ಹಾಗೆ ಹುಟ್ಟಿಬಂದದ್ದೇ ಈ 'ನನ್ನ ಭಾರತ'..

  • body5ಕೋಳಿಕ್ಕೋಡ್ ನ ಒಬ್ಬ ಹೈಸ್ಕೂಲ್ ಮೇಷ್ಟ್ರು ತಮ್ಮದೇ ಆದ ರೀತಿಯಲ್ಲಿ ದೇಶವನ್ನು ಕಲಕಿ ಹಾಕಿದ್ದಾರೆ.
    ಯಾವಾಗ ಕಾಳಹಂಡಿಯ ಆತ ಹೆಗಲ ಮೇಲೆ ಹೆಣ ಹೊತ್ತು ಹೊರಟನೋ.. ಈ ಮೇಷ್ಟ್ರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ. ತಮ್ಮ ಮನದ ಅಂತರಂಗದ ಕೊಳಕ್ಕೆ ವ್ಯವಸ್ಥೆ ಒಂದು ಕಲ್ಲು ಎಸೆದಂತೆ ಆಗಿತ್ತು.
    ರಾತ್ರಿಯಿಡೀ ಒದ್ದಾಡಿದವರೇ ತಮ್ಮ ಮಾಮೂಲಿ ಪೆನ್ ಕೈಗೆತ್ತಿಕೊಂಡರು. ಅಲ್ಲೇ ಇದ್ದ ಹಾಳೆಯ ಮೇಲೆ ಗೀಚತೊಡಗಿದರು
  • ಹಾಗೆ ಹುಟ್ಟಿಬಂದದ್ದೇ ಈ ‘ನನ್ನ ಭಾರತ’.
  • ರಾತ್ರಿ ೧ ಗಂಟೆ ಯಲ್ಲಿ ಹೀಗೆ ಮನದ ಆತಂಕಕ್ಕೆ ರೇಖೆಗಳಲ್ಲಿ ಮಾತು ಕೊಟ್ಟವರು ಸಿರಾಜ್ ಕಾಸಿಂ.
  • ಸಿರಾಜ್ ಫಾರೂಕ್ ಹೈಸ್ಕೂಲ್ ನಲ್ಲಿ ಓದಿ ಅಲ್ಲೇ ಶಿಕ್ಷಕರಾಗಿದ್ದಾರೆ. ಯಾವಾಗ ಈ ರೇಖಾ ಚಿತ್ರ ಹೊರಬಂತೋ ಜಗತ್ತಿನಾದ್ಯಂತ ವೈರಲ್ ಆಗಿ ಹೋಯಿತು. ಇನ್ನಷ್ಟು ಮತ್ತಷ್ಟು ಕಾವು ಹುಟ್ಟಿಸಿತು.
  • ಅಂತಹ ಫಾರೂಕ್ ಜಗತ್ತಿನಾದ್ಯಂತ ಇರಲಿ. ಮನಸ್ಸು ಕದಡುತ್ತಲೇ ಇರಲಿ

‍ಲೇಖಕರು Avadhi

August 27, 2016

* | Avadhi

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sangeeta Kalmane

    ಅವಧಿಯಲ್ಲಿ ಈ ದಿನ ಬರೀ ದುಃಖವೆ ತುಂಬಿದೆ. ಆತ್ಮಕ್ಕೆ ನನ್ನದೊಂದು ಕಣ್ಣೀರ ಬಿಂದು.

    ಪ್ರತಿಕ್ರಿಯೆ
  2. ರಾದ

    ಕೋಳಿಕ್ಕೋಡ್ ನ ಒಬ್ಬ ಹೈಸ್ಕೂಲ್ ಮೇಷ್ಟ್ರು ತಮ್ಮದೇ ಆದ ರೀತಿಯಲ್ಲಿ ದೇಶವನ್ನು ಕಲಕಿ ಹಾಕಿದ್ದಾರೆ. ಅದನ್ನು ಜಿ.ಎನ್.ಮೋಹನ್ ರವರ ಅವಧಿ ಪ್ರಕಟಿಸಿ ತನ್ನ ಸಾಮಾಜಿಕ ಕಾಳಜಿ ಮೆರೆದಿದೆ.
    ಆ ರಾತ್ರಿ ಹೊಸಕೋಟೆಯ ಮನೆಯಲ್ಲಿ ಚಂದ್ರಕಾಂತ ವಡ್ಡು ರವರ ‘ನಾರಿಹಳ್ಳದ ದಂಡೆಯಲ್ಲಿ’ ಕಥಾ ಸಂಕಲನ ಪುಟಗಳನ್ನು ತಿರುಚುತ್ತಿದ್ದೆ. ವಾಟ್ಸಪ್ಪ್ ಗ್ರೂಪ್ನಲ್ಲಿ ಒಂದು ವಿಷಯದ ಬಗ್ಗೆ ಬಿಸಿ ಚರ್ಚೆ ಶುರುವಾಗಿತ್ತು. ವಿಷಯ ತಿಳಿಯಲು ಕಣ್ಣಾಡಿಸಿದಾಗ ಮನುಕುಲವೇ ತಲೆತಗ್ಗಿಸುವಂತ ಘಟನೆ ಜರುಗಿತ್ತು. ಕಾಳಹಂಡಿಯ ಬುಡಕಟ್ಟಿನ ಮನುಷ್ಯ ತನ್ನ ಹೆಂಡತಿಯ ಹೆಣವನ್ನು ಹೆಗಲ ಮೇಲೆ ಹೊತ್ತು ಹೊರಟ ವಿಷಯ ನನ್ನ ಕಣ್ಣು ಕುಕ್ಕಿತೋ, ನನ್ನೆದೆಯೊಳಗಿದ್ದ ಜಾಗೃತಿಯ ಲಹರಿ ಗರಿಗೆದರಿ, ರೆಪ್ಪೆಯೊಳಗೆ ಅಡಗಿದ್ದ ಕರುಣೆಯ ಮಡಕೆಯು ಮುಕ್ಕಾಗಿ ಕಣ್ಣಂಚಿನಿಂದ ನಾಲ್ಕು ಹನಿಗಳು ನನಗೆ ತಿಳಿಯದಂತೆ ಜಾರಿ ಬಿದ್ದಿದ್ದವು. ಎಷ್ಟು ಪ್ರಯತ್ನ ಪಟ್ಟರೂ ನಿದ್ರೆಯಂಬ ಮಾಯಾಂಗಿ ಹತ್ತಿರ ಸುಳಿಯಲೇ ಇಲ್ಲ. ಎದ್ದು ಕುಳಿತು ಡೈರಿಯಲ್ಲಿ ಬರೆಯುತ್ತ ಕುಳಿತಾಗ ಮೂಡಿದ್ದೇ ಈ ಶೋಕವನ.
    ಆಸ್ಪತ್ರೆಎಂಬ ಶವಾಗಾರದಲ್ಲಿ,
    ಕ್ಷಯ ರೋಗ ಬಡಿದು ಸಾವಿನ ಮಂಚದ ಅಂಚಿನಲ್ಲಿದ್ದಳು ಅಮ್ಮ.
    ಅವಳ ಕೊನೇ ಕ್ಷಣದ ಈ ದುಸ್ಥಿತಿಯನ್ನು ಕಂಡು ಕೊರಗುತ್ತಿದ್ದಳು ಕೆಳಗೆ ಕುಳಿತ ಕಂದಮ್ಮ.
    ಕೋಣೆಗಳ ಸುತ್ತಿ ತಾಯಿಯ ಉಳಿಸುವಂತೆ ಬೇಡಿಕೊಂಡರೂ,
    ಕಿವಿಗೊಡಲಿಲ್ಲ ವೈದ್ಯರು.
    ಹುಸಿರಾಡದ ದೇಹವನ್ನಾದರೂ ಸಾಗಿಸಲು ಸಹಾಯಕ್ಕೆ ಚಾಚಿದರೆ,
    ಮುಖ ತಿರುಗಿಸಿ ಕ್ರೂರ ಗೊಂಬೆಗಳಂತೆ ನಿಂತಿದ್ದರು ಜನರು.
    ಸುತ್ತ ಚಲಿಸುತ್ತಿದ್ದ ನೂರಾರು ವಾಹನಗಳ ಸಪ್ಪಳ ಕಿವಿಗಳ ಹೊಕ್ಕಿದರೂ,
    ಅದರೊಳಗಿದ್ದ ಅಧಿಪತಿಗಳು,
    ಜಾಣ ಕಿವುಡು-ಮೂಕರಾಗಿದ್ದರು.
    ಹೆಣಕ್ಕೆ ಬಟ್ಟೆ ಸುತ್ತಿ ಭುಜದ ಮೇಲೆ ಸಾಗಿಸಿದ ದೃಶ್ಯ,
    ಎಲ್ಲರ ಮನಕಲುಕುವಂತ್ತಿತ್ತು,
    ಹಿಂಬಾಲಿಸುತ್ತಿದ್ದ ಮಗಳ ಕಣ್ಣೀರು,
    ದಾರಿಯ ಉದ್ದಕ್ಕೂ ಮೈಲುಗಳ ಲೆಕ್ಕವಿಡುತ್ತಿತ್ತು.
    ಚಟ್ಟದ ಅಲಂಕಾರವಿಲ್ಲ, ತಮಟೆಯ ಸದ್ದಿಲ್ಲ.
    ಮೊಸಳೆ ಕಣ್ಣೀರಿಲ್ಲ, ಮಳೆ-ಬಿಸಿಲಿನ ಪರಿವಿಲ್ಲ.
    ಗಂಡನ ದಣಿವಿನ ಬೆವರಿದ್ದು, ಮಗಳ ಶೋಕದ ದನಿವಿದ್ದು,
    ಪಂಚ ಭೂತಗಳ ಸೇರಲು ಯಾರಪ್ಪನ ಅಪ್ಪಣೆಯೂ ಬೇಕಿಲ್ಲ.
    ಹಣವಿಲ್ಲದ ಜನರೇ ಕಾಲ ಕಸವಾಗಿರುವಾಗ ,
    ನೆಲದೊಳಗೆ ಕೊಳೆಯುವ ಬಡ ಹೆಣಕ್ಕೆ ಬೆಲೆಕೊಡುವುದುಂಟೆ?
    ಸ್ವತಂತ್ರ ಭಾರತದ ದಿವ್ಯ ಸಾನಿಧ್ಯದಲ್ಲಿ,
    ಧೀನ-ದಲಿತರ ಕಣ್ಣೀರ ಒರೆಸುವುರುಂಟೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: