ಸ್ವಭಾವ ಕೋಳಗುಂದ ಕವಿತೆ- ಕನ್ನಡಿಯ ಮಾಯೆಯೊಳಗೆ…

ಸ್ವಭಾವ ಕೋಳಗುಂದ

ಕನ್ನಡಿಯ ಮಾಯೆಯೊಳಗೆ
ರಾಶಿ ರಾಶಿ ಕನಸುಗಳು
ಅಲ್ಲಿ ಎಲ್ಲ ಬೆಟ್ಟಗಳೂ ನುಣ್ಣಗೆ
ಕಲ್ಲಿಲ್ಲ ಮುಳ್ಳಿಲ್ಲ
ಸುಡುವ ಬಂಡೆಗಳಿಗೆ
ಮೈ ಕೈ ತರಚುವ ಗಿಡಗಂಟಿಗಳಿಲ್ಲ
ಹಸಿವಿಲ್ಲ ನೋವಿಲ್ಲ
ಎದುರು ನಿಂತಾಗಲೆಲ್ಲ
ನಮ್ಮ ಕಣ್ಣು ನಿತ್ಯೋತ್ಸವ

ಕನ್ನಡಿಯ ಮಾಯೆಯೊಳಗೆ
ಬೆಚ್ಚನೆಯ ಅಪ್ಪುಗೆ
ನೆಚ್ಚಿನ ಸೂರು
ಇಚ್ಚೆಯರಿತ ಜೀವಗಳು
ಪ್ರೀತಿಯ ಪಿರಮಿಡ್ಡು
ಒಪ್ಪ ಓರಣದ
ಅಚ್ಚುಕಟ್ಟಾದ ಕಪಾಟಿನೊಳಗೆ
ಗಮ್ಮೆನ್ನುವ ಅಂಗಿಯ ತೋರಣಗಳು

ಕನ್ನಡಿಯ ಮಾಯೆಯೊಳಗೆ
ಎಂದೂ ಉಕ್ಕದ ಹಾಲು
ಖಾಲಿಯಾಗದ ಸಕ್ಕರೆ
ತಾಜಾ ಕೊತ್ತಂಬರಿ
ತೊಳೆದಿಟ್ಟ ಪಾತ್ರಗಳ ಸಾಲು
ತುಂಬಿ ತುಳುಕಿದಂತೆ ಕಾಣುವ
ಸಾಸಿವೆ ಡಬ್ಬಿಯ ದುಡ್ಡು

ಕನ್ನಡಿಯ ಮಾಯೆಯೊಳಗೆ
ಅಪ್ಪನ ಹೆಗಲಲ್ಲಿ ಅಂಬಾರಿ
ಅವ್ವನ ಸೆರಗಿನ ನಿವಾಳಿಕೆ
ಅಜ್ಜಿಯ ಮಡಿಯ ರಾಜಕುಮಾರಿ
ಅಜ್ಜನ ಕೋಲಿನ ಸವಾರಿ
ಇರುಳ ಕಥೆಯೊಳಗಿನ ಮಿಣುಕು ನಕ್ಷತ್ರ

ಕನ್ನಡಿಯ ಮಾಯೆಯೊಳಗೆ
ಪಾರಿಜಾತ ಹಾಸಿದ ದಾರಿ
ತಗ್ಗು ದಿಣ್ಣೆಯಿರದ ಸರಾಗ ಸಂಚಾರ
ಓಟನ್ನೇ ಕೇಳಲು ಬಾರದ ಮಾಜಿ ಮಂತ್ರಿ
ಆರದ ಲಾಂದ್ರದ ಬೆಳಕು
ಏರದ ಎಣ್ಣೆಯ ದರ
ಬೆನಕನ ಸ್ತಬ್ಧ ಮೆರವಣಿಗೆ

ಕನ್ನಡಿಯ ಮಾಯೆಯೊಳಗೆ
ಎಷ್ಟೆಲ್ಲ ಮಸುಕು ಮನಸು
ಮಬ್ಬು ಸರಿದು ಬೆಳಕು ಹರಿದು
ಕಳೆಯ ಕಳೆದು
ಜಗವ ತೊಳೆದು
ಮಾಯೆಯ ಜವನಿಕೆಯ ತೆರೆ ಸರಿದು
ನಿಜ ಬದುಕ ತೋರು ದೊರೆಯೇ.

‍ಲೇಖಕರು Admin

December 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: