ಸ್ಮಿತಾ ಶೆಣೈ ಹೊಸ ಕವಿತೆ- ಶಾಪಗ್ರಸ್ತ ಪ್ರೇಮಿ

ಸ್ಮಿತಾ ಶೆಣೈ

ಇದು ಶಾಪಗ್ರಸ್ತನ ಬಾಗಿಲು
ಇದರಲ್ಲೊಬ ಬಂಧಿ ಇದ್ದಾನೆ
ಯಾವ ಹೆಣ್ಣನ್ನಾದರೂ ಪ್ರೇಮಿಸುವ ಮನಸ್ಸಿನವನು
ಒಬ್ಬಳ ಕಣ್ಣು ಒಬ್ಬಳ ನಡು ತೋಳು ಮುಖ ಮೈಮಾಟ ಕಂಡು ಪ್ರೀತಿಸಿದರೆ
ಇನ್ನೊಬ್ಬಳ ನಗು ಮಾತು ನಿಲುವುಗಳಿಗಾಗಿ ಪ್ರೇಮಿಸುತ್ತಿದ್ದ.
ಮರುಳ ಪ್ರೇಮಿಯ ಕಂಡು ನಕ್ಕರೂ ಮನದಲ್ಲೇ ಬಯಸಿದವರುಇದ್ದರು
ಹೆಣ್ಣುಗಳ ರಮಿಸಿ ಕರಗಿಸೇಬಿಡುತಿದ್ದ
ಒಬ್ಬರಇನ್ನೊಬ್ಬರು ಸಂಧಿಸದಂತೆ ಇರಿಸುತ್ತಿದ್ದ
ತನ್ನ ಪ್ರೇಮಗಾಥೆಗಳ
ಹಾಡು ಹೆಣೆದು ಹಾಡುತ್ತಿದ್ದ
ಬಾಗಿಲಿನ ರಂದ್ರದಿಂದ ಅದು
ಊರೆಲ್ಲಾ ಹರಿದಾಡುತಿತ್ತು.
ನಗರದ ಗದ್ದಲದಲ್ಲಿ ಸೇರಿಕೊಳ್ಳುತಿತ್ತು
ಕತ್ತಲಾಗುವಾಗ ಕೆಲವೊಮ್ಮೆ
ಜನರ ಭಾವಶೂನ್ಯ ವ್ಯವಹಾರಗಳಿಗೆ ಹಿನ್ನೆಲೆಯಾಗಿ ಪ್ರೇಮಗೀತೆ ಕೇಳುತಿತ್ತು

ನಾನವನನ್ನು ಬಾಗಿಲ ಬಿರುಕಿನಿಂದ ನೋಡಿದೆ
ನಾನಲ್ಲಿ ಸುಳಿದಿದ್ದು ಅವನು ಗೃಹಿಸಿದ್ದ
ನನ್ನನ್ನೂ ಹಾಡಿನಿಂದ ಸೆಳೆಯುತಿದ್ದ
ದಿನವೂ ಹಾಡಿಗಾಗಿ ಬರುತ್ತಿದ್ದೆ
ಅವನ ಹಾಡಿನಲ್ಲಿ ವ್ಯಭಿಚಾರದ ಹುಳಿ ಇರಲಿಲ್ಲ ಶೃಂಗಾರದ ಮಧುಪರ್ಕವಿತ್ತು
ಈ ಪರಿಯ ಪ್ರೇಮಿಯನ್ನು ನಾನು ಊಹಿಸಿಯೂ ಇರಲಿಲ್ಲ.
ಅವನದೊಂದು ಹಾಡಿನಲ್ಲಿ
ಅವನನ್ನು ಅತೀ ಪ್ರೀತಿಸಿದ ಹುಡುಗಿಯೊಬ್ಬಳು
ಕೈಕಾಲು ಕಟ್ಟಿ ಬಾಗಿಲಿನಲಿ ಬಂಧಿಸಿದ ಕಥೆ ಇತ್ತು
ಬೆಳಕು ಬಿದ್ದೊಡನೇ ಪ್ರೀತಿಸುವ ಇವನಿಗೆ ಕತ್ತಲೇ ಸೂಕ್ತ
ಬೆಳಕು ಬೀಳುವುದೇ ಬೇಡ
ಪ್ರೇಮದ ಹುಚ್ಚು ಹೆಚ್ಚಾಗುವುದೇ ಬೇಡ
ಕತ್ತಲಿನಲಿ ಕೃಷ್ಣ ರಾಸವಾಡಲಾರ
ಪೂರ್ಣ ವಶವಾಗುವುದೇ ಪ್ರೇಮದ ಸಾರ
ಎಂದು ನಗುನಗುತ್ತಲೇ ಗುನುಗುತ್ತಿದ್ದ
ಹಾಡು ಕೇಳಿ ಬೇಸರಿಸಿ
ಬೀಗ ಬಿಡಿಸಲು ನೋಡಿದೆ
ಅವನ ಹಾಡು ಜೋರಾಯಿತು
ಮರುದಿನ ಬಂದಾಗ ಬೀಗದ ಮೇಲೊಂದು ಹೊಸ ಬೀಗವಿತ್ತು
ಅಂದಿನ ಹಾಡಿನಲ್ಲಿ ನನ್ನ ಮತ್ತವನ ಪ್ರೇಮದ ಕಥೆ ಇತ್ತು
ಗಟ್ಟಿ ಯಾಗಿ ಅದು ಬುರುಜುಗಳಲ್ಲಿ ಪ್ರತಿಧ್ವನಿಸುತಿತ್ತು.

‍ಲೇಖಕರು Avadhi

May 1, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: