ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹಂಚಿಕೊಳ್ಳುವ ಕ್ರಿಯೆ’ – ಪಾರು ಕಂಡಂತೆ

ಪಾರು

ಪ್ರತಿಭಾ ನಂದಕುಮಾರ್ ‘ಅನುದಿನದ ಅಂತರಗಂಗೆ’ ಗೆ ಬರೆದ
ಮುನ್ನುಡಿಯಲ್ಲಿ ಒಂದು ಮಾತು ಹೇಳ್ತಾರೆ …
“ಎಲ್ಲವನ್ನೂ ಹೇಳಿಕೊಲ್ಲದಿದ್ರೆ ಮುಕ್ತಿ ಇಲ್ಲ. . .” ಅಂತ .
ನಿಜವೇನೋ … ಈ ಬ್ಲಾಗ್ ಬರೆಯೋ ಕ್ರಿಯೆಯ ಹಿಂದೆಯೂ
ಅದೇ ಕೆಲಸ ಮಾಡಿರಬಹುದು. ಹೇಳಿಕೊಳ್ಳಬೇಕು
ಸರಿ, ಯಾರಿಗೆ? ಏನನ್ನ? ಇದು ಬಿಡಿಸಲಾಗದ ಪ್ರಶ್ನೆಯಾಗೇ ನನ್ನ ಮುಂದೆ ಇದೆ.
ಹಂಚಿಕೊಳ್ಳುವ ಬಯಕೆ ಎಷ್ಟೆಲ್ಲಾ ರೂಪಗಳಲ್ಲಿ ಬರಬಹುದು?
ನನ್ನ ಜೀವನದ ಗುರುತುಗಳು ಎಲ್ಲರಿಗೂ ಕಾಣಲಿ ಎನ್ನುವ
ಹಂಬಲದ ಮೂಲವೂ ಇಲ್ಲೇ ಎಲ್ಲೋ ಇದ್ದ ಹಾಗಿದೆಯಲ್ಲ !!!
ಗುರುತುಗಳು ಇರುವುದೇ ಕಾಣಲಿಕ್ಕೆ,
ತೋರಿಸಿಕೊಳ್ಳುವುದಕ್ಕಲ್ಲ ಅಲ್ಲವೇ!
ಅಂದರೆ ನನ್ನ ಗುರುತುಗಳ, ಗುರುತು ಹಿಡಿಯುವ ಕೆಲಸ ಇದು ಇರಬಹುದೇ?
ಬಯಲಾದ ಬದುಕಿಗೂ ಮುಕ್ತಿ ಬೇಕೇ?

ಇದೇ ಲಹರಿಯಲ್ಲಿದ್ದಾಗ . . .
ಎಲ್ಲವನ್ನೂ ಬಿಚ್ಚಿಟ್ಟು
ಬತ್ತಲಾಗಿ ಮತ್ತೊಮ್ಮೆ
ಇನ್ನೂ ಏನನ್ನೋ ಹುಡುಕುವಾಗ ,
ನನ್ನೊಳಗೆ ನಾನೇ
ಬಚ್ಚಿಟ್ಟುಕೊಂಡಂತೆ ,
ನನ್ನನ್ನು ನಾನೇ ಹುಡುಕುವಂತೆ
ಕಣ್ಣಾಮುಚ್ಚಾಲೆ ಆಟ ಆಡುವ,
ಆಡುತ್ತಲೇ ಇರುವ
ನನ್ನ ರೀತಿಯನ್ನು ಕಂಡು
ಬೆಚ್ಚಿ ಬೀಳುತ್ತೇನೆ!
 
 

‍ಲೇಖಕರು G

25 June, 2014

2 Comments

  1. mmshaik

    nice..

  2. Anitha

    ತುಂಬಾನೇ ಚೆನ್ನಾಗಿದೆ… ನಮ್ಮಲ್ಲಿ ನಮ್ಮನ್ನ ಹುಡುಕುವ ಕ್ರಿಯೆಯೇ ಜೀವನ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading