ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹಂಗಾಮ’ ಕಾರ್ನರ್ ನಲ್ಲಿ ನೀರ ಹಾಡು…

ಹೆಲ್ಮೆಟ್ಟಿನೊಳಗೊಂದು ಡುಯೆಟ್

-ಎಂ ಆರ್ ಗಿರಿಜಾ ಮಳೆ ಬರುತ್ತಲೇ ಇದೆ. ರಸ್ತೆಯಂಟಿನ ಗಾಡಿಗಳು ಈಗ ಟರ್ಪಾಲಿನ್ ಹೊದ್ದು ಬೆಚ್ಚಗಾಗುತ್ತಿವೆ. ಸಂಜೆಯ ಹವೆಯ ಸಮಶೀತೋಷ್ಣ ನೇರ್ಪುಗೊಳಿಸಲು ಬಜ್ಜಿ ಬೋಂಡಾದ ಎಣ್ಣೆ ಕಡಾಯಿಗಳು ವಿವಿಧ ಲಯಗಳಲ್ಲಿ ಉರಿಯತೊಡಗಿವೆ.ಹಿಂದೆ ಕೇಳಿದ ಅಸೀಮ ರೂಪಿ ಅಂಬರದಾಗೆ ನೆನಪಾಗುತ್ತಿದೆ. ಬಿಗ್ರೇಡ್ ರಸ್ತೆಯಿರಲಿ ಎಂ ಜಿ ರೋಡಿನ ಕಾಫಿ ಕ್ಲಬ್ ಇರಲಿ, ಬಸವನಗುಡಿ, ಮಲ್ಲೇಶ್ವರಗಳ ಹಳೇ ಹಳೆ ಹೋಟೆಲಿರಲಿ ಎಲ್ಲೆಡೆ ಜನಸಂದಣಿ. ಗಿಜಿಗಿಜಿ ಮಳೆ . ಅದು ನಿಲ್ಲುವರೆಗೂ ಹೊರಡಲಾರದೆ ಮನೆ. ಅಂಗಡಿ ಮಾಡುಗಳ ಆಶ್ರಯ ಪಡೆದು ಕುಂತವರು, ನಿಂತವರು, ಬೀಸುತ್ತಿದ್ದ ಗಾಳಿಗೆ ಸಾಟಿಯೆಂಬಂತೆ ಓಡುತ್ತಿರುವ ಆಟೋ, ಬಸ್ಸುಗಳಿಂದ ಧುಮ್ಮಿಕ್ಕಿ ಇಳಿದು ಚದುರುತ್ತಿದ್ದವರು……

ರಸ್ತೆ ಬದಿ ಪ್ಯಾಂಟು, ಸ್ಕರ್ಟ್, ಬ್ರಾ, ಚಡ್ಡಿ ನಿಕ್ಕರು , ಷೂ, ಕಾಲುಚೀಲ. ವಾಚುಗಳು ಸಾಮ್ರಾಜ್ಯದ ಡೇರೆ ಹಾಕಿ ಕುಂತವರು ತಮ್ಮ ಅಮೂಲ್ಯ .ವಸ್ತುಗಳ ಮೌಲ್ಯ ಲೆಕ್ಕಿಸದೆ ಗುಡಿಸಿಕೊಳ್ಳುತ್ತಿದ್ದಾರೆ, ಅವರಲ್ಲಿ ಬಹುಪಾಲು ಚಿಣ್ಣರು ಸಣ್ಣಕಾಲು ಮುಳುಗುವರೆಗೂ ಬರುವ ಚೊಣ್ಣ ಮಳೆ ಬಂದು ತಮ್ಮ ತಮ್ಮ ಅಕ್ಕ ಅಣ್ಣ ಅಪ್ಪಂದಿರು ನೆನೆದರೆ, ಸುತ್ತಲು ಅಂಗಡಿಗಳು ಜನರ ದಾಳಿಯಿಂದ ಗೀಗೀ ಗುಟ್ಟತೊಡಗಿದರೆ ಇವರಿಗೇನೋ ಖುಷಿ ನಿಂತ ನೀರಿನ ಮಡುವಿನಲ್ಲಿ ಕಾಲು ಹಾಕಿ ಥೈ ಥೈ ಕುಣಿಯತೊಡಗಿದರೆ ಅವರಿಗೆ ತಮ್ಮದೇ ಲೋಕ ಸೃಷ್ಟಿಯಾದ ಖುಷಿ. ಆಫೀಸಿನಿಂದ ಮೂಡ್ ಕೆಟ್ಟು ಹೊರ ಬಂದು ನಿಂತವಳಿಗೆ ಮಳೆ ನೋಡಿ ಯಾಕೋ ಜಗತ್ತೂ ತನ್ನಂತೆಯೇ ಆಳುತ್ತಿದೆಯೆನೋ ಎನಿಸಿ ಒಂದು ಕ್ಷಣ ನಿಂತಳು . ಆದರೆ ಕೆಲಸ ಅರಸಿ ದುಬೈಗೆ ಹೋಗಿರುವ ಗೆಳೆಯನ ನಿನ್ನೆಯ ಫೋನ್ ಕಾಲ್ ನೆನಪಾಯಿತು. ಹೇ ನಾವೀಗ ಪಾರ್ಟಿ ಮಾಡ್ತಿದ್ದೀವಿ. Today its drizzled you know ಅವನ ಮಾತಿನಲ್ಲಿ ಅದೆಷ್ಟು ಸಂಭ್ರಮ. ಪೆದ್ದು ಮುಂಡೇದೇ drizzling ಗೇ ನೀನಷ್ಟು ಕುಣಿವಾಗ ಈ ಮಳೆಗೆ ನಾನು ಹೇಗೆ ಕುಣಿಯಬೇಕು ಎಂದು ಮನಸ್ಸಿನಲ್ಲಿ ಜೋರು ಮಾಡಿದಳು . ಇದರ ಜೊತೆಯೇ ಯಾಕೋ ಒಳಗಿನಿಂದ ಒಂದು ಖುಷಿಯ ಎಳೆ ಮೀಟಿ ಎಳೆದಂತಾಗಿ ಜರ್ಕಿನ್ ಧರಿಸಿ ಹೆಲ್ಮೆಟ್ ಧರಿಸಿ scooty ಸ್ವಾರ್ಟ್ ಮಾಡಿದಳು . ಟ್ಯ್ರಾಫಿಕ್ ಜ್ಯಾಮಿನೊಳಗೆ ಸ್ಯಾಂಡ್ ವಿಚ್ ಆಗಿ ಹೊರಬಂದಾಗ ಯಾಕೋ ಮನೆಗೆ ಹೋಗಬೇಕೇಂದೇ ಅನಿಸಲಿಲ್ಲ. ಅಷ್ಟಕ್ಕೂ ಹೋಗಿ ಮಾಡುವುದೇನು? ಅವನಾದರೂ ಇದ್ದಿದ್ದರೆ ಇಷ್ಟರೊಳಗೆ scooty ಎಲ್ಲೋ ಪಾರ್ಕ್ ಮಾಡಿ ಅವನ ಬೈಕ್ ಹಿಂದೆ ಕುಳಿತು ಯಾವುದೋ ಐಸ್ ಕ್ರೀಂ ಪಾರ್ಲರ್ ನಲ್ಲಿ ಕುಳಿತಿರಬಹುದಿತ್ತು . ಸ್ಕೂಟಿಯ ದಿಕ್ಕು ಬದಲಿಸಿ ಮನೆಯ ವಿರುದ್ದ ದಿಕ್ಕಿಗೆ ಓಡಿಸತೊಡಗಿದಳು. ಪಕ್ಕದಲ್ಲಿ ಬಂದ ಆಟೋ ಪಿಚಕ್ಕನೆ ಮೈತುಂಬಾ ಟಾರ್ ರೋಡಿನ ಗಂಗೆಯ ಅಭಿಷೇಕ ಮಾಡಿಸಿ ಹೊರಟಾಗ ಲೇಟ್ ಬ್ಲೂಜಿನ್ಸ್ ವಿಚಿತ್ರ ಪ್ಯಾಚುಗಳಲ್ಲಿ ಹೊಸ ಪ್ಯಾಟ್ರನ್ನಿನ shaded ಜೀನ್ಸ್ ನಂತೆ ಕಂಡು ಪುಳಕಿತಳಾಗಿ ಆ ಆಟೋದವನಿಗೆ ಹೆಲ್ಮೆಟ್ಟಿನ ಗಾಜು ಎತ್ತಿ ಥ್ಯಾಂಕ್ಸ್ ಎಂದು ಕೂಗಿದಳು . ನೀರು ನಿಂತ ಜಾಗಗಳಲ್ಲೆಲ್ಲ ಭರ್ರನೆ ಗಾಡಿ ಓಡಿಸುತ್ತಾ ಅದರಿಂದ ಹೊರಟ ಕಪ್ಪು , ಕೆಂಪು , ಹಳದಿ ಬಣ್ಣದ ನೀರಿಗೆ ಮೈಯೊಡ್ಡುತ್ತಾ ಹೊರಟಂತೆ ಹಾಡಬೇಕೆನಿಸಿ ತಾರಕ ಸ್ವರದಲ್ಲಿ ಹಾಡ ತೊಡಗಿದಳು . ಅಕ್ಕ ಪಕ್ಕದಲ್ಯಾರಿಗೂ ಮಳೆಯ ರಭಸದಲ್ಲಿ ಕೇಳಿಸಿದ್ದು ಮತ್ತು ಮತ್ತೇರಿಸಿದಂತಾಗಿ ಬಾಲ್ಯದಲ್ಲಿ ಕಲಿತ ರಘುಪತಿ ರಾಘವದಿಂದ ಶುರು ಮಾಡಿ ಎಲ್ಲಾ ಭಜನೆಗಳು ಹೊರಬಂದು ನಂತರ ಭಾವ ಗೀತೆಗಳಿಗೆ ಹೊರಳಿದಳು . ಮೊಬೈಲ್ ಸಂಗೀತ ಕಚೇರಿ ತಾರಕಕ್ಕೇರಿ ಮಧ್ಯಾಹ್ನ ತಿಂದದ್ದೆಲ್ಲಾ ಖಾಲಿಯಾಗಿ ಹೊಟ್ಟೆ ಹಸಿಯತೊಡಗಿ ಮಳೆಯ ಜೊತೆಯ ಜುಗಲ್ ಬಂಡಿ ಸಾಕೆನಿಸಿ , ಆ ಕಿರುಚಾಟದ ಹದಕ್ಕೆ ತಕ್ಕಂತೆ ವೇಗದಲ್ಲಿ ಗಾಡಿ ಓಡಿಸುತ್ತಾ , ಆಟೋದವರ ‘ಏ……..’ ಎಂಬ ಅವರದೇ ವಿಶಿಷ್ಟ ಶೈಲಿಯಲ್ಲಿ ಬೈಸಿಕೊಳ್ಳುತ್ತಾ , ಗ್ರೀನ್ ಸಿಗ್ನಲ್ ತೋರಿಸುತ್ತಿದ್ದ ಸರ್ಕಲ್ ದಾಟಿದೊಡನೆ ಹೆಲ್ಮೆಟ್ ಒಳಗಿನ ಮೇಘ ಮಲ್ಹಾರ ಗಕ್ಕನೆ ನಿಂತಿತು . ತಿರುಗಿ ನೋಡಿದಳು . ಸರ್ಕಲ್ಲಿನ ಆ ಮಗ್ಗುಲಲ್ಲಿ ಮಳೆ ತನ್ನಷ್ಟಕ್ಕೆ ತಾನೇ ಏಕಾಂಗಿಯಾಗಿ ಸಂಗೀತ ಕಚೇರಿ ಮುಂದುವರೆಸುತ್ತಿತ್ತು . ಈ ಮಗ್ಗುಲು ವೃತ್ತದ ಇನ್ನರ್ಧ ಭಾಗದಿಂದ ಸಂಪೂರ್ಣ ಬೇರ್ಪಟ್ಟಂತೆ ಮೌನವಾಗಿತ್ತು .]]>

‍ಲೇಖಕರು G

11 December, 2010

1 Comment

  1. B. T. Jahnavi

    ಮೌನರಾಗ….!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading