ಹಳೆಯ ಅನ್ಯಾಯಗಳನ್ನು ಸರಿಪಡಿಸಿಕೊಳ್ಳಲು ಇನ್ನೂ ಉತ್ತಮವಾದ ದಾರಿಗಳಿವೆ

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.

ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.

ಅದು ಇಲ್ಲಿದೆ 

ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.

ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ

ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ 

ಸಂವರ್ಥ ಸಾಹಿಲ್ ಕಟ್ಟಿಕೊಟ್ಟ ನೋಟ ಇಲ್ಲಿದೆ   

ಇದೀಗ ಕಂಠೀರವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ-

”ನಮಗೆ ಯಾರು ಮುಖ್ಯ, ಯಾವ ಮೌಲ್ಯಗಳು ಮುಖ್ಯ ಎಂದು ಪರೀಕ್ಷಿಸಿದರೆ, ರಾಧಾಕೃಷ್ಣನ್ ಅವರಿಗಿಂತ ತಾಯಿ ಫುಲೆ ಅವರ ನೆನಪಿನಲ್ಲಿ ಆಚರಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲು ಕಷ್ಟವಾಗುವುದಿಲ್ಲ.

ಪ್ರೊವೈಡೆಡ್, ಸಾಮಾಜಿಕ ನ್ಯಾಯ ನಮಗೆ ಮುಖ್ಯ ಎಂತಾದರೆ. ಅದು ಮುಖ್ಯ ಅಲ್ಲ ಎನ್ನುವವರ ಅಭಿಪ್ರಾಯ ಬೇರೆ ಇರಬಹುದು”. ಹೀಗೆ ಹೇಳುವ ಸಂವರ್ಥರು ಕೆಲವು ಪ್ರಶ್ನೆಗಳನ್ನು ಎತ್ತಿ ತಮ್ಮ ವಿಚಾರವನ್ನು ಪೂರ್ಣವಾಗಿ ಸ್ಫಷ್ಟಪಡಿಸಿಲ್ಲ. ಹಿಪಾಕ್ರಸಿಯ ಜಾಲದಲ್ಲಿ ಸಿಲುಕದವರು ಯಾರೂ ಇಲ್ಲ. ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನಗಳ ಮಧ್ಯೆ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂಬುದು ನನ್ನ ಮತ. ಎರಡೂ ಭಾಗಗಳು ಒಂದನ್ನೊಂದು ಹೊಕ್ಕಿ ಸಮಾನ ಜೀವನ ಮೌಲ್ಯಗಳನ್ನು ಪ್ರತಿಪಾದಿಸಲಿ ಎಂದು ಬಯಸುವುದು ಸಹಜ ಹಾಗೂ ಹಾಗಾದಲ್ಲಿ ಬಹಳ ಪುಣ್ಯ ಮಾಡಿದ್ದರು ಎಂದುಕೊಳ್ಳಬಹುದು.

ಎರಡೂ ಒಂದಕ್ಕೊಂದು ಪೂರಕವಾಗಿ ಯಾವಾಗಲೂ ಇರುವುದಿಲ್ಲ. ಇಂದಿನ ತಿಕ್ಕಲು ಇನ್‍ಸ್ಟಾಗ್ರಾಂ ಮತ್ತು ಹುಚ್ಚು ವಾಟ್ಸಾಪ್ ಜಗತ್ತಿನಲ್ಲಿ ಸಾರ್ವಜನಿಕಕ್ಕೂ, ಖಾಸಗಿಗೂ ವ್ಯತ್ಯಾಸ ಅರಿಯದವರ ಸಂಖ್ಯೆ ಹೆಚ್ಚಾಗಿರುವುದರಿಂದ ಅಂಥವರ ದೃಷ್ಟಿಯಲ್ಲಿ ‘ಸಾಮಾಜಿಕ ನ್ಯಾಯ’ ಎಂದರೆ ಏನು ಎಂದು ವಿಚಾರ ಮಾಡಬೇಕಾಗಿದೆ.

ಸಾಮಾಜಿಕ ನ್ಯಾಯವನ್ನು ‘ರೆಟ್ರೊಸ್ಪೆಕ್ಟಿವ್’ (ಹಿಮ್ಮುಖ ಆರೋಪಗಳ ಮೂಲಕ) ಆಗಿ ಪಡೆದುಕೊಳ್ಳುವುದರಿಂದ ಆ ನ್ಯಾಯಕ್ಕೆ ಸಿಗಬೇಕಾದ ನಿಜವಾದ ಮಾನ್ಯತೆ ಸಿಗದೇ ಹೋಗುತ್ತದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಇವತ್ತು ಹೊಸರೀತಿಯ ಸಂಕುಚಿತ ಮನೋಭಾವಗಳು ಹೆಚ್ಚಾಗಿದೆ. ಯಾರಿಗೆ ಯಾರಿಗೆ ಹಳೆಯ ಆರೋಪಗಳಿಂದ ಮುಕ್ತಿ ಕೊಡಿಸಿ ಕ್ಲೀನ್ ಚಿಟ್ ನೀಡುತ್ತಿದ್ದಾರೆ ಮತ್ತು ಯಾರು ಅಪ್ರಸ್ತುತ ಹಳೆಯ ವಿಚಾರಗಳನ್ನು ಕೆದಕಿ ಹೊಸ ಬ್ಲ್ಯಾಕ್ ಲಿಸ್ಟ್ ತಯಾರಿಸಲು ಹವಣಿಸುತ್ತಾ ಇರುತ್ತಾರೆ ಎಂಬುದನ್ನು ಗಮನಿಸದೇ ಇರುವುದೂ ಒಂದು ರೀತಿಯ ಜಾಣ ಕುರುಡು.

ಯಾವ ಮೌಲ್ಯಗಳು ಮುಖ್ಯ ಎಂಬುದು ಮತ್ತೆ ಚರ್ಚೆಗೆ ಆಸ್ಪದ ಕೊಡುವ ವಿಷಯ. ಹಳೆಯ ಅನ್ಯಾಯಗಳನ್ನು ಸರಿಪಡಿಸುವುದಕ್ಕೆ ಇನ್ನೂ ಉತ್ತಮವಾದ (ಟೋಕನಿಸ್ಮ್ ಅಲ್ಲದ) ದಾರಿಗಳು ಇವೆ ಅನಿಸುತ್ತದೆ. ಅದನ್ನು ಶೋಧಿಸಿದರೆ ಸಲ್ಲದ ತಿಕ್ಕಾಟ ತಪ್ಪುತ್ತದೆ.

‍ಲೇಖಕರು avadhi

September 13, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

Trackbacks/Pingbacks

  1. ಜಿ ಎಚ್ ನಾಯಕ್ ಹೇಳುತ್ತಾರೆ: ರಾಧಾಕೃಷ್ಣನ್ ಅವರ ವ್ಯಕ್ತಿತ್ವಕ್ಕೆ ಶಿಕ್ಷಕರಿಗೆ ಪರಮ ಆದರ್ಶವಾಗುವ ಮಟ್ಟದ ಘನತೆ - […] ಇದೀಗ ಕಂಠೀರವ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ- ಅದು ಇಲ್ಲಿದೆ  […]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: