ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ಮಿತಾ ಬರೆದ ’ಕೊಡೆಯ ಸಾಲುಗಳು’

ಕೊಡೆಯ ಹನಿಗಳು

download

ಸ್ಮಿತಾ ಅಮೃತರಾಜ್

images
ಮುದುರಿದ ಕೊಡೆ
ತೊಟ್ಟಿಕ್ಕುವ ಹನಿಗೆ
ಗರಿಗೆದರಿ ಅರಳಿದೆ.
**
ಹನಿಯುವ ಹನಿಗೆ
ಹಾಡಿಕೊಂಡು ನಲಿಯಲು
ಕೊಡೆಯ ರಂಗಸ್ಥಳವೇ
ಬೇಕಿದೆ.
**
ಕೊಡೆಯ ಸುತ್ತ ಸುತ್ತ ವೃತ್ತ
ಸುರಿವ ಹನಿಯ ಹರಿವು
ಒಳಗೆ ಪಿಸುಗುಡುತ್ತಿದೆ ಹೆಸರಿಲ್ಲದ
ಒಲವು.
**
ಮಳೆ ಕಲಿಸಿದ ರಾಗ
ಹಾಡಲು ಬಾರದ ಹುಡುಗಿಯೂ
ಕೊಡೆಯೊಳಗೆ ಗುನುಗಿಕೊಂಡಳಲ್ಲ
ಎಷ್ಟು ಸರಾಗ?
**
ಹನಿಗಳಿಗೆಲ್ಲಾ ಬಿಡದೇ
ಸುರಿಯುವ ಹಠ
ಕೊಡೆಯೊಳಗೆ ಶುರುಗೊಂಡಿದೆ
ಆತ್ಮಾವಲೋಕನದ ಪಾಠ.
**
ಸುರಿವ ತಂಪು ಮಳೆ
ನೆಪ ಮಾತ್ರದ ಕೊಡೆ
ಬೆಚ್ಚಗೆ ಭಾವದೊಳಗೆ
ಕಾವು ಕೊಡುತ್ತಿದೆ ಕವಿತೆ.
**
ತೆರೆದುಕೊಂಡು ಹೊಯ್ಯುವ ಮಳೆ
ಮೆಲ್ಲಗೆ ಬಿಕ್ಕುವ ಅವಳು
ನಡುವೆ ಮರೆಮಾಚಲು ಯತ್ನಿಸುತ್ತಿದೆ
ಪುಟ್ಟ ಕೊಡೆ.
**
ಅದೇ ಮಳೆ ಅದೇ ಕೊಡೆ
ಹಿಡಿಯ ಹಿಡಿದು ನಡೆವ ನಡೆ
ಮಾತ್ರ ಪ್ರತೀ ಭಾರಿ ಹೊಸ
ಬಗೆ.
**

‍ಲೇಖಕರು G

14 August, 2015

6 Comments

  1. Anantha Ramesh

    ಮಳೆಹನಿಗಳು ತರುವ ಸಂಭ್ರಮವನ್ನು ಕೊಡೆ ತಡೆಯದೆ ಕೊಡಮಾಡಿದೆ. ಸುಂದರ ಹನಿಗಳು.

  2. harish katapadi

    ಮೇಲೆ ಹನಿವ ಮಳೆ
    ಕೆಳಗೆ ತುಡಿಯುವ ಹನಿ
    ನಡುವೆ ನಿರ್ಲಿಪ್ತ ಕೊಡೆ…….
    ಬಿಟ್ಟೂ ಬಿಡದ ಹನಿಹನಿ ಕಾವ್ಯಧಾರೆ….!

  3. mmshaik

    very nice poems..

  4. manju

    ಕಡೆಗಣಿಸಲಾಗದ ಮಳೆ
    ತಡೆಹಿಡಿದದ್ದು ಕೊಡೆ …

  5. ranganatha

    nimma padyada saalugalu kaviteyaagi hanidide. ashaya chennagide

  6. anand rugvedi

    ಕೊಡೆಯೊಳಗೆ ಶುರುಗೊಂಡಿದೆ
    ಆತ್ಮಾವಲೋಕನದ ಪಾಠ.
    ಕವಿತೆಯ಻ ಸಾಲುಗಳು ಮಳೆ ಹನಿಗಳ ತಾಳ ಹೊಂದಿವೆ! ಛಂದದ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading