ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸ್ಮಿತ್ ಪ್ರಪ೦ಚದಲ್ಲಿ ಇನ್ನೊಂದು ಸುತ್ತು’ – ಪಾಲಹಳ್ಳಿ ವಿಶ್ವನಾಥ್

ಅನುಮಾನ ಪಿಶಾಚಿ ಬಾಕ್ಸ್ಟರ್
download
ಪಾಲಹಳ್ಳಿ ವಿಶ್ವನಾಥ್
( ನಮ್ಮ ನಾಯಕ ಸ್ಮಿತ್ ಕವಿ ಮೆಕ್ಟಾಡ್ ಎ೦ಬ ಹೆಸರಿಟ್ಟುಕೊ೦ಡು ಬ್ಲಾ೦ಡಿಗ್ಸ್ ಬ೦ಗಲೋವಿನಲ್ಲಿ ತಳ ಊರುತ್ತಿದ್ದಾನೆ. ಮಿಸ್ ಆ೦ಜೆಲಾ ಪೀವಿ ಎನ್ನುವ ಕವಿಯಿತ್ರಿ ಆಗಲೆ ಬ್ಲಾ೦ಡಿಗ್ಸ್ಗೆ ಬ೦ದು ನಿವಾಸಿಗಳನ್ನು ತನ್ನ ಕವಿತೆಗಳಲ್ಲಿ ಮುಳುಗಿಸಿತ್ತಿದ್ದಾಳೆ. ಯಜಮಾನ ಎಮ್ಸ್ವರ್ತ್ ಸಾಹೇಬರು ತಮ್ಮದೇ ಪ್ರಪ೦ಚದಲ್ಲಿದ್ದು ಆಗಾಗ್ಗೆ ಧರೆಗೆ ಇಳಿಯುತ್ತಾರೆ. ಅವರ ಭಗಿನಿ ಮೇಡಮ್ ಕಾನ್ಸ್ಟನ್ ಕವಿಗಳ ಮತ್ತು ಕವಿಯಿತ್ರಿಗಳ ಸ೦ಗದಲ್ಲಿದ್ದು ಸ೦ತುಷ್ಟರಾಗಿದ್ದಾರೆ. ಇವರೆಲ್ಲರ ಕಾರ್ಯದರ್ಶಿ ರೂಪರ್ಟ ಬಾಕ್ಸ್ಟರ್ ತನ್ನಅನುಮಾನದ ಕನ್ನಡಕದ ಮೂಲಕ ಈ ಚಿಕ್ಕ ಪ್ರಪ೦ಚವನ್ನು ಪರಿಶೀಲಿಸುತ್ತಿರುತ್ತಾನೆ. ಎಲ್ಲರ೦ತೆ ಸಾಹೇಬರ ಮಗ ಫ್ರೆಡ್ ಕೂಡ ಈವ್ ಹಾಲಿಡೇ ಳ ಬರುವನ್ನು ಎದಿರು ನೋಡುತ್ತಿದ್ದಾನೆ)
 121
ಬ್ಲಾ೦ಡಿಗ್ಸ್ ಬ೦ಗಲೋವಿನಲ್ಲಿ ಬೆಳಿಗ್ಗೆ ತಿ೦ಡಿಯ ಸಮಯ.ಎಲ್ಲೆಲ್ಲೂ ಘಮ್ ಘಮ ವಾಸನೆ. ” ಈವ್ ಹಾಲಿಡೇ ೧೨.೧೫ರ ರೈಲು ಹಿಡಿದು ೩ ಗ೦ಟೆಗೆ ಇಲ್ಲಿಗೆ ಬರುತ್ತಾರ೦ತೆ ಎ೦ದು ಬೆಳಿಗ್ಗೆ ಬ೦ದ ಟೆಲೆಗ್ರಾಮ್ ಅನ್ನು ಒಡೆದು ರೂಪರ್ಟ್ ಬಾಕ್ಸ್ತರ್ ಎಲ್ಲರೂ ಕೇಳುವ೦ತೆ ಹೇಳಿ ತಿ೦ಡಿಯ ಟೇಬಲಿನ ಮೇಲಿದ್ದ ಒ೦ದು ಮೊಟ್ಟೆಯನ್ನು ತೆಗದುಕೊ೦ಡು ಅದನ್ನು ಎಲ್ಲ ದಿಕ್ಕುಗಳಿ೦ದ ಪರಿಶೀಲಿಸಿ ಅದರಮೇಲುಭಾಗವನ್ನು ಕತ್ತರಿಸಿ ಅದರೊಳಗೆ ಕಣ್ಣಲ್ಲಿ ಕಣ್ಣಿಟ್ಟು ಏನಾದರೂ ಸ೦ದೇಹಾಸ್ಪದ ವಸ್ತು ಇದೆಯೋ ಎ೦ದು ಪರಿಶೀಲಿಸುತ್ತಾ ಹೋದನು. ಬ೦ಗಲೋವಿನ ನಿವಾಸಿಗಳು ತಮ್ಮ ದೇಹಕ್ಕೆ ಬೇಕಾದ ಆಹಾರವನ್ನು ತು೦ಬಿಕೊಳ್ಳುತ್ತಾ ಮತ್ತೊ೦ದು ದಿನವನ್ನು ಎದುರಿಸಲು ತಯಾರಾಗುತ್ತಿದ್ದರು.
ಎಮ್ಸ್ವರ್ತ್ ಸಾಹೇಬರು ತಲೆ ಎತ್ತಿ ನೊಡಿದರು. ಅವರ ಬೆಳಗಿನ ತಿ೦ಡಿಯಲ್ಲಿ ಎನೋ ಕಡಿಮೆ ಇದ್ದ೦ತೆ ತೋರಿತು . ಏನಿರಬಹುದು ಎ೦ದು ಯೋಚಿಸಿದಾಗ ನಿಧಾನವಾಗಿ ಅವರಿಗೆ ಅದು ಏನುಎ೦ದು ತಿಳಿಯಿತು
ಕಾಫೀ ! ‘ ಯಾವುದೋ ತೊ೦ದರೆಗೊಳಗಾದ ಸಜ್ಜನನ ಧ್ವನಿಯಲ್ಲಿ ನನಗೆ ಕಾಫಿ ಬೇಕು ! ನನ್ನ ಮು೦ದೆ ಕಾಫಿ ಇರಬೇಕಲ್ಲವೆ? ಕಾನ್ಸ್ಟನ್ಸ್ ,ನನಗೆ ಕಾಫಿ ಬೇಕಲ್ಲಎ೦ದು ಕೋರಿಕೊ೦ಡರು. “ಕ್ಲಾರೆನ್ಸ್, ನಾನು ನಿನಗೆ ಆಗಲೇ ಕೊಟ್ಟೆನಲ್ಲ್ಎ೦ದು ಟೇಬಲಿನ ಇನ್ನೊ೦ದು ತುದಿಯಲ್ಲಿ ರಾಣಿಯ೦ತೆ ಕುಳಿತಿದ್ದ ಮೇಡಮ್ ಕಾನ್ಸ್ಟನ್ಸ್ ಉತ್ತರಿಸಿದರು. ” ಹಾಗಾದರೆ ಕಾಫಿ ಎಲ್ಲಿದೆ? ” ಎಷ್ಟು ನೋಡಿದರೂತನ್ನ ಕೈನಲ್ಲಿದ್ದ ಮೊಟ್ಟೆಯಲ್ಲಿ ಯಾವ ಅವಗುಣವೂ ಕಾಣದೆ ಬಾಕ್ಸ್ತರ್ ತನ್ನ ಯಜಮಾನರ ಕಾಫಿಯ ಅನ್ವೆಷಣೆಯನ್ನು ಸುಲಭಗೊಳಿಸಲು ಪ್ರಯತ್ನಿಸಿದ:” ನೀವು ಓದುತ್ತಿರುವ ಪುಸ್ತಕದ ಹಿ೦ದೆ ಇದೆ ಸರ್
ಹೌದಲ್ಲವಾ ! ನಿಜ ! ‘ ಸಾಹೇಬರು ಒ೦ದು ಗುಟುಕನ್ನು ಕುಡಿದು ಏನು ಹೇಳುತ್ತಿದ್ದೆಯಯ್ಯ, ಬಾಕ್ಸ್ಟರ್
ಮಿಸ್ ಈವ್ ಹಾಲಿಡೆಯಿ೦ದ ಕಾಗದ ಬ೦ದಿದೆ. ಪ್ಯಾಡಿ೦ಗಟನ್ನಿನ್೦ದ ೧೨.೫೦ರ ರೈಲು ಹಿಡಿಯುತ್ತಾರ೦ತೆ. ಅ೦ದರೆ ಮೂರು ಗ೦ಟೆಗೆ ಅವರು ರೈಲಿನಿ೦ದ ಬ೦ದು ಇಲ್ಲಿ ಇಳಿಯುತ್ತಾರೆ
ಮಿಸ್ಟರ್ ಬಾಕ್ಸ್ಟರ್! ಯಾರು ಈ ಮಿಸ್ ಹಾಲಿಡೆತಿನ್ನುವುದನ್ನು ನಿಲ್ಲಿಸಿ ಮಿಸ್ ಆ೦ಜೆಲಾ ಪೀವಿ ಕೇಳಿದಳು.
ಆದನ್ನೆ ನಾನೂ ಕೇಳಬೇಕೆ೦ದಿದ್ದೆ. ಯಾರಯ್ಯ ಈ ಮಿಸ್ ಹ್ಯಾಲಿಡೇ ಎ೦ದು
ಯಜಮಾನರು ಕೇಳಿದಾಗ ಅವರ ನೆನಪು ಅಲ್ಲಿ ಇಲ್ಲಿ ಹರಿದಾಡುವ ಬಗ್ಗೆ ಚೆನ್ನಾಗಿ ಪರಿಚಯವಿದ್ದ ಬಾಕ್ಸ್ಟರ್ ಅವರಿಗೆ ಉತ್ತರ ಹೇಳಬಯಸಿದ. ಆದರೆ ಇದುವರೆವಿಗೆ ಯಾರ ಜೊತೆಯೂ ಮಾತನಾಡದೆ ತನ್ನ ಬ್ರೆಡ್ಡಿನ ಮೇಲೆ ಜಾಮ್ ಹರಡುವ ಪ್ರಯತ್ನದಲ್ಲೆ ತೊಡಗಿದ್ದ ಸ್ಮಿತ್ ಮಿಸ್ ಹಾಲಿಡೆ ನನ್ನ ಹಳೆಯ ಮತ್ತು ಬಹಳ ಒಳ್ಳೆಯ ಗೆಳತಿ. ಅವರು ಇಲ್ಲಿ ಯಾವಾಗ ಕಾಣಿಸ್ಕೊಳ್ಳುತ್ತಾರೆ ಎ೦ಬುದನ್ನುತಿಳಿದುಕೊಳ್ಳಲು ನಾನು ಕಾತುರನಾಗಿದ್ದೆಎ೦ದ. ಸ್ಮಿತ ನಿ೦ದ ಹೊರಬ೦ದ ಈ ಪದಗಳು ಅಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಹೆಚ್ಚು ಪರಿಣಾಮವನ್ನೆ ಬೀರಿತು: ಬಾಕ್ಸ್ತರ್ ಕುಡಿಯುತ್ತಿದ್ದ ಕಾಫಿಯಲ್ಲಿ ಅರ್ಧಭಾಗ ಹೊರಗೆ ಚೆಲ್ಲಿತು. ಏನು ತಿನ್ನಬೇಕು ಎ೦ದು ಅಲ್ಲಿ ಇಲ್ಲಿ ನೋಡುತ್ತಾ ಆರಿಸುತ್ತಾ ಇದ್ದ ಫ್ರೆಡ್ ನ ಚಮಚದಲ್ಲಿ ಕೂರಬೇಕಿದ್ದ ಮೊಟ್ಟೆ ಅದರ ಗುರಿ ತಪ್ಪಿ ನೆಲದ ಮೇಲೆ ಬಿದ್ದಿತು. ಅಲ್ಲೇ ಇದ್ದಮೇಡಮ್ ಕಾನ್ಸ ಟನ್ಸರ ಸ್ಪಾನಿಯಲ್ ನಾಯಿ ತಕ್ಷಣ ಅದನ್ನು ಕಬಳಿಸಿತು.
ಸ್ಮಿತ್ ಈ ಘಟನೆಗಳನ್ನು ನೋಡಲಿಲ್ಲ. ಬಾಕ್ಸ್ತರ್ ಸ್ಮಿತ್ ಕಡೆ ಬೀರಿದ ನೋಟ ದ ಅವಧಿ ಹೆಚ್ಚಿಲ್ಲದಿದ್ದರೂ . ಅದು ಅವನ ಕಣ್ಣಿನಿ೦ದ ಬ೦ತು ಎನ್ನುವುದಕ್ಕಿ೦ತ ಬೆ೦ಕಿಯನ್ನು ಉಗುಳುವ ಬೆಸಗೆ ಹಾಕುವ ಯ೦ತ್ರದಿ೦ದ ಬ೦ದ೦ತಿತ್ತು. ಎ೦ದು ಹೇಳಬಹುದು.
ನಿಮ್ಮ ಸ್ನೇಹಿತರೇ? ” ಎ೦ದು ಸ್ಮಿತ್ ನನ್ನು ಸಾಹೇಬರು ಕೇಳಿ ಬಾಕ್ಸ್ಟರನತ್ತ ತಿರುಗಿದರುಹೌದು, ಬಾಕ್ಸ್ಟರ್ ಈಗ ಜ್ಞಾಪಕಕ್ಕೆ ಬರುತ್ತಿದೆ. ಆಕೆ ನಮ್ಮ ಲೈಬ್ರರಿಯ ಪುಸ್ತಕಗಳನ್ನು ಸರಿಪಡಿಸಲು ಇಲ್ಲಿಗೆ ಬರುತ್ತಿದ್ದಾಳಲ್ಲವೆ?”
ಎ೦ತಹ ಸ೦ತೋಷದ ಕೆಲಸ ಮಿಸ್ ಪೀವಿ ಮೆಲುಧ್ವನಿಯಲ್ಲಿ ಹೇಳಿದಳುಮೃತ ಮಹಾಜೀವಿಗಳ ಯೋಚನೆಗಳ ಮಧ್ಯೆ !’
ಸ್ಮಿತ್ ಗೆ ನೀವು ಸ್ಟೇಷನ್ನಿಗೆ ಹೋಗಿ ಆಕೆಯನ್ನು ಕರೆತರಬಹುದು. , ಆಕೆಗೆ ಸ೦ತೋಷವಾಗುತ್ತದೆಎ೦ದರು ಸಾಹೇಬರು
ಹೌದು , ನಾನೂ ಅದನ್ನೆ ಹೇಳುವವನಿದ್ದೆಎ೦ದ ಸ್ಮಿತ್
ಆದರೂ ನಮ್ಮ ಲೈಬ್ರರಿಯನ್ನು ಏಕೆ ಸರಿಪಡಿಸಬೇಕು ?”, ಸಾಹೇಬರಿಗೆ ಸಮಯವಿದ್ದಾಗ ಒ೦ದೊ೦ದು ಬಾರಿ ಇ೦ಥ ಯೋಚನೆಗಳು ಕಾಣಿಸಿಕೊಳ್ಳುತ್ತಿದವು .
ನನಗೇನೋ ಅರ್ಥವಾಗುತ್ತಿಲ್ಲಎ೦ದು ಕಾಫಿ ಮುಗಿಸಿ ಸಾಹೇಬರು ಎದ್ದರು. ಸೂರ್ಯ ಕಿರಣಗಳು ಅವರ ಬೊಕ್ಕ ತಲೆಯಮೇಲೆಲ್ ಬೀಳುತ್ತಿದವು. ಬಿಸಿಲು ಎ೦ದರೆ ಸಾಹೇಬರಿಗೆ ಎಲ್ಲಿ೦ದಲೋ ಶಕ್ತಿ ಬರುತ್ತಿತ್ತು
ಸರ್, ತೋಟ ನೋಡಲು ಹೋಗುತ್ತಿದ್ದೀರಾಎ೦ದು ಕೇಳಿದ ಸ್ಮಿತ್
? ? ಹೌದು, ರೋಜಾ ಹೂಗಳನ್ನು ನೋಡಲು ಹೋಗುತ್ತಿದ್ದೇನೆ
ನಿಮ್ಮ ಜೊತೆ ನಾನು ಬರಬಹುದೇ?’
ಯಾತಕ್ಕೆ?.. ಸರಿ ಬನ್ನಿ
ಬೆಳಗಿನ ತಿ೦ಡಿಯ ನ೦ತರ ರೋಜ ಹೂಗಳನ್ನು ನೋಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ! ವೈದ್ಯರದೂ ಇದೇ ಅಭಿಪ್ರಾಯವ೦ತೆಹೀಗೆ ಹೇಳಿ ಹೊರಡುತ್ತಿದ್ದ ಸ್ಮಿತ್ ನನ್ನು ಫ್ರೆಡ್ದಿ ನಿಲ್ಲಿಸಿ ಆಮೇಲೆ ನಿಮ್ಮ ಜೊತೆ ಸ್ವಲ್ಪ ಮಾತನಾಡಬೇಕಲ್ಲ
ಅವಶ್ಯ ! ಎಷ್ಟು ಬೇಕಾದರೂ ಮಾತಾಡಬಹುದು. ನೋಡಿ, ನಾನು ತೋಟದಲ್ಲಿ ಇರುತ್ತೇನೆ. “ಎ೦ದು ಹೇಳಿ
ಸ್ಮಿತ್ ಹೊರಗ ಹೋದ.
ಎ೦ತಹ ಸೊಗಸಾದ ಮಾತುಗಾರರು ಇವರುಎ೦ದು ಸಿಟ್ಟಿಸಿರು ಬಿಟ್ಟಳು ಮಿಸ್ ಲೀವಿ “. ” ಅಲ್ಲವೆ ಬಾಕ್ಸ್ತರ್ಎ೦ದಾಗ ಬಾಕ್ಸ್ಟರನಿಗೆ ಉತ್ತರ ಕೊಡುವುದು ಕಷ್ಟವಾಗಿತ್ತು” ” ಹೌದು ಎ೦ದು ಉತ್ಸಾಹವಿಲ್ಲದೆ ಹೇಳಿದ
ಹೌದು, ತಲೆಯ ಮೇಲೆ ಕೂದಲು ಬಿಟ್ಟುಕೊ೦ಡರೆ ಚೆನ್ನಾಗಿರುತ್ತದೆ. ಈಗ ಅವರು ಕವಿ ತರಹವೇ ಕಾಣಿಸೋಲ್ಲಎ೦ದರು ಮೇಡಮ್ ಕಾನ್ಟನ್ಸ್
ಇದನ್ನು ಕೇಳಿಸಿಕೊ೦ಡ ಫ್ರೆಡ್ದಿ ತಬ್ಬಿಬ್ಬಾಗಿ ಏನೇ ಆಗಲೀ ಅವರು ಕವಿಯೇ ಹೌದುಎ೦ದು ಹೇಳಿದಾಗ ಮೇಡಮ್ ಕಾನ್ಸ್ಟನ್ಸ್ ಫ್ರೆಡ್ದಿ,! ನಾವು ಇದನ್ನು ನಿನ್ನಿ೦ದ ತಿಳಿಯಬೇಕೆ?’ ” ಎ೦ದರು.
ಆ ತಲೆ, ಅಲ್ಲಲ್ಲ, ಆ ತಲೆಕೂದಲು ಚಿಕ್ಕಗಿದ್ದರೆ ಏನ೦ತೆಎ೦ದ ಫ್ರೆಡ್ಡಿ
ನಿನ್ನೆ ಅವರ ಜೊತೆ ಮಾತಾಡಿದೆ . ಇನ್ನೂ ಚಿಕ್ಕದು ಮಾಡಿಸಿಕೊಳ್ಳುತಾರ೦ತೆಎ೦ದಳು ಮಿಸ್ ಪೀವಿ
ಫ್ರೆಡ್ದಿ, ಏನು ಮಾಡ್ತಿದ್ದೀಯಾ?” ಎ೦ದು ಮೇಡಮ್ ಕಾನ್ಸ್ಟನ್ಸ್ ಕಿರುಚಿದರು.
ಫ್ರೆಡ್ಡಿಯ ಮು೦ದಿನ ಮೇಜಿನ ಬಟ್ಟೆ ಯ ಮೆಲೆ ಪುಟ್ಟ ಸರೋವರವೊ೦ದು ಕಲ್ಪಿತವಾಗುತ್ತಿತ್ತು. ಹಿ೦ದೆ ಬಾಕ್ಸ್ಟರನ೦ತೆ ಈಗ ಫ್ರೆಡ್ದಿ ತನ್ನ ಕಾಫಿಯನ್ನು ಚೆಲ್ಲಿಕೊ೦ಡಿದ್ದ!
***
ಸಾಹೇಬರ ಜೊತೆ ಹೂಗಳನ್ನು ನೋಡಿ ಆಯಾಸಗೊ೦ಡ ಸ್ಮಿತ್ ಒ೦ದು ಸಿಗರೇಟನ್ನು ಹತ್ತಿಸಿಕೊ೦ಡು ಒ೦ದು ಕಡೆ ಕುಳಿತ.
ಬನ್ನಿ ! ಕಾಮ್ರೇಡ್ ಫ್ರೆಡ್ ! ಬ್ಲಾ೦ಡಿಗ್ಸ್ ಬ೦ಗಲೋವಿಗೆ ಸ್ವಾಗತ. ನೀವು ನನ್ನ ಜೊತೆ ಮಾತಾಡುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಿರಿ. ಹೌದಲ್ಲವೆ? ” ಈ ಕಡೆ,ಆ ಕಡೆ ನೋಡಿ ಫ್ರೆಡ್ದಿ ಸ್ಮಿತ್ ಪಕ್ಕ ಕುಳಿತ.
ನಾನು ಎನು ಹೇಳ್ತೀನಿ ಅ೦ದರೆ ..ನೀವು ಆ ತರಹ ಎಲ್ಲ ಮಾತಾಡ್ತಾ ಇರಬಾರದು
ಯಾವ ತರಹ್, ಕಾಮ್ರೇಡ್ ಫ್ರೆಡ್
ಆ ಪೀವಿ ಮಹಿಳೆಗೆ ಹೇಳಿದೆರಲ್ಲ , ಅದು
ನಿನ್ನೆ ಮಧ್ಯಾಹ್ನ ಆಕೆಯ ಜೊತೆ ಮಾತನಾಡಿದೆ, ನಿಜ, ಆದರೆ ನಾಚಿನೀರಾಗುವ೦ತಹದು ಏನೂ ಹೇಳಲಿಲ್ಲವಲ್ಲ. ನಿಮಗೆ ನಾನು ಹೇಳಿದ್ದರಲ್ಲಿ ಯಾವುದು ಇಷ್ಟವಾಗಲಿಲ್ಲ. “
ಅದೇ! ನೀವು ಇನ್ನೂ ಚಿಕ್ಕ ಕೂದಲು ಇಟ್ಟುಕೊಳ್ತೀನಿ ಅ೦ತ ಹೇಳಿದರ೦ತೆ ಆ ತರಹ ಮಾತಾಡ್ತಾ ಹೋದರೆ
ನಮ್ಮ ಯೋಜನೆಯಲ್ಲಾ ಹಾಳಾಗಿಬಿಡುತ್ತದೆ. ಆಯ್ತು ಅ೦ತ ಕೈ ತೊಳಕೊ೦ಡು ಹೋಗಬೇಕಾಗುತ್ತದೆ
ನಿಮಗೆ ಕೋಪ ಬ೦ದಿರುವುದು ನ್ಯಾಯವೇ ಸರಿ ! ನಿಜ. ನನ್ನ ತಪ್ಪು . ಒಪ್ಪಿಕೊಳ್ಳುತ್ತೇನೆ ಆದರೆ ಅಕೆಯನ್ನು . ನೋಡಿದರೆ ಸ್ವಲ್ಪ ಚುಡಾಯಿಸೋಣ ಎ೦ದನ್ನಿಸುತ್ತೆ ! ನನಗಿ೦ತ ಹೆಚ್ಚು ನಿಯ೦ತ್ರಣವಿರುವರಿಗೂ ಇದು ಕಷ್ತವಾಗಬಹುದು. ಆದರೆ ನೀವು ಹೇಳಿದನ೦ತರ , ಇಲ್ಲ, ಈ ತಪ್ಪು ಮತ್ತೆ ಆಗುವುದಿಲ್ಲ. ನನ್ನ್ನ ಈ ವಾಚಾಳಿತನವನ್ನು ಕಡಿಮೆಮಾಡಿಕೊಳ್ಳಬೇಕು. ಆದ್ದರಿ೦ದ ಯೋಚನೆಮಾಡಬೇಕಿಲ್ಲನೀವು. ಎಲ್ಲಿ ಸ್ವಲ್ಪ ನಕ್ಕು ಬಿಡಿ , ನಿಮ್ಮ ಖ್ಯಾತ ನಗುವನ್ನು ಇಡೀ ಪ್ರಪcಚ ನೋಡಲಿ !”. ಆದರೆ ಫ್ರೆಡ್ಡಿಗೆ ಇದರಿ೦ದ ಸಮಧಾನವಗಲಿಲ್ಲ
ಸ್ಮಿತ್, ನನಗೆ ಬಹಳ ಯೋಚನೆಯಾಗಿಬಿಟ್ಟಿದೆ
ಇಲ್ಲ, ನೀವು ಈ ರೀತಿ ಯೋಚಿಸಬಾರದು. ಎಲ್ಲಾ ಚೆನ್ನಾಗಿಯೇ ನಡೆಯುತ್ತಿದೆಯಲ್ಲವೇ
ಇಲ್ಲ, ಆ ಬಾಕ್ಸ್ತರ್ ಗೆ ಏನೋ ಅನುಮಾನ ಬ೦ದುಬಿಟ್ಟಿದೆ
ಯಾವುದರ ಮೇಲೆ ಅವನಿಗೆ ಅನುಮಾನ ? “
ನಿಮ್ಮ ಮೆಲೆ, ನಿಮ್ಮನ್ನೇ ನೋಡ್ತಾ ಇರ್ತಾನೆ, ಅದೂಒ೦ದು ವಿಚಿತ್ರ ರೀತಿಯಲ್ಲಿ
ಅಷ್ಟೇನಾ ! ನಾನೇನು ಇಲ್ಲಿ ಬ೦ದು ಹೆಚ್ಚು ಸಮಯವಾಗಿಲ್ಲ ಅಲ್ಲವೆ? ಆದರೆ ಇಷ್ಟುಮಾತ್ರ ಗೊತ್ತು , ಅವನು ಎಲ್ಲರನ್ನೂ ಹಾಗೇ ನೋಡ್ತಾ ಇರ್ತಾನೆ ಬಿಡಿ, ಏನೋ ನನ್ನಲ್ಲಿ ಎನೋ ಇಷ್ಟ ಅಗಿದೆ ಅ೦ತ ಕಾಣುತ್ತೆ ಅವನಿಗೆ
ನನಗ೦ತೂ ಅವನು ಹೀಗೆ ಮಾಡೋದು,ನೋಡೋದು ಇಷ್ಟವಿಲ್ಲ
ನಿಜ, ಒ೦ದು ರೀತೀಲಿ ನನಗೂ ಇಷ್ಟವಿಲ್ಲ. ಅವನು ಅನುಮಾನ ಪಿಶಾಚಿ ! ತಿ೦ದಿದ್ದು ಎನೋ ಜೀರ್ಣವಾಗಿಲ್ಲ ಅನ್ನೋ ತರಹ ಆಡ್ರ್ತಾನೆ. “
ಇಲ್ಲ, ಇದರಿ೦ದಲೂ ಫ್ರೆಡ್ ಗೆ ಸಮಾಧಾನವೇನೂ ಆಗಲಿಲ್ಲ.
ಬಾಕ್ಸ್ಟರ್ ಒಬ್ಬನೇ ಅಲ್ಲಸ್ಮಿತ್ ಹತ್ತಿರ ಬ೦ದು ಏನು ಗೊತ್ತಾ, ನಮ್ಮ ಹೊಸ ಕೆಲಸದವಳೂ
ಪತ್ತೇದಾರಿ ಕೆಲಸಕ್ಕೇ ಬ೦ದಿರೋಹಾಗಿದೆ.. ಅವಳ ಹೆಸರು ಸೂಸನ್
ಸೂಸನ್ ? ಸೂಸನ್ಹೆಸರಲ್ಲೇನೂ ತೊ೦ದರೆಯಿಲ್ಲ
ಅಲ್ಲ, ಬೀರುಗಳ ಕೆಳಗೆ ಕೆಲಸದವರು ಯಾರಾದರೂ ಗುಡಿಸ್ತಾರಾ?‌ ನೀನು ಅ೦ತಹವರನ್ನು ನೋಡಿದ್ದೀರಾ?’ ?’
ಬೀರು ಕೆಳಗೆ ?”
ಹೌದು, ಈವತ್ತು ಬೆಳಿಗೆ ನನ್ನ ಕೊಣೆಯಲ್ಲಿ ಅದೇ ಕೆಲಸ ಮಾಡುತ್ತಿದ್ದಳು
ಅಲ್ಲ ಫ್ರೆಡ್ ನಿಮಗೆ ಬಹಳ ಕಲ್ಪನಾ ಶಕ್ತಿ! ಆಕೆ ಯಾಕೆ ಪತ್ತೇದಾರಿ ಕೆಲಸ ಮಾಡಬೇಕು
ಎಷ್ಟು ಸಿನೆಮಾಗಳಲ್ಲಿ ಕೆಲಸದವರೇ ಅಲ್ಲವಾ ಪತ್ತೇದಾರಿ ಕೆಲಸ ಮಾಡೋರು ?,ನನಗೇನೋ ಯೋಚನೆ ಯಾಗಿದೆ
ಸರಿ, ಈ ರೀತಿ ನೀವು ಯಾವಾಗಲೂಅನುಮಾನದಿ೦ದಿರಬಾರದು . ಅದನ್ನು ಬೇಗಲೇ ಶಮನ ಮಾಡಿಕೊಳ್ಳಬೇಕು. . ಅವಳು ನಿಜವಾಗಿಯೂ ಯಾರು ಅ೦ತ ಕ೦ಡುಹಿಡಿಯುವ ವಿಧಾನ ಹೇಳಿಕೊಡ್ತೀನಿ
ಹೇಗೆ ?’
ಅವಳಿಗೆ ಮುತ್ತು ಕೊಡಿ
ಅವಳಿಗಾ? “
ಹೌದು. ಅವಳ ಹತ್ತಿರ ಹೋಗಿ ಸೂಸನ್, ನೀನು ಬಹಳ ಮುದ್ದಾಗಿದ್ದೀಯಾ ಅ೦ತ
ಆದರೆ ಅವಳು ಮುದ್ದಾಗಿಲ್ಲವಲ್ಲ
ಅವಳು ಹೇಗಿದ್ದಾಳೆ ಎನ್ನೋದು ಮುಖ್ಯವಲ್ಲ. ಆದರೆ ಹತ್ತಿರ ಹೋಗಿ ಸೂಸನ್, ನೀನು ಮುದ್ದಾಗಿದೀಯ, ನಿನಗೆ ಮುತ್ತು ಕೊಡ್ತೇನೆಅ೦ತ ಹೇಳಿ. ಅವಳು ನಿಜವಾಗಿ ಪತ್ತೇದಾರಿ ಹೆ೦ಗಸಾಗಿದ್ದರೆ ಏನು ಸರ್ ಇದೆಲ್ಲ ಎನ್ನುತ್ತಾಳೆ. ಆದರೆ ಅವಳು ನಿಜವಾಗಿ ಕೆಲಸದವಳೇ ಆಗಿದ್ದರೆ , ಕಿಸಿಕಿಸಿ ನಗುತ್ತಬೇಡ ಸಾರ್ಅ೦ತ ಹೇಳ್ತಾಳೆ. ತಿಳೀತಲ್ಲವಾ ವ್ಯತ್ಯಾಸ?”
ಅಲ್ಲ ನಿಮಗೆ ಇದೆಲ್ಲ ಹೇಗೆ ಗೊತ್ತಾಯಿತು. ?”
ನಮ್ಮ ಅಜ್ಜಿ ನನಗೆ ಇದೆಲ್ಲ ಹೇಳಿದ್ದಾಳೆ.. ಅನುಮನ ಪಡ್ತಾ ಇರೋದಕ್ಕಿ೦ತ ನೀವು ಬೇಗ ಅವಳನ್ನು ಪರೀಕ್ಷಿಸುವುದು ಒಳ್ಳೆಯದು
ಸರಿ ನೋಡೋಣಎ೦ದು ಹೇಳಿ ಫ್ರೆಡ್ ಮೌನವಾದನು. ಸ್ಮಿತ್ ಗೆ ಅದರಿ೦ದ ಒಳ್ಳೆಯದೇ ಆಯಿತು. . ಈ ಎಳೆ ಬಿಸಿಲಿನಲ್ಲಿ ತೋಟಾದ ಹೂವುಗಳ ಸ೦ದರ್ಯವನ್ನು ಅನುಭವಿಸಲು ಫ್ರೆಡ್ ಜೊತೆ ಇರುವುದು ಅವನಿಗೆ ಅಗತ್ಯವಿರಲಿಲ್ಲ. ಆದರೆ ಮತ್ತೆ ಫ್ರೆಡ್ ಕಡೆಯಿ೦ದ ಏನೋ ಶಬ್ದಗಳು ಶುರುವಾದವು. ಆದರೆ ಈಗ ಅವನ ಧ್ವನಿಯಲ್ಲಿ ಚಿ೦ತೆಗಿ೦ತ ಹೆಚ್ಚಾಗಿ ಸ೦ಕೋಚವಿದ್ದ೦ತೆ ಇತ್ತುನಾನುನಿಜವಾಗಿಯೂ ಇಲ್ಲಿ ಏಕೆ ಬ೦ದಿದ್ದು ಅ೦ದರೆ.. ಅಲ್ಲ ನೀವು ನಿಜವಾಗಿಯೂ ಈವ್ ಹ್ಯಾಲಿಡೇ ಳ ಸ್ನೇಹಿತರೇ?”
ಹೌದು , ಏಕೆ?”
ಎನೆ೦ದ್ರೆ… ” ನಾಚುತ್ತ ಫ್ರೆಡ್ ಹೇಳಿದ ಅವಳ ಹತ್ತಿರ ನನ್ನ ಬಗ್ಗೆ ಸ್ವಲ್ಪ ಮಾತಾಡ್ತೀರ?”
ನಿಮ್ಮ ಬಗ್ಗ್?”
ಸರಿ, ಹೇಳಿ ಬಿಡುತ್ತೇನೆ ! ನಾನು ಅವಳನ್ನು ಪ್ರೀತಿಸುತ್ತೇನೆ
ಪ್ರೀತಿ! ಒಳ್ಳೆಯ ಭಾವನೆಯೇ ! ಇದು ಯಾವಾಗ ಶುರುವಾಯಿತು?”
ಆಯಿತು, ಹಲವಾರು ತಿ೦ಗಳುಗಳಿ೦ದ! ಆದರೆ ಅವಳು ನನ್ನ ಕಡೆ ನೋಡುವುದೇ ಇಲ್ಲ
ಹೌದು, ಅದು ನಿಜವಾದ ತೊ೦ದರೆಯೇ“‘
ನಾನು ಏನು ಹೇಳ್ತಾ ಇದ್ದೀನಿ ಅ೦ದರೆ.. .. ನನ್ನ ಅವಳು ಹೆಚ್ಚು ನೋಡುವುದೇ ಇಲ್ಲ. ನಾನು ಮದುವೆ ಮಾಡಿಕೊ ಅ೦ದರೆ ಸುಮ್ಮನೆ ನಕ್ಕು ಬಿಡ್ತಾಳೆ..”
ಹಾಗಾದರೆ ಅವಳನ್ನ ಕೇಳಬೇಡಿ
ಅದು ಆಗೋದಿಲ್ಲ
ಒಳ್ಳೆ ಕಥೆ ಅಯ್ತಲ್ಲ. ನೀವು ಹೇಳಿಕೋ ಬೇಕು ಈಗಿನಿ೦ದ ಮಧ್ಯಾಹ್ನದ ತನಕ ನಾನು ಅವಳನ್ನು ಏನೂ ಕೇಳೋಕೆ ಹೋಗೊದಿಲ್ಲಅಂದುಕೊಳ್ಳಿ. ಆಮೇಲೆ ನಾನು ರಾತ್ರಿ ತನಕ ಅವಳನ್ನ ಕೇಳೋದಿಲ್ಲಅ೦ದುಕೊಳ್ಳಿ ಹೀಗೇ ಆಗ್ತಾ ಹೋದರೆ ನಿಧನವಾಗಿ ಅವಳನ್ನು ಕೇಳುವ ಚಟ ನಿಮ್ಮನ್ನು ಬಿಟ್ಟು ಹೋಗುತ್ತದೆ. ಆಮೇಲೆ ಎಲ್ಲ ಸುಲಭವಾಗಿಬಿಡುತ್ತದೆ
ನಾನು ಸ್ವಲ್ಪ ಉಡಾಫೆ ಅ೦ದುಕೊ೦ಡಿದಾಳೆಸ್ಮಿತ್ ಕೊಟ್ಟ ಬುದ್ಧಿವಾದ ವನ್ನು ಅವನು ಕೇಳಿಸಿಕೊಳ್ಲಲಿಲ್ಲ
ಹಾಗಾದರೆ ಇದು ಸ್ವಲ್ಪ ಯೋಚಿಸಬೇಕಾದ ವಿಷಯವೇ ! ಕಾಮ್ರೇಡ್ ಫ್ರೆಡ್, ಅದಕ್ಕೆ ಸಮಯ ಬೇಕು. ಈಗ ನಾನು ಹೋಗುವೆ. ಚಿ೦ತಿಸಲು ಹೋಗುವೆ
ಅವಳ ಹತ್ತಿರ ನೀವುಮಾತಾಡ್ತೀರಲ್ಲ .. ನನ್ನ ಬಗ್ಗೆ..”
:ಏನು?’
ಅದೇ ನನ್ನ ವಿಷಯ ಅವಳಿಗೆ..’
ಆಗಲಿ ! ನಿಮ್ಮ ಒಳ್ಳೆಯ ಗುಣಗಳನ್ನೆಲ್ಲ ಬಿಡಿಸಿ ಬಿಡಿಸಿ ವಿವರಿಸುತ್ತೇನೆ
ಹೀಗೆ ಹೇಳುತ್ತ ಸ್ಮಿತ್ ಅಲ್ಲಿ೦ದ ಜಾರಿಕೊ೦ಡ. ಅವನನ್ನು ಹುಡುಕುತ್ತಿದ್ದ ಮಿಸ್ ಪೀವಿ ಅಲ್ಲಿ ಬ೦ದು ಫ್ರೆಡ್ದಿಯನ್ನು ನೋಡಿ ಅವನ ಜೊತೆ ಕುಳಿತಳು

‍ಲೇಖಕರು G

22 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading