ಸ್ವಗತ

ಡಾ. ವಿದ್ಯಾ ಕುಂದರಗಿ

ಅವಳು ಕೀಟಾಹಾರಿ ಸಸ್ಯವಲ್ಲ!
ಮುಳ್ಳು ಹಂದಿಯಂತೆ ಪ್ರಹಾರದ ವರದಾನವಿಲ್ಲ
ಯೋನಿಯನು, ಏಡಿ, ಚಿಪ್ಪು ಹಂದಿಯಂತೆ ಒಳಗೆ, ಗೂಡಿನೊಳಗೆ ಅಡಗಿಸಿಕೊಳ್ಳಲುೂ ಆಗುವುದಿಲ್ಲ
ಅವಳಿಗೆ ಮೂರನೆಯ ಕಣ್ಣೂ ಇಲ್ಲ,
ಯೋನಿದ್ವಾರಕೆ ವಂದಿಮಾಗದರಿಲ್ಲ,
ಕಾವಲುಗಾರರೂ ಇಲ್ಲ,
ಝಡ್ ಭದ್ರತೆಯೂ ಇಲ್ಲ,…….
ಎರಡೂ ತೊಡೆಗಳು ತ್ರಿಶೂಲ, ಗದೆ, ಬಚಿ೯,ಚಾಕು, ಚೂರಿ, ಖಡ್ಗ ಧರಿಸಿರುವುದಿಲ್ಲ.

ಒಬ್ಬಿಬ್ಬರೇ ಸಾಕು, ಕೈಕಟ್ಟಿ, ಕಾಲು ಹಿಡಿದು
ನಾಯಿ, ಹಂದಿಗಳಂತೆ ಮೇಲೇರಗಿ ಭೋಗಿಸಲು,
ಹಾಗೂ ಮೋಜಿನ ಚಲನಚಿತ್ರದಂತೆ ನೋಡಲು.

ಇಂಥ ಸ್ರ್ತೀಹಾರಿಗಳು ಹುಟ್ಟುತ್ತಿರುವುದೆಲ್ಲಿಂದ?
ನಾತಿ ಚರಾಮಿಯ ಹೆಸರಲ್ಲಿ
ಚರ್ವಿತಚರ್ವನಗೊಳಿಸುವ
ಎಷ್ಟು ಧರ್ಬಮದ್ಧ ಗಂಡಂದಿರು
ಮನೆ, ಮಹಲು ಯಾಕೆ?
ಜೋಪಡಿ ಮರೆಯಲ್ಲಿಯೇ
ಎಷ್ಟು ಸಾರಿ ಅವಳ ಒಲಿಸಿಕೊಂಡು
ಭೋಗಿಸಿದ್ದಾರೆ? ಕೇಳಿ
ಬೀರಿಯದ ಮೊಗ್ಗಿದ್ದಾಗಲೂ,
ಅರಳಿದ ಹೂವಾಗಿದ್ದಾಗಲೂ,
ತಿಂಗಳ ರಜ ಸ್ರವಿಸುವಾಗಲೂ
ಬಸರಿಯಾಗಿದ್ದಾಗಲೂ,
ಬಾಣಂತಿಯಾಗಿದ್ದಾಗಲೂ….
ರೋಗಿಯಾಗಿದ್ದಾಗಲೂ!!!!!
ಯೋನಿಯಲ್ಲಿ ಬೇಡ ಗುದವಾದರೂ ಸರಿಯೇ!
ಮರೆಯಲ್ಲಿ ಭೂಸುಗುಡುವ
ಗಂಡಾಕಾರದ ಲಕ್ಷಲಕ್ಷ ಹುಳುಗಳಿಂದು,
ಹೀಗೆ ವೀರ್ಯಾಣು ಬೀಜಗಳಾಗಿ
ಹೀಗೆ ಯೋನಿಪಿಪಾಸುಗಳಾಗಿ,
ಮೇಲಾಗಿ
ರಂದ್ರವಲ್ಲದ, ಕೋಮಲ ಅಂಗಗಳಿಗೂ
ಹಸಿದು ಹುಲಿಯಾಗಿವೆ

ಅವಳು ಭೂಮಿ…..
ಯಾರೂ ಕೇಳಿ ಹದಮಾಡಿ ಬೀಜ ಬಿತ್ತುವದಿಲ್ಲ.
ಅವಳು ಭಾನು…..
ಯಾವ ಆವಿ, ಮೋಡಗಳು ಕೇಳಿ ಕವಿಯುವುದಿಲ್ಲ.
ಅವಳು ಜಲನಿಧಿ……
ಯಾರೂ ಕೇಳಿ ತುಂಬಿಕೊಳ್ಳುವುದಿಲ್ಲ.
ಆದರೆ
ಜೀವನಚಕ್ರ ನಡೆದೇ ಇದೆ,
ಏಕೆಂದರೆ ಅವಳು ಪ್ರಕೃತಿ, ಅವಳು ಸ್ವಾಭಾವಿಕ,
ಅವಳು ಮಡಿಲು, ಅವಳು ತೊಟ್ಟಿಲು,
ಅವಳು ಭೂಗಭ೯, ಅವಳು ಜೀವನದಿ……..

ಅವಳಿಗೆ ಹೃದಯ ತುಂಬಿ ಪ್ರೀತಿ ಕೊಟ್ಟರೆ
ಅವಳು ಘನೀಕೃತ ಗೋಳವಾಗಿದ್ದರೂ
ದ್ರವಿಸುತ್ತಾಳೆ.
ಜೀವಸಂಚಲನದ ದಾರಿಯಾಗುತ್ತಾಳೆ
ಮಕಮಲ್ಲಿನ ಬೆಟ್ಟವಾಗುತ್ತಾಳೆ.
ಜೋಗದ ಸಿರಿಯೂ ಆಗುತ್ತಾಳೆ
ಕೊರಳಿನ ಮಾಲೆಯೂ ಆಗುತ್ತಾಳೆ.
ಅವಳೊಂದು ತೆರೆದ ಅಂಗ
ಹೆಸರದಕೆ ಗುಪ್ತಾಂಗ;
ಎಲ್ಲಿ ಮುಚ್ಚಿಡಲಿ? ಎಲ್ಲಿ ಬಚ್ಚಿಡಲಿ?
ತೆರೆದ ಬಾವಿಯನ್ನ?
ಹರಡಿದ ಭೂಮಿಯನ್ನ?
ಚಾಚಿದ ಆಕಾಶವನ್ನ?
ಹರಿಯುವ ನದಿಯನ್ನು
ಜೀವವಾಹಿನಿ ಅವಳು
ಮರೆ ಇದ್ದರೆ ತಾನೇ ಗುಪ್ತವಾಗುವುದು.
‘ನೀನು ಗುಪ್ತವಾಗಿರಿಸಿಕೋ…..
ನಾನು ಸಲೀಸಾಗಿ ಪ್ರವೇಶಿಸುತ್ತೇನೆ’
ಎಂಬುದು ಅದರ ವ್ಯಾಖ್ಯಾನ

ಅವಳ ಹಿತಕ್ಕಾಗಿ ಶಿಶ್ನ ಪ್ರಧಾನ
ಸರಕಾರದ ಸ್ವಾಧಿನದಲ್ಲಿ
ಏನು, ಏನೇನೂ ಇಲ್ಲ……
ಆಡಳಿತ, ವಿರೋಧದವರಿಗೇನೂ
ಅಂತರವಿಲ್ಲ ಈ ವಿಷಯದಲ್ಲಿ….
ಎಲ್ಲವೂ ಸರಕಾರದಿಂದ ಜನ ಹಿತಕ್ಕಾಗಿ ಮಾತ್ರ…..

ಅಂಥ ಜನರಿಗೆ
ಬೇಕು ಬೇಕೆಂದಾಗ, ಸಿಕ್ಕ ಸಿಕ್ಕಲ್ಲಿ,
ಹೊತ್ತು ಗೊತ್ತಿಲ್ಲದೆ, ನೀತಿನಿಯಮ,
ವಿಧಿವಿಧಾನ, ಇತಿಮಿತಿ….. ಯಾವುದೂ ಇಲ್ಲದೆ
ಪಕ್ಕನೆ ನಿಮಿರಿ ಭುಸುಗೂಡುವ, ಹನಿ/ಣಿಯುವ ಸುರಕ್ಷತೆಗೆ ಕವಚದ ವರದಾನವಿದೆ,
ಮಹಾಶೂರನಾಗುವ ಮಾಗ೯ ಕಲ್ಪಿಸಿದೆ.
ಸಂವಿಧಾನ ಹೊತ್ತಿಗೆಯೊಳಗೆ
ಬಂಗಾರದ ಪುಟಗಳಲ್ಲಿ
ಏಳು ಸುತ್ತಿನ ಕೋಟೆಯೊಳಗೆ
ಸುಭದ್ರವಾಗಿದೆ.

ಅದಕ್ಕೆ ರಂದ್ರವಾಗುತ್ತಿದ್ದಾಳೆ
ಓಝೋನ್ ನಲ್ಲಿ, ಬೆಂಕಿಯಾಗಿ ಸ್ರವಿಸಲು,
ಮಹಾರಂದ್ರವಾಗುತ್ತಿದ್ದಾಳೆ
ಭೂಗಭ೯ದಲ್ಲಿ ಮಹಾಪ್ರಳಯವಾಗಿ ದ್ರವಿಸಲು.
ರಬ್ಬರಿನ ರಂದ್ರವಾಗುತ್ತಿದ್ದಾಳೆ

ಬೇಕು ಬೇಕೆಂದಾಗ, ಸಿಕ್ಕ ಸಿಕ್ಕಲ್ಲಿ,
ಹೊತ್ತು ಗೊತ್ತಿಲ್ಲದೆ, ನೀತಿನಿಯಮ,
ವಿಧಿವಿಧಾನ, ಇತಿಮಿತಿ….. ಯಾವುದೂ ಇಲ್ಲದೆ
ಪಕ್ಕನೆ ನಿಮಿರಿ ಭುಸುಗೂಡುವ, ಹನಿ/ಣಿಯುವ
ಗಂಡಾಕಾರದ ಶೌರ್ಯ ಶಾಶ್ವತವಾಗಲು.
ಹೆಡೆ ಎತ್ತಿದ ಗಂಡಸ್ಥನದ ಗದ್ದಿಗೆ ಪ್ರತಿಷ್ಠಾಪಿಸಲು
ತಾಯ್ಗಂಡರು, ಮುಂಡೆಗಂಡರು, ಪರಸ್ತ್ರೀ ಗಂಡರು
ಮತ್ತೀಗ ಅಕ್ಕತಂಗಿ ಗಂಡರು
ಬಿರುದುಬಾವಲಿಗಳ ಕೊಡ ಮಾಡಲು.

‍ಲೇಖಕರು Avadhi

October 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: