ಹವ್ಯಾಸಿ ರಂಗಕರ್ಮಿಗಳ ಸಂಕಥನ ಬಿಡುಗಡೆ

ಹವ್ಯಾಸಿರಂಗದ ಮುತ್ತು ರತ್ನಗಳು –
೪೦ ಕನ್ನಡ ಕಲಾವಿದರು ರಂಗ ಸಂಕಥನ ಬಿಡುಗಡೆ
‘ನಟರಂಗ’ದ ಹಿರಿಯರಿಗೆ ಗೌರವ.

ನಟ, ನಿವೃತ್ತ ಬ್ಯಾಂಕರ್ ಎಸ್ ಧೀರೇಂದ್ರ ಅವರ “೪೦ ಹವ್ಯಾಸಿ ರಂಗಕರ್ಮಿಗಳ ಸಂಕಥನ” ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ನಾಡಿನ ಹಿರಿಯ ನಟ ‘ಪ್ರಣಯ ರಾಜ’ ಶ್ರೀನಾಥ್ ಅವರು ಲೋಕಾರ್ಪಣೆ ಮಾಡಿ, ಸಮಾರಂಭ ಅವರಿಗೆ ಮಧುರ ನೆನಪುಗಳನ್ನು ತಂದಿತು ಎಂದರು. ಸಭೆಗೆ ಮುಖ್ಯ ಅತಿಥಿಗಳಾಗಿ, ನಾಟಕ, ಕಿರುತೆರೆ ಮತ್ತು ಚಲನಚಿತ್ರರಂಗದ ಹಿರಿಯ ನಟಿ ಶ್ರೀಮತಿ ಗಿರಿಜಾ ಲೋಕೇಶ್ ಅವರು ಹಳೆಯ ಸಹರಂಗಕರ್ಮಿಗಳ ಒಡನಾಟದ ಸವಿ ನೆನಪುಗಳನ್ನು ಹಂಚಿಕೊಂಡರು.

ನಟರಂಗದ ಹಿರಿಯ ನಟರಾದ ಶ್ರೀ ಬಿ.ಆರ್.ಜಯರಾಂ, ಎಂ.ಪಿ. ವೆಂಕಟರಾವ್ ಮತ್ತು ಟಿ. ಎಸ್. ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದ ಭಾಗವಾಗಿ ನಟರಂಗದ ಹಲವು ಸದಸ್ಯರು, ಪ್ರಸ್ತುತ ಪಡಿಸಿದ ರಂಗಗೀತೆ ಗಳು, ಕನ್ನಡ ಹವ್ಯಾಸಿ ರಂಗಭೂಮಿಯ ಸುವರ್ಣಯುಗಕ್ಕೆ ಸಭಿಕರನ್ನು ಕೊಂಡೊಯ್ದವು. ಕೃತಿರಚನೆಯ ಹಿನ್ನೆಲೆಯನ್ನು ಕೃತಿಕಾರ ಶ್ರೀ ಧೀರೇಂದ್ರ ವಿವರಿಸಿದರೆ, ಕೃತಿಯ ವಿಶಿಷ್ಟತೆಯ ಪರಿಚಯವನ್ನು ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್ ನರಸಿಂಹಮೂರ್ತಿ ಮಾಡಿಕೊಟ್ಟರು.

ಕೃತಿಯನ್ನು ಪ್ರಕಟಿಸಿರುವ ಸ್ನೇಹ ಬುಕ್ ಹೌಸ್ ನ ಪರಶಿವಪ್ಪ ಮಾತನಾಡಿ ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಜೊತೆಗೆ ತಮ್ಮ ಸಂಸ್ಥೆಯ, ಉತ್ತಮ ಬಾಂಧವ್ಯ ಇದೇರೀತಿ ಮುಂದುವರೆಯಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿ, ಕನ್ನಡವೇ ಸತ್ಯ ಪ್ರತಿಷ್ಠಾನ ದ ಅಧ್ಯಕ್ಷರಾದ ಬೆಂ. ಶ್ರೀ. ರವೀಂದ್ರ ವಹಿಸಿ ಸಮಾರಂಭ ಅತ್ಯಂತ ಯಶಸ್ವಿಯಾದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು.

‍ಲೇಖಕರು avadhi

October 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: