ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳತು ಹರಿದು ಹೋದಂತೆ..

ಪೊರೆ ಕಳಚಿ ಇಳಿಸಿ…

-ಎನ್ ವಿ ವಾಸುದೇವ ಶರ್ಮಾ

ಹಾವೊಂದು ಹೊರಳಿ ನರಳಿ
ಬಟ್ಟೆಕಳಚಿದಂತೆ ಪೊರೆ ಹರಿದಿಟ್ಟು
ಥಳ ಥಳ ಬೆಳಗುತ
ಸರಪರ ಸರಿದು ಹೋಯಿತು.

ನಾ ಕಂಡ ಅದೆಷ್ಟೋ ಜನರೂ ಹಾಗೆ
ಅಲ್ಲಿಂದ ಇಲ್ಲಿಗೆ ಇಲ್ಲಿಂದ ಮತ್ತೆಲ್ಲಿಗೋ
ಹೀಗೆ ಬಂದು ಹಾಗೆ ನಿಂತು ಕುಂತು ಹೊರಟಾಗ
ಇಲ್ಲಿನದು ಇಲ್ಲಿ ಅಲ್ಲಿನದು ಅಲ್ಲಿ ಬಿಟ್ಟು
ಹೊಸ ರೂಪ ತೊಟ್ಟು ಇನ್ನೊಂದೆಡೆಗೆ…
ನಾಟಕದ ಅಂಕದ ಪರದೆ ಸರಿದಂತೆ
ಹೊಸ ವೇಶ ಹೊಸ ಪಾತ್ರ
ಹಳತು ಹರಿದು ಹೋದಂತೆ.

ನನ್ನೆದೆಯ ನೋವ ನಲಿವುಗಳ ಭಾರದೊಡನೆ
ಮೈತುಂಬಾ ಕೊರೆದು ಬರೆದ ನೆನಪುಗಳ ಆಳ ಗುರುತುಗಳು
…ನನಗೂ ಈ ಚರ್ಮದ ಪೊರೆ ಕಳಚಿ
ಥಳಥಳಿಸುವ ಹೊಸ ಪದರವ ಹೊದ್ದು
ಬೆಳಕಲಿ ಮಿಂಚಿ ಮಿನುಗುವ ಆಸೆ…

ಹಳೆಯ ಕತೆಗಳ ಭಾರ ಹೊತ್ತು ತಿರುಗುವುದಿನ್ನೆಷ್ಟು ಕಾಲ?
ಕಳಚಿ ಪೊರೆ ಬಿಸುಟೆಸುವುದೆಷ್ಟು ಕಷ್ಟ?
ಅಥವಾ ಭಾರದ ಗುರುತುಗಳ ಹೊತ್ತಿರುವುದೇ ಇಷ್ಟ..!

‍ಲೇಖಕರು Admin

9 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading