
ಅಣೇಕಟ್ಟೆ ವಿಶ್ವನಾಥ್
ಹಿಂದೂಸ್ಥಾನ್ ಲಿವರ್ ಕಂಪನಿ ನನ್ನ ಕ್ಷಮೆ ಕೇಳಿದೆ.
ಇದು ತೆಂಗು ಬೆಳೆಗಾರರಿಗೆ ಅರ್ಪಣೆ.
ಹಿಂದೂಸ್ಥಾನ ಲಿವರ್ ಕಂಪನಿಯು ತನ್ನ ಹೊಸ ಉತ್ಪನ್ನ ವ್ಯಾಸಲಿನ್ ಇಂಟೆನ್ಸಿವ್ ಕೇರ್ ಬಗ್ಗೆ ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿ ತೆಂಗಿನ ಎಣ್ಣೆಯ ಬಗ್ಗೆ ಅಪಪ್ರಚಾರ ಮಾಡುತ್ತಿತ್ತು.
ಟಿವಿ ಜಾಹಿರಾತು ಮತ್ತು ಪತ್ರಿಕಾ ಜಾಹಿರಾತುಗಳ ಮೂಲಕ ಸಾಂಪ್ರದಾಯಿಕ ತೆಂಗಿನೆಣ್ಣೆಯು ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಅಷ್ಟೊಂದ ಉಪಯುಕ್ತವಲ್ಲ ಎಂದು ಹೇಳಿ ತಮ್ಮ ಉತ್ಪನ್ನದ ಬ್ರಾಂಡ್ ಅನುಷ್ಠಾನ ಮಾಡುತ್ತಿತ್ತು.
ಇದರ ವಿರುದ್ಧ ಆನ್ ಲೈನ್ ಮೂಲಕ ನಾನು ಚಳವಳಿ ರೂಪಿಸಿದೆ.
ನನ್ನ ಕಾಳಜಿಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕೇಂದ್ರಿಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಖುದ್ಧಾಗಿ ಈ ಮೇಲ್ ಬರೆದು ನನಗೆ ಬೆಂಬಲ ತೋರಿದರು.
ಈ ಎಲ್ಲ ಬೆಳವಣಿಗೆಗಳನ್ನು ಆನ್ ಲೈನ್ ಮೂಲಕ ಗಮನಿಸಿದ ಹಿಂದೂಸ್ಥಾನ್ ಲಿವರ್ ಕಂಪನಿಯು ಆಗಿರುವ ತಪ್ಪಿಗೆ ಖುದ್ದಾಗಿ ಕ್ಷಮೆ ಕೋರಿದೆ. ತಪ್ಪನ್ನು ತಿದ್ದಿಕೊಳ್ಳುವುದಾಗಿ ಹೇಳಿದೆ.
ಎಲ್ಲರೂ ಚಳಿಗಾಲದಲ್ಲಿ ನಿರ್ಭೀತಿಯಿಂದ ಚರ್ಮದ ರಕ್ಷಣೆಗೆ ತೆಂಗಿನೆಣ್ಣೆ ಬಳಸಿರಿ.






ಸ್ವಾಮಿ,
ನಿಮ್ಮೊಂದಿಗೆ ಕ್ಷಮೆ ಕೇಳಿದ ಹಿಂದುಸ್ತಾನ್ ಲಿವರ್ ತಮ್ಮ ಜಾಹೀರಾತಿನಲ್ಲಿ ಬದಲಾವಣೆಯನ್ನೇನು ಮಾಡಿಲ್ಲ. ದಯವಿಟ್ಟು ಗಮನಿಸಿ.