ರನ್ನ ಕಂದ
ಹಸು, ಹುಲಿ ಮತ್ತು ಸತ್ಯ…
ಖಡ್ಗದ ಮೇಲಿನ ರಕ್ತ ದ ಕಲೆ
ಕೇವಲ ಒಣಗಿ ಹೋದ ಸೇಡಲ್ಲ.
ಹುರಿ ಮೀಸೆಯ ಎಲ್ಲ ತಿರುವು
ಶೂರತನದ ಕುರುಹಲ್ಲ..
ಹುಲಿಯ ಸಾವಿಗೂ ಮುನ್ನ
ಗೋವು ಸಾಯಬಯಸಿತ್ತು..
ಹುಲಿಯ ಹಸಿವ ನೀಗಲು
ಕರುಳ ಹರಿದಿತ್ತು..
ಸತ್ಯ ನಂಬುಗೆಯ
ಹುಲಿಗೆ ಕಲಿಸಿತ್ತು..

ಆ ಹುಲಿ ಕಲಿತುಕೊಂಡರೂ
ಉಳಿದ ಹುಲಿಗಳಿಗೆ
ಅರ್ಥವಾಗಲಿಲ್ಲ..
ಕತೆಗೂ ಮೊದಲು ಸತ್ತ ಹಸುಗಳೆಷ್ಟೋ..?
ಕೊಂದ ಹುಲಿಗಳೆಷ್ಟೋ
ತಿಂದ ದಿನಗಳೆಷ್ಟೋ..
ಸುಮ್ಮನೇ ಕತೆಯಾಗುವುದಿಲ್ಲ
ಬರೆದುದೆಲ್ಲ
ಕವಿತೆಯಾಗುವುದಿಲ್ಲ..
ಎಲ್ಲ ಗೋಡೆಗಳಿಗೂ
ಬೆರಣಿ ತಟ್ಡಿದರೆ
ಅಂದ ತೋರುವುದಿಲ್ಲ.






ಸರ್ ಕವಿತೆ ತುಂಬಾ ಅರ್ಥಗರ್ಭಿತವಾಗಿದೆ..
ಅಭಿನಂದನೆಗಳು
ಧನ್ಯವಾದಗಳು