ಹಳೆಯ ನೆನಪಿನೊಂದಿಗೆ ಮನಸ್ಸು ತಾಜಾ ಎನಿಸಿತು…

ಅರವಿಂದ ಮಾಲಗತ್ತಿ

ನಿನ್ನೆ ಆಕಸ್ಮಿಕವಾಗಿ ಸೋಲಾಪುರಕ್ಕೆ ಬಂದಿದ್ದೆ.1965 ರಿಂದ 68 ರ ವರೆಗೆ ಮಹಾನಗರ ಪಾಲಿಕೆ ಕನ್ನಡ ಶಾಲೆ ನಂ -೨ ರಲ್ಲಿ ಓದುತ್ತಿದ್ದೆ ಆ ಶಾಲೆ ನೋಡುವ ಮನಸ್ಸಾಗಿ ಹುಡುಕಾಡಿದೆ. ಫಾರೆಸ್ಟ್ ಏರಿಯಾದಲ್ಲಿ ಆ ಶಾಲೆ ಇತ್ತು. ಶಾಲಾ ಕಟ್ಟಡ ಸಿಗಲಿಲ್ಲ ಆದರೆ ಜೋಶಿ ಎಂಬುವವರು ಅಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಅದೇ ದಾರಿಯಲ್ಲಿ ಮರಾಠಿ ಆರನೇ ನಂಬರಿನ ಶಾಲೆ ಇತ್ತು. ಅದರ ಕಟ್ಟಡವೂ ಹಳೆಯದಾದರೂ ಬಳಕೆಯಲ್ಲಿದೆ.

ಅರುಣ್ ಶಹಾ ಎಂಬುವವರು ಕನ್ನಡ ಶಾಲೆ ಇದ್ದ ಜಮೀನಿನ ಮಾಲೀಕರು. ಶಾಲೆಯನ್ನು ನಡೆಸಲು ಕಟ್ಟಡವನ್ನು ಬಾಡಿಗೆ ಕೊಟ್ಟಿದ್ದರ ಬಗ್ಗೆ ತಿಳಿಸಿದರು. ಅವರು ವಯಸ್ಸಿನಲ್ಲಿ ನನಗಿಂತ ಸ್ವಲ್ಪು ಹಿರಿಯರು. ಆ ಜಾಗದಲ್ಲಿ ಆಸ್ಪತ್ರೆ ಕಟ್ಟಿದರೂ ಹಳೆಯ ಬಾವಿ ಮನೆಯ ಒಳಗಡೆ ಈಗಲೂ ಇದ್ದ ಬಗ್ಗೆ ತಿಳಿಸಿದರು. ಆ ಬಾವಿಯ ನೀರೇ ನಮ್ಮ ಶಾಲೆಗೆ ಆಶ್ರಯವಾಗಿತ್ತು. ಆಗ ನನ್ನ ಚಿಕ್ಕಪ್ಪ ರೈಲ್ವೆ ಇನ್ಸ್ ಪೆಕ್ಟರ್ ಆಗಿ ಸೋಲಾಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ನಾವಿದ್ದ ರೈಲ್ವೆ ಕ್ವಾರ್ಟರ್ಸ್ 4 ಅಂತಸ್ತಿನ ಕಟ್ಟಡ ಶಿಥಿಲವಾಗುವ ಸ್ವರೂಪದಲ್ಲಿದೆ. ಕಾರ್ಯಕ್ರಮಗಳನ್ನ ನಡೆಸುತ್ತಿದ್ದ ಗಣೇಶ್ ಹಾಲ್ ಸುಸಜ್ಜಿತವಾಗಿದೆ. ಅದರ ಸುತ್ತೆಲ್ಲ ಸುತ್ತಾಡಿದೆವು. ಹಳೆಯ ನೆನಪಿನೊಂದಿಗೆ ಮನಸ್ಸು ತಾಜಾ ಎನಿಸಿತು. ನನ್ನೊಂದಿಗೆ ಅಶೋಕ್ ಇನಾಮದಾರ ಅವರು ಇದ್ದರು. ೬ ನಂಬರಿನ ಮರಾಠಿ ಶಾಲೆಯ ಕಟ್ಟಡ. ಹಾಗೂ ಶಾಲೆಯ ಸ್ಥಳದಲ್ಲಿ ಹುಟ್ಟಿದ ಆಸ್ಪತ್ರೆ ಭಾವಚಿತ್ರಗಳು.

‍ಲೇಖಕರು Admin

August 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: