ಕಲ್ಯಾಣ ಈಗ ಮಾರಾಟಕ್ಕೆ ಲಭ್ಯವಿದೆ. ಇದರ ಅಂದು ಇಂದುಗಳ ಕುರಿತು ನಾನು ಸಾಕಷ್ಟು ದೀರ್ಘವಾಗಿ ಬ್ಲಾಗಿನಲ್ಲಿ ಈಗಾಗಲೇ ಕೊರೆದಿದ್ದೇನೆ, ನೀವು ಅವಶ್ಯ ನನ್ನ ಬ್ಲಾಗಿನ ಯಕ್ಶಗಾನ ವಿಭಾಗದಲ್ಲಿ ಅವನ್ನು, ದಾಖಲೀಕರಣ ನಡೆದ ಪರಿಯ ಕಿರು ಚಿತ್ರ ಸಹಿತ ಅಸಂಖ್ಯ ಛಾಯಾ ಚಿತ್ರಗಳನ್ನೂ ಈಗಾಗಲೇ ಓದಿರದಿದ್ದರೆ ಓದಿ, ನೋಡಿ ನಿರ್ಧರಿಸಿಕೊಳ್ಳಿ.
ಅಲ್ಲಿ ಉಲ್ಲೇಖಿಸಿರುವಂತೆ ಈ ಬಡಗು ತಿಟ್ಟಿನ ಡೀವೀಡಿಯ ಎಲ್ಲಾ ಮಾರಾಟ ಹಕ್ಕುಗಳನ್ನೂ ಎಂ.ಜಿ. ಎಂ ಕಾಲೇಜಿನ ಯಕ್ಷಗಾನ ಕೇಂದ್ರಕ್ಕೆ ಉಚಿತವಾಗಿ ಬಿಟ್ಟು ಕೊಟ್ಟಿರುವುದು ನಿಮಗೆ ತಿಳಿದೇ ಇದೆ. ಅವರಾದರೋ ಇದನ್ನು ಕೇವಲ ನಿಧಿಸಂಚಯನದ ಸಾಧನವಾಗಿ ಭಾವಿಸದೆ ಸಮ-ಔದಾರ್ಯದಲ್ಲಿ ಕೇವಲ (ತಲಾ) ರೂ ಒಂದು ನೂರಕ್ಕೆ ಕೊಡುತ್ತಿದ್ದಾರೆ. ಎಲ್ಲಾ ಆಸಕ್ತರು ನೇರ ಅವರನ್ನು ಸಂಪರ್ಕಿಸಿ ಪ್ರತಿಗಳನ್ನು ಕೊಳ್ಳಬಹುದು.
ಅವರ ವಿಳಾಸ:
ನಿರ್ದೇಶಕರು, ಯಕ್ಷಗಾನ ಕೇಂದ್ರ, ಎಂ.ಜಿ.ಎಂ ಕಾಲೇಜು,
ಕುಂಜಿಬೆಟ್ಟು, ಉಡುಪಿ ೫೭೬೧೦೨ ದೂರವಾಣಿ: ೨೫೨೧೧೫೯
ಮಂಗಳೂರಲ್ಲೇ ಕೊಳ್ಳುವ ಅನುಕೂಲವಿರುವವರು ಬೇಕಾದರೆ ನನ್ನನ್ನೋ ಡಾ| ಮನೋಹರ ಉಪಾಧ್ಯರನ್ನೋ ಸಂಪರ್ಕಿಸಬಹುದು. ಅಂಚೆಯಲ್ಲಿ ಕಳಿಸುವುದಾಗಲೀ ಇತರ ವ್ಯವಸ್ಥೆಗಳನ್ನು ಮಾಡುವುದಾಗಲೀ ನಮಗೆ ಸಾಧ್ಯವಾಗದು – ಕ್ಷಮೆಯಿರಲಿ. ಆದರೆ ದಾಖಲೀಕರಣ ನೋಡಿದ ಮೇಲಿನ ನಿಮ್ಮ ಅಭಿಪ್ರಾಯಗಳು ಮಾತ್ರ ಅವಶ್ಯ ನಮಗೇ ಬರಲಿ.
ತೆಂಕು ತಿಟ್ಟಿನ ಡೀವೀಡಿ ಇನ್ನೂ ಸಂಕಲನದ ಹಂತ ದಾಟುವುದಾಗಿಲ್ಲ. ಅದು ತಯಾರಾದ ಕೂಡಲೇ ಹೀಗೇ ತಿಳಿಸುತ್ತೇನೆ. ದಯವಿಟ್ಟು ಅಲ್ಲಿವರೆಗೆ ಸಹನೆಯಿರಲಿ
ಇಂತು ವಿಶ್ವಾಸಿ
ಅಶೋಕವರ್ಧನ
—
Athree Book Center
PH: +91-824-2425161
www.athreebook.com
'ಹಿಡಿಂಬೆ' ಎಂಬ ಸಾಹಸ
ನಿಮಗೆ ಇವೂ ಇಷ್ಟವಾಗಬಹುದು…





0 Comments