ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹಾಣಾದಿ' ಎನ್ನುವ ಕಾಡುವ ಕಾದಂಬರಿ

‘ಆಕೃತಿ’ ಗುರುಪ್ರಸಾದ್ 
‘ಧೋನಿ ರಿಟರ್ನ್ಸ್’ ಅಂತ ಟಿ ಶರ್ಟ್ ಹಾಕಿರುವ ಫೋಟೋವನ್ನು ಪುಸ್ತಕದ ಹಿಂಬದಿಯ ಫ್ಲಾಪ್ ನಲ್ಲಿ ಹಾಕಿಕೊಂಡಿರುವ ಈ ಹುಡುಗ ಇನ್ನೂ 25 ದಾಟಿರದ ವಿದ್ಯಾರ್ಥಿ. ಕಳೆದ ವರ್ಷ ಬಹು ಚರ್ಚಿತ ಕಾದಂಬರಿ ‘ಹಾಣಾದಿ’ ಬರೆದ ಕಪಿಲ್ ಪಿ ಹುಮನಾಬಾದೆ ಬಗ್ಗೆ ಆಶ್ಚರ್ಯ ಆಗತ್ತೆ. ಈ ವಿದ್ಯಾರ್ಥಿ ದೆಸೆಯಲ್ಲಿ ಇಂತಹ ಒಂದು ಮಹತ್ವಾಕಾಂಕ್ಷೆ ಕಾದಂಬರಿ ಬರೆದಿದ್ದಾರೆ ಎಂದು.
ತಂದೆಯನ್ನು ಹುಡುಕಿ ತನ್ನ ಹಳ್ಳಿಗೆ ಹಿಂದಿರುಗುವ ನಿರೂಪಕನ ಕತೆ ಹ್ವಾನ್ ರಾಲ್ಫೋ ನ ಪೆದ್ರೋ ಪರಮೋ ನೆನಪಿಸುತ್ತದೆ. ವಾಸ್ತವದ ನಿರೂಪಣೆ ಮೀರುವ ಹಾಣಾದಿ ಕಥಾನಕ, ವಾಸ್ತವದ ದೌರ್ಜನ್ಯಗಳನ್ನು ಹಿಡಿಯಲು ಪ್ರಯತ್ನ ಮಾಡುತ್ತದೆ. ವಾಸ್ತವದ ಸಮಾಜ ಹೇಗೆ ಅವಸಾನ ಹೊಂದುತ್ತದೆ ಎಂಬುದನ್ನು ಹಿಡಿಯಲು ಪ್ರಯತ್ನಿಸುತ್ತದೆ.
ಹೋದ ವರ್ಷ ಹೆಚ್ಚು ಚರ್ಚೆಯಾದ ಕಾದಂಬರಿಯ ಬಗ್ಗೆ ಆಕೃತಿಯಲ್ಲಿ ಚರ್ಚೆಯನ್ನು ಮುಂದುವರೆಸುವ ಪ್ರಯತ್ನದ ಭಾಗವಾಗಿ ಈ ಯುವ ಲೇಖಕರ ಜೊತೆಗೆ ಮಾರ್ಚ್ ಮೊದಲನೇ ವಾರ ಸಂವಾದ ಏರ್ಪಡಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ವಿವರಗಳು ಶೀಘ್ರದಲ್ಲೇ.
ಈಗಷ್ಟೇ ಓದಿ ಮುಗಿಸಿ ಆವೇಶದಲ್ಲಿ ಇಷ್ಟು ಬರೆದೆ. ಬಹುಶಃ ಮತ್ತೆ ಇನ್ನೊಮ್ಮೆ ಓದಿ ವಿವರವಾಗಿ ಬರೆಯುವ ಆಸೆ. ನೀವು ಓದಿ.

‍ಲೇಖಕರು avadhi

26 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading