ಚಾಂದ್ ಆಹೇ ಭರೇಗಾ ಅಂದವನ ಚಾಕ್ ಲೇಟು…
-ಗಾನಾ ಜೋಯ್ಸ್
ಚಾಂದ್ ಆಹೇ ಭರೇಗಾ
ಫೂಲ್ ದಿಲ್ ಥಾಮ್ ಲೇಂಗೇ
ಹುಸ್ಕ್ ತೀ ಬಾತ್ ಚಲಿತೋ
ಸಬ್ ತೇರಾ ನಾಮ್ ಲೇಂಗೇ …
ಅಂತ ಬೇಂದ್ರೆ ಪುಸ್ತಕದ ಮೊದಲ ಪುಟದಲ್ಲಿ ಬರೆದು ಕಾಣದ ಹಾಗೇ ಪಿನ್ ಮಾಡಿ ಕೊಟ್ಟಿದ್ದ ಹುಡುಗನನ್ನು ನೂರು ಹುಣ್ಣಿಮೆ ಕಳೆದರು ಮರೆಯಲಾಗಲಿಲ್ಲ . ಅವನ ಹೆಸರೇ ಕತ್ತಲೆ ಕಳೆಯುವುದಾಗಿತ್ತು . ನಾನೂ ಬೆಳಕು ಬೇಡವೆಂದು ಬಿಟ್ಟಿದ್ದೆ . ಅದ್ಯಾಕೆ ಅಂತ ಈಗಲೂ ನಂಗೊತ್ತಿಲ್ಲ ! ಅವನು ನನ್ನಲ್ಲಿ ಪ್ರೀತಿ ಬೆಳೆಸಲೇ ಇಲ್ಲ . ತಾನು ಮಾತ್ರ ಅಷ್ಟುದ್ದ ಬೆಳೆದು ಮೇಲ್ಹತ್ತಿ ಕುಂತು ಬಿಟ್ಟಿದ್ದ .
ಹಾಗಂತ ಅವನ ಬಗ್ಗೆ ಈಗಲೂ ನನಗೆ ಅನುಕಂಪವಿಲ್ಲ , ಆದರು ಸುಮ್ಮ ಸುಮ್ಮನೆ ನೆನಪಾಗಿ ಬಿಡುತ್ತಾನೆ . ಮದುವೆಯಾದವ ನನ್ನ ಮೇಕಪ್ಪು -ಗೆಟಪ್ಪು ನೋಡಿಯು ಕಾಮೆಂಟು ಮಾಡದಿದ್ದಾಗ , ನನ್ನ ಅದ್ಯಾವುದ್ಯಾವುದೋ ಭಾವಗಳಿಗೆ, ಭಾಷೆಗಳಿಗೆ , ಅತಿರೇಕಗಳಿಗೆ , ಕೊರಡಾಗಿ ನಿಂತಾಗ , ಮುಖೇಶನ ಹಾಡುಗಳನ್ನ ರೋತೆರಾಗ ಅಂದು ಬಿಟ್ಟಾಗ …. ಆಗೆಲ್ಲಾ ಅವನು ನೆನಪಾಗುತ್ತಾನೆ ಅವನ ಸಾಲುಗಳ ನೆನಪಾಗುತ್ತದೆ. ಪ್ರೀತಿ ಅನ್ನೋದರ ಪರಿಚಯವೇ ಇರದ ಉಮರಿನಲ್ಲೇ ಅವನೊಪ್ಪಿಸುತ್ತಿದ್ದ ‘ದಿನಕ್ಕೊಂದು ಲ್ಯಾಕ್ಟೋ ಕಿಂಗ್ ‘ ಚಾಕಲೇಟು ನೆನಪಾಗುತ್ತದೆ .
ಅದ್ಯಾರದೋ ನೋಟು ತುಂಬಿದ ಪರ್ಸು ಅವನಿಗೆ ಸಿಕ್ಕು ,ಅದನ್ನು ವಾಪಸು ತಲುಪಿಸಿದ್ದಕ್ಕೆ ಪಡೆದ ಬಹುಮಾನವನ್ನ ನನ್ನದೇ ಸೊತ್ತು ಅನ್ನೋ ಹಾಗೇ ನಾನೂ ಅವುಚಿ ಹಿಡಿದದ್ದು ನೆನಪಾಗುತ್ತದೆ . ಯೂನಿಫಾರಮ್ಮಿನ ಆ ದಿನಗಳಲ್ಲಿನ ಭಾವನೆಯ ರೂಪಕ್ಕೆ , ಅದಕ್ಕೆ ಕೊಡಬಹುದಾದ ಹೆಸರಿಗೆ ಇನ್ನು ತಡಕಾಡುತ್ತಿದ್ದೇನೆ ನಾನು.
ಅವನಿವನು ಕೊಟ್ಟ ಕಾರ್ಡು ಇಸಕೊಳ್ಳುವಾಗ ನಾನು ಅವನ ಹುಡುಕಿದ್ದು, ಅವನು ಚೆಂದವೆಂದ ಡ್ರೆಸ್ಸು ಮತ್ತೆ ಮತ್ತೆ ಹಾಕಿದ್ದು , ನವೆಂಬರ್ ೨೮ ರ ಅವನ ಬರ್ತ್ ಡೇಟು , ಅವನು ಹೇಳಬಹುದಾಗಿದ್ದ ‘ಐ ಲವ್ ಯು ‘ಗಾಗಿ ಕಡೇ ಗಳಿಗೆವರೆಗೂ ಕಾದಿದ್ದು …ಉಹುಂ ! ಅವನಿಗೆ ಗೊತ್ತಿಲ್ಲ . ಬೈಂಡಿನಲ್ಲಿ ತಾರೀಕಿನ ಸಾಲುಗಳ ಬರೆದಿಟ್ಟ ಆ ಹುಡುಗ , ನನ್ನ ಜೀವನ ಪುಸ್ತಕದಲ್ಲೂ ಬೈಂಡ್ ಆಗೇ ಹೊರಗುಳಿದು ಬಿಟ್ಟ . ಒಮ್ಮೆಯೂ ಎದುರು ನಿಂತು “ಐ ಲವ್ ಯು ” ಅನ್ನದವನ ಜುಲುಮೆಗೆ ನನ್ನ ಮಾಫಿಯಂತು ಇಲ್ಲ.
ಚಾಂದ್ ಆಹೇ ಭರೇಗಾ ಅಂತ ಒಳಗೊಳಗೇ ಹಾಡಿದವನು ಕೊಡುತ್ತಿದ್ದ ಲ್ಯಾಕ್ಟೋ ಕಿಂಗ್ ಚಾಕ್ ಲೇಟು ಈಗ ಅದೇ ಟೇಸ್ಟಿನಲ್ಲಿ ಸಿಗುತ್ತಿಲ್ಲ. ಅವನ ಮನಸ್ಸಲ್ಲೂ ಈಗ ನನ್ನ ಬಗ್ಗೆ ಆ ಮಟ್ಟದ ಉತ್ಕಟತೆ ಖಂಡಿತಾ ಉಳಿದಿಲ್ಲ . ಆದರು … ಅವನಿಗಲು ಕಂಡಾಗಲೆಲ್ಲ ಕಣ್ ತಪ್ಪಿಸುತ್ತಾನೆ . ನಕ್ಕು ನಗು ನುಂಗುತ್ತಾನೆ.
ನಾನು ಮಾತ್ರ ಕನ್ನಡಿಯೆದುರು ನಿಂತು ‘ಜಿಸ್ ಜಗಹ್ ತೂ ನಹಿಂ ಹೈ ಉಸ್ ಜಗಹ್ ಹೈ ಅಂಧೇರಾ ‘ ಅಂತ ಗುನುಗುತ್ತಾ , ಅವನಿಂದ ಕಸ್ಕೊಂಡಿದ್ದ ಹನ್ನೆರಡು ವರ್ಷ ಹಳೆಯ ಶಾರ್ಪರ್ ನಿಂದ ನೆನಪುಗಳನ್ನು ಶಾರ್ಪ್ ಮಾಡ್ತಲೇ ಇರುತ್ತೇನೆ . ಅವು ನನ್ನನೆಷ್ಟೇ ಚುಚ್ಹಿದರು!!.
]]>








third line should read like this:
ಹುಸ್ನ್ ಕೀ ಬಾತ್ ಚಲೀ ತೋ
lovely lyrics by anand Bakshi for the movie ‘phool bane angarey’
Liked the last line of the write up
🙂
ms
nenapugalu sharp madadhe hodrunu chuchtane iruthe