
ಅಂಜಲಿ ರಾಮಣ್ಣ
ಸೋಲಿಲ್ಲದ ಸರದಾರರು ಸ್ವಾತಂತ್ರ್ಯಕ್ಕಾಗಿ ದುಡಿದ ಧೀರರು – ಇದು ನನ್ನ ಪಪ್ಪ ಕೆ.ರಾಮಣ್ಣ ಸಂಪಾದಿಸಿರುವ ಪುಸ್ತಕ. ಬಹುಜನರಿಗೆ ಅಪರಿಚಿತರಾಗಿ ಉಳಿದು ಹೋಗಿರುವ ಸ್ವಾತಂತ್ರ್ಯ ಸೇನಾನಿಗಳ ಬದುಕಿನ ಕಥೆ, ಹೋರಾಟದ ವಿಧಾನಗಳು ಈ ಪುಸ್ತಕದಲ್ಲಿದೆ.
Google ಗೆ ಮಾಹಿತಿ ತಿಳಿಸದೆ ಹೊರಟು ಹೋಗಿರುವ ಮಹಿಳಾ ಸ್ವಾತಂತ್ರ್ಯ ಸೇನಾನಿಗಳಾದ;
ಅಮೃತಮ್ಮ
ಲಲಿತಾ ಕುಲ್ಕರ್ಣಿ
ಎಂಎಂ ಬಾಲ ಸುಂದರಮ್ಮ
ಎಂಆರ್ ಲಕ್ಷ್ಮಮ್ಮ
ಪಾರ್ವತಮ್ಮ
ಸುಶೀಲಾಬಾಯಿ
ವಿಶಾಲಕ್ಷಮ್ಮ
ಟಿ ಸುನಂದಮ್ಮ
ಯಶೋಧರ ದಾಸಪ್ಪ
ಸುಬ್ಬಮ್ಮ ಜೋಯಿಸ್ ಇನ್ನೂ ಅನೇಕ ಮಹಿಳೆಯರ ಬಗ್ಗೆ ಮಾಹಿತಿ ಸಂಪಾದಿಸಿ ಟಿಪ್ಪಣಿ ಕೊಟ್ಟಿದ್ದಾರೆ ಪಪ್ಪ.
ಇಂತಹ ಪಪ್ಪನ ಮಗಳ ಮಾಡಿದ್ದೇ ಆ ದೇವರು ನನಗಿತ್ತ ನಿತ್ಯ ಅಮೃತಮಹೋತ್ಸವ!
ಪಪ್ಪ ನಿನ್ನ ಮೀನಖಂಡದ ಮೇಲೆ ಪೊಲೀಸ್ ಲಾಠಿ ಏಟಿನ ಗುರುತು, ಅದರ ಸ್ಪರ್ಷ ಈ ಸೌಭಾಗ್ಯಕ್ಕಿಂತ ಹೆಚ್ಚಿನದೇನಿದೆ ಸ್ವಾತಂತ್ರ್ಯ ಎಂದರೆ ನನಗೆ ನೀನು ಮಾತ್ರ!






0 Comments