ಎಸ್ ಸಿ ದಿನೇಶ್ ಕುಮಾರ್

ಕನ್ನಡ ಮತ್ತು ಇಂಗ್ಲಿಷ್ ಜತೆ ಹಿಂದಿ ಇದ್ದರೇನು ಸಮಸ್ಯೆ ಎಂದು ಕೇಳುತ್ತಿರುವ ನನ್ನ ಗೆಳೆಯರಿಗೆ ಒಂದಷ್ಟು ವಿವರಣೆಗಳು:
1. ಹಿಂದಿಯೂ ಕನ್ನಡದ ಹಾಗೆ ಈ ದೇಶದ ಒಂದು ಪ್ರಾದೇಶಿಕ ಭಾಷೆ. ಅದು ಕೆಲವರು ಭಾವಿಸಿರುವ ಹಾಗೆ ರಾಷ್ಟ್ರ ಭಾಷೆಯಲ್ಲ.
2. ಮಧ್ಯಪ್ರದೇಶವನ್ನು ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆಯೂ ಅಲ್ಲ. ಹಿಂದಿಯನ್ನು ಹೋಲುವ ಭಾಷೆಗಳು ಹಿಂದಿಯಲ್ಲ. ಉದಾಹರಣೆಗೆ ಗುಜರಾತಿ, ಪಂಜಾಬಿ, ಭೋಜಪುರಿ, ರಾಜಸ್ತಾನಿ ಇತ್ಯಾದಿ.
3. ಹಿಂದಿಯೂ ದೇಶದ ಇತರ ಭಾಷೆಗಳಂತೆ ಒಂದಾಗಿರುವುದರಿಂದ ಅದನ್ನು ದೇಶದ ಎಲ್ಲೆಡೆಯೂ ಬಳಸಬೇಕು ಎಂಬುದು ಮೂರ್ಖತನ. ಈಗಾಗಲೇ ಆಯಾಯ ಪ್ರಾದೇಶಿಕ ಭಾಷೆ ಗೊತ್ತಿರದವರಿಗಾಗಿ ಎಲ್ಲೆಡೆ ಇಂಗ್ಲಿಷ್ ಭಾಷೆಯನ್ನು ಬಳಸಲಾಗುತ್ತಿದೆ. ದಕ್ಷಿಣ-ಉತ್ತರ ಭಾರತೀಯರಿಗೆ ಇಂಗ್ಲಿಷ್ ಅಪರಿಚಿತ ಭಾಷೆಯೇನಲ್ಲ. ಆದರೆ ದಕ್ಷಿಣ ಭಾರತೀಯರಿಗೆ ಹಿಂದಿ ಅರ್ಥವಾಗದ, ಪರಕೀಯ ಭಾಷೆ.
4. ಉತ್ತರ ಪ್ರದೇಶದಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಲಾಗುವುದಿಲ್ಲ, ಒರಿಸ್ಸಾದಲ್ಲಿ ತಮಿಳು ನಾಮಫಲಕವನ್ನು ಹಾಕಲು ಸಾಧ್ಯವಿಲ್ಲ. ಗುಜರಾತ್ ನಲ್ಲಿ ಮಲೆಯಾಳಂ ಫಲಕ ಬಳಸಲು ಆಗುವುದಿಲ್ಲ. ಹೀಗಾಗಿ ಕರ್ನಾಟಕದಲ್ಲೂ ಹಿಂದಿ ನಾಮಫಲಕವನ್ನು ಹಾಕಲು ಸಾಧ್ಯವಿಲ್ಲ, ಹಾಕಬಾರದು.
5. ಕನ್ನಡ, ತಮಿಳು, ತೆಲುಗು ಮತ್ತಿತರ ದೇಶೀಯ ಭಾಷೆಗಳಿಗಿರುವಷ್ಟು ಸಮೃದ್ಧ ಇತಿಹಾಸ ಹಿಂದಿ ಭಾಷೆಗಿಲ್ಲ. ಅದು ಬೆಳೆದಿರುವುದೇ ಅತ್ಯಂತ ಕೃತಕವಾಗಿ. ತ್ರಿಭಾಷಾ ಸೂತ್ರದಿಂದಾಗಿ ಹಿಂದಿಯನ್ನು ಬಲವಂತವಾಗಿ ಇತರ ರಾಜ್ಯಗಳಿಗೆ ತುರುಕಲಾಗುತ್ತಿದೆ.
6. ಹಿಂದಿಯಿಂದ ದೇಶದ ಏಕತೆಗೆ ಅನುಕೂಲ ಎಂಬ ಮಾತು ಮರಾಮೋಸದ ಸುಳ್ಳು. ಪರಕೀಯ ಭಾಷೆಯನ್ನು ಯಾವುದೇ ರಾಜ್ಯದ ಮೇಲೆ ಹೇರುವುದರಿಂದ ಈ ದೇಶ ಒಂದಾಗಿರಲು ಸಾಧ್ಯವಿಲ್ಲ. ಹಿಂದಿ ಹೇರಿಕೆ ಒಂದರ್ಥದಲ್ಲಿ ದೇಶವನ್ನು ವಿಘಟನೆಯತ್ತ ತಳ್ಳುತ್ತಿದೆ.
7. ಹಿಂದಿ ಇದ್ದರೆ ಏನಂತೆ ಎಂದು ಉಡಾಫೆ ತೋರಿದ್ದರಿಂದಾಗಿಯೇ ಇಂದು ಪೋಸ್ಟ್ ಆಫೀಸುಗಳಲ್ಲಿ ಇಂಗ್ಲಿಷ್-ಹಿಂದಿ ಮಾತ್ರ ಇವೆ, ಕನ್ನಡವಿಲ್ಲ. ಬ್ಯಾಂಕುಗಳ ಚೆಕ್ ಬುಕ್ ಗಳಲ್ಲಿ ಕನ್ನಡವಿಲ್ಲ, ಹಿಂದಿಯಿದೆ. ಇಂಥ ನೂರಾರು ಉದಾಹರಣೆಗಳು ಇವೆ. ಹಿಂದಿಯಿಂದಾಗಿ ಕನ್ನಡಿಗರ ಉದ್ಯೋಗಕ್ಕೂ ಸಂಚಕಾರ ಬಂದಿದೆ.
ಇದಿಷ್ಟೂ ವಿವರಣೆಯಿಂದ ನನ್ನ ಗೆಳೆಯರಿಗೆ ಸಮಾಧಾನವಾಗದಿದ್ದಲ್ಲಿ ಇನ್ನಷ್ಟು ಕಾರಣಗಳನ್ನು ಪಟ್ಟಿ ಮಾಡಬಲ್ಲೆ.

ಈ ಅನುಮಾನಗಳಿಗೆ ಉತ್ತರ ನೀಡುವಿರಾ?
1. ಹಿಂದಿಯನ್ನು ಸಂವಿಧಾನದಲ್ಲಿ ಆಡಳಿತದ ಅಧಿಕೃತ ಭಾಷೆ ಎಂದು ಸೇರಿಸಿದ್ದಾರೆ ಎನ್ನುತ್ತಾರಲ್ಲ, ಅದು ಸುಳ್ಳೆ?
2. ಹಿಂದಿ ಉಪಯೋಗಕ್ಕೆ ಬರುವುದು ಮಧ್ಯಪ್ರದೇಶದಲ್ಲಿ ಮಾತ್ರವೆ? ಕರ್ನಾಟಕದಿಂದ ಉತ್ತರದ ಬೇರೆ ರಾಜ್ಯಗಳಿಗೆ ವರ್ಗಾವಣೆಗೊಂಡು ಹೋದವರು ಹಿಂದಿಯಿಲ್ಲದೆ, ಇಂಗ್ಲೀಷ್ ಮೇಲೆಯೇ ವ್ಯವಹಾರ ನಡೆಸಲು ಸಾಧ್ಯವೆ? ಹಾಗಿದ್ದಲ್ಲಿ ಹೇರಿಕೆಯ ಪ್ರಶ್ನೆಯಿಲ್ಲ ಅಲ್ಲವೆ?
3. ದಕ್ಷಿಣ ಭಾರತದವರಿಗೆ ಹಿಂದಿ ಅರ್ಥವಾಗದ ಪರಕೀಯ ಭಾಷೆ ಎನ್ನಲು ಏನು ಆಧಾರ? ಹಿಂದಿ ಅಥವಾ ಸಂಸ್ಕೃತ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾದ ಅಗತ್ಯ ಇವತ್ತಿನ ಶಾಲೆಯ ಮಕ್ಕಳಿಗೆ ಇಲ್ಲವೆ? ಹಾಗೆ ನೋಡಿದರೆ ಇಂಗ್ಲೀಷ್ ಕೂಡ ಪರಕೀಯ ಭಾಷೆಯೇ ಅಲ್ಲವೆ? ಮತ್ತು ಸಂಸ್ಕೃತಕ್ಕೆ ಸಮೃದ್ಧ ಇತಿಹಾಸವೇನೋ ಇದೆ. ಆದರೆ ಕೇವಲ ಅಷ್ಟರಿಂದಲೇ ಬಂದ ಭಾಗ್ಯವೇನು?
4. ಕೇವಲ ಮಧ್ಯಪ್ರದೇಶದ ಮಾತೃಭಾಷೆಯಾದ ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಕನ್ನಡಿಗರು ಯಾವ ಯಾವ ಉದ್ಯೋಗಕ್ಕೆ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ?
5. ನಾವು ಹಿಂದಿಯಲ್ಲೇ ಒಂದು ಪತ್ರವನ್ನೊ, ಅರ್ಜಿಯನ್ನೊ, ಪರೀಕ್ಷೆಯನ್ನೊ ಬರೆಯುವುದು ಕಡ್ಡಾಯ ಎಂಬ ಸ್ಥಿತಿ ಇದೆಯೆ ಅಥವಾ ಈಗ ನಿರ್ಮಾಣವಾಗಿದೆಯೆ?
6. ಸ್ಥಳೀಯ ಭಾಷೆ ಬರದಿದ್ದರೆ ಕರ್ನಾಟಕದಲ್ಲಿಯೂ ಕೆಲವೊಂದು, ವಿಶೇಷತಃ ಗ್ರಾಹಕರೊಂದಿಗೆ ವ್ಯವಹರಿಸಬೇಕಾದ ಖಾಸಗಿ ರಂಗದ ಉದ್ಯೋಗಗಳು ಕೂಡ ಸಿಗುವುದಿಲ್ಲ. ಅದು ಕೂಡ ಹೇರಿಕೆಯೆ?
7. ಕನ್ನಡ ಉಳಿಯಬೇಕಿದ್ದರೆ ಅದನ್ನು ಕನ್ನಡಿಗರು ಬಳಸಬೇಕು. ಅವರು ಕನ್ನಡಕ್ಕೆ “ಗುಡ್ ಬೈ” ಹೇಳಿ, ಕೇವಲ ಹಿಂದಿ ಬಳಸದೇ ಇರುವುದರಿಂದ ಮತ್ತು ಹಿಂದಿ ವಿರೋಧಿಸಿ ಬೊಬ್ಬಿಡುವುದರಿಂದಲೇ ಕನ್ನಡ ಬೆಳೆಯುವುದಿಲ್ಲ ಅಲ್ಲವೆ?
8. ಇವತ್ತು ನಾವು ನೀವು ಯಾವ ಭಾಷೆ ಬಳಸುತ್ತಿದ್ದೇವೆ ಎನ್ನುವುದೇ ಒಂದು ಭಾಷೆಯನ್ನು ಗಟ್ಟಿಯಾಗಿ ನಿಲ್ಲಿಸುವ ಶಕ್ತಿ. ಯಾವ ಸರ್ಕಾರಿ ಆದೇಶವೂ, ನ್ಯಾಯಾಲಯದ ತೀರ್ಪೂ ಅದರೆದುರು ನಿಲ್ಲುವುದಿಲ್ಲ. ಏನು ಹೇಳುತ್ತೀರಿ?
1. ಹಿಂದಿಯನ್ನು ಸಂವಿಧಾನದಲ್ಲಿ ಆಡಳಿತದ ಅಧಿಕೃತ ಭಾಷೆ ಎಂದು ಸೇರಿಸಿದ್ದಾರೆ ಎನ್ನುತ್ತಾರಲ್ಲ, ಅದು ಸುಳ್ಳೆ?
—- ಹೌದು, ಅದು ನನಗೆ ತಿಳಿದ ಮಟ್ಟಿಗೆ ಸುಳ್ಳು,
2. ಹಿಂದಿ ಉಪಯೋಗಕ್ಕೆ ಬರುವುದು ಮಧ್ಯಪ್ರದೇಶದಲ್ಲಿ ಮಾತ್ರವೆ? ಕರ್ನಾಟಕದಿಂದ ಉತ್ತರದ ಬೇರೆ ರಾಜ್ಯಗಳಿಗೆ ವರ್ಗಾವಣೆಗೊಂಡು ಹೋದವರು ಹಿಂದಿಯಿಲ್ಲದೆ, ಇಂಗ್ಲೀಷ್ ಮೇಲೆಯೇ ವ್ಯವಹಾರ ನಡೆಸಲು ಸಾಧ್ಯವೆ? ಹಾಗಿದ್ದಲ್ಲಿ ಹೇರಿಕೆಯ ಪ್ರಶ್ನೆಯಿಲ್ಲ ಅಲ್ಲವೆ?
—- ಹಿಂದಿ ಗೊತ್ತಿದ್ದರೆ ಒಳ್ಳೆಯದು, ಅದರಲ್ಲಿ ಯಾವುದೇ ಅನುಮಾನಗಳಿಲ್ಲ, ಆದರೆ ಕಡ್ಡಾಯ ಮಾಡಿದಾಗ ಮಾತ್ರ ಸಹಿಸಲಾಗುವುದಿಲ್ಲ, for example in Railways, post office, banks etc.
3. ದಕ್ಷಿಣ ಭಾರತದವರಿಗೆ ಹಿಂದಿ ಅರ್ಥವಾಗದ ಪರಕೀಯ ಭಾಷೆ ಎನ್ನಲು ಏನು ಆಧಾರ? ಹಿಂದಿ ಅಥವಾ ಸಂಸ್ಕೃತ ಎರಡರಲ್ಲಿ ಒಂದನ್ನು ಆಯ್ಕೆ ಮಾಡಬೇಕಾದ ಅಗತ್ಯ ಇವತ್ತಿನ ಶಾಲೆಯ ಮಕ್ಕಳಿಗೆ ಇಲ್ಲವೆ? ಹಾಗೆ ನೋಡಿದರೆ ಇಂಗ್ಲೀಷ್ ಕೂಡ ಪರಕೀಯ ಭಾಷೆಯೇ ಅಲ್ಲವೆ? ಮತ್ತು ಸಂಸ್ಕೃತಕ್ಕೆ ಸಮೃದ್ಧ ಇತಿಹಾಸವೇನೋ ಇದೆ. ಆದರೆ ಕೇವಲ ಅಷ್ಟರಿಂದಲೇ ಬಂದ ಭಾಗ್ಯವೇನು?
—- ಬಹುತೇಕ ದಕ್ಷಿಣ ಭಾರತದವರಿಗೆ ಹಿಂದಿ ಪರಕೀಯವೇ, ನನ್ನ ಉದಾಹರಣೆಯನ್ನೇ ತೆಗೆದುಕೊಂಡರೆ ನಾನು ಇಡೀ ವಿದ್ಯಾಭ್ಯಾಸದಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿತಿದ್ದೀನಿ, ಶಾಲೆಯ ಹೊರಗಡೆ ಹಿಂದಿ ರಾಷ್ಟ್ರಭಾಷಾ ಪರೀಕ್ಷೆಯನ್ನೂ ಪಾಸ್ ಮಾಡಿದ್ದೇನೆ, ಆದರೂ ಹಿಂದಿ ಮಾತೃ ಭಾಷಿಕರೊಂದಿಗೆ ಸರಾಗವಾಗಿ ಮಾತಾಡಲಾಗುವುದಿಲ್ಲ.
4. ಕೇವಲ ಮಧ್ಯಪ್ರದೇಶದ ಮಾತೃಭಾಷೆಯಾದ ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕೆ ಕನ್ನಡಿಗರು ಯಾವ ಯಾವ ಉದ್ಯೋಗಕ್ಕೆ ಅರ್ಹತೆ ಕಳೆದುಕೊಳ್ಳುತ್ತಿದ್ದಾರೆ?
—- There is evident partiality for jobs in railways, even in Metro in Bengaluru!
5. ನಾವು ಹಿಂದಿಯಲ್ಲೇ ಒಂದು ಪತ್ರವನ್ನೊ, ಅರ್ಜಿಯನ್ನೊ, ಪರೀಕ್ಷೆಯನ್ನೊ ಬರೆಯುವುದು ಕಡ್ಡಾಯ ಎಂಬ ಸ್ಥಿತಿ ಇದೆಯೆ ಅಥವಾ ಈಗ ನಿರ್ಮಾಣವಾಗಿದೆಯೆ?
—- ಈಗಿಲ್ಲ, ಆದರೆ ಪರಿಸ್ಥಿತಿ ಅಲ್ಲಿಗೆ ಬರಲೂಬಹುದು!
6. ಸ್ಥಳೀಯ ಭಾಷೆ ಬರದಿದ್ದರೆ ಕರ್ನಾಟಕದಲ್ಲಿಯೂ ಕೆಲವೊಂದು, ವಿಶೇಷತಃ ಗ್ರಾಹಕರೊಂದಿಗೆ ವ್ಯವಹರಿಸಬೇಕಾದ ಖಾಸಗಿ ರಂಗದ ಉದ್ಯೋಗಗಳು ಕೂಡ ಸಿಗುವುದಿಲ್ಲ. ಅದು ಕೂಡ ಹೇರಿಕೆಯೆ?
—- ಇದು ಹೇಗೆ ಹೇರಿಕೆಯಾಗುತ್ತ್ರೀ ಸ್ವಾಮೀ? ಕರ್ನಾಟಕದಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಬೇಕಾದ ಉದ್ಯೋಗಗಳಿಗೆ ಕನ್ನಡ ಬರುವುದು ಅತ್ಯವಶ್ಯಕವಲ್ಲವೇ? ಇದನ್ನು ಹೇರಿಕೆಯನ್ನುವುದು ವಿತಂಡ ವಾದ.
7. ಕನ್ನಡ ಉಳಿಯಬೇಕಿದ್ದರೆ ಅದನ್ನು ಕನ್ನಡಿಗರು ಬಳಸಬೇಕು. ಅವರು ಕನ್ನಡಕ್ಕೆ “ಗುಡ್ ಬೈ” ಹೇಳಿ, ಕೇವಲ ಹಿಂದಿ ಬಳಸದೇ ಇರುವುದರಿಂದ ಮತ್ತು ಹಿಂದಿ ವಿರೋಧಿಸಿ ಬೊಬ್ಬಿಡುವುದರಿಂದಲೇ ಕನ್ನಡ ಬೆಳೆಯುವುದಿಲ್ಲ ಅಲ್ಲವೆ?
—- ಕನ್ನಡಿಗರು ಬಳಸಬೇಕು ಅನ್ನುವುದು ಸರಿ, At the same time being forced to use a any other language for unnecessary reasons should be opposed.
8. ಇವತ್ತು ನಾವು ನೀವು ಯಾವ ಭಾಷೆ ಬಳಸುತ್ತಿದ್ದೇವೆ ಎನ್ನುವುದೇ ಒಂದು ಭಾಷೆಯನ್ನು ಗಟ್ಟಿಯಾಗಿ ನಿಲ್ಲಿಸುವ ಶಕ್ತಿ. ಯಾವ ಸರ್ಕಾರಿ ಆದೇಶವೂ, ನ್ಯಾಯಾಲಯದ ತೀರ್ಪೂ ಅದರೆದುರು ನಿಲ್ಲುವುದಿಲ್ಲ. ಏನು ಹೇಳುತ್ತೀರಿ?
—- ABSOLUTELY. But sometimes a government/court order can come as a death blow for certain weaker regional languages (read Kannada!), for example recent supreme court order not making it mandatory to learn Kannada or in Kannada medium in Karnataka schools….
Well said Kiran.
We should also not forget the unnecessary superiority complex felt by Hindi speakers of N.India and similar inferiority complex felt by us.
And, how can any justify the crores of rupees spent to promote Hindi, while the whole idea of A national language is utterly flawed and biased.
I know and love Hindi well, but don’t like the undue attention and pampering it gets at the cost of other languages.
Halavu bhashegala arivu irbekadudu agatya mattu utama. Haganta Hindi kuritu mithye haradudannu oppalagdu. a mithyeyannu odeyuva kelasa madiddakke thanks.
ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವದು ಎಲ್ಲರಿಗು ಗೊತ್ತಿರುವ ವಿಷಯವೇ…
ಆದರು ಕೆಲವೊಬ್ಬರಿಗೆ ಇದರ ಬಗ್ಗೆ ಅನುಮಾನಗಳಿರುವದನ್ನು ನೋಡಿದರೆ ನಗುಬರುತ್ತದೆ.
ಹಿಂದಿಯನ್ನು ಅನಾವಶ್ಯಕವಾಗಿ ಬೇರೆ ಭಾಷೆಯ ಜನರ ಮೇಲೆ ಹೇರುವದನ್ನು ಪ್ರಜಾ ತಂತ್ರ ವ್ಯವಸ್ತೆಯಲ್ಲಿರುವವರು, ಸಮಾನ ಹಕ್ಕಿನ ಪ್ರತಿಪಾದಕರು,ಎಲ್ಲರು ವಿರೋಧಿಸಬೇಕಿದೆ.
Part XVII of the Constitution deals with Official Language. Under Article 343, official language of the Union has been prescribed, which includes Hindi in Devanagari script and English.
ನಿಸ್ಸಂದೇಹವಾಗಿಯೂ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ.
ಉಲ್ಲೇಖ: http://www.thehindu.com/news/national/hindi-not-a-national-language-court/article94695.ece
ಕೇವಲ ಕೇಂದ್ರ ಸರ್ಕಾರದ official ಭಾಷೆಯಾಗಿ ಆಂಗ್ಲ ಮತ್ತು ಹಿಂದಿಯನ್ನು ಪರಿಗಣಿಸಲಾಗಿದೆ.
ಉಲ್ಲೇಖ: http://timesofindia.indiatimes.com/articleshow/1076936.cms
ಪ್ರತೀ ರಾಜ್ಯಕ್ಕೂ ಅದರದೇ ಆಡಳಿತ (official) ಭಾಷೆ ಇದೆ.
ಭಾರತ ದೇಶಕ್ಕೆ ರಾಷ್ಟ್ರ ಭಾಷೆ ಇಲ್ಲ. ದೇಶದ ಬಹುತೇಕ (majority) ಜನರು ಹಿಂದಿಯನ್ನು ರಾಷ್ಟ್ರಭಾಷೆಯನ್ನಾಗಿ ಒಪ್ಪಿಕೊಂಡಿದ್ದಾರೆ ಎನ್ನುವದು ಸತ್ಯಕ್ಕೆ ದೂರ. ಏಕೆಂದರೆ ಇಲ್ಲಿ majority ಎನ್ನುವ ಪದದ definition ಏನು ಎಂದು ಹೇಳಿಲ್ಲ. ಯಾವ ಜನಗಣತಿಯಲ್ಲೂ, surveyಯಲ್ಲೂ ಅಂಕಿ-ಅಂಶಗಳನ್ನು ಸಂಗ್ರಹಿಸಿ ಈ ಮಾತನ್ನು ಪುಷ್ಟೀಕರಿಸಿಲ್ಲ.