ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ನೇಹದ ಬಂಧ, ಬಿಡಿಸಲಾಗದ ಅನುಬಂಧ -ಸುಜಾತಾ ವಿಶ್ವನಾಥ್

– ಸುಜಾತಾ ವಿಶ್ವನಾಥ್

ಮುಸ್ಸಂಜೆ ಸಮಯ, ಸೂರ್ಯ ಮೋಡಗಳ ಮರಯಲ್ಲಿ ಅವಿಸಿಕೊಳ್ಳಲು ಕೆಂಪಾದ ರಕ್ತದುಂಡೆಯಂತಾಗಿ ಮುನ್ನುಗ್ಗುತ್ತಿದ್ದಾನೆ.
ವಾತವರಣವೆಲ್ಲ ಕೆಂಪನೆಯ ಓಕುಳಿಯಂತೆ ಮಿರಿ ಮಿರಿ ಮಿಂಚುತ್ತಿದೆ. ಆಕಾದಲ್ಲಿ ಕಾಮರ್ೊಡಗಳು ದಿಕ್ಕೆಟ್ಟು ಓಡುತ್ತಿವೆ. ರಭವಾದ ಗಾಳಿ ಬೀಸಲಾರಂಭಿಸಿದ ಕಾರಣ ವಾತವರಣವೆಲ್ಲ ಕೆಂದೂಳು ತುಂಬಿತ್ತು. ದನಗಳೆಲ್ಲ ಬಾಲವನೆತ್ತಿಕೊಂಡು ಮನೆಯತ್ತ ಓಡುತ್ತಿವೆ. ಪಕ್ಷಿಗಳೆಲ್ಲ ಚಿಲಪಿಲಿ ಸದ್ದು ಮಾಡುತ್ತ ತನ್ನ ಗೂಡಿನತ್ತ ಸಾಲು ಸಾಲಾಗಿ ಹಾರುತ್ತಿವೆ. ಬೀದಿಗಳಲ್ಲಿ ಮಕ್ಕಳು ಶಾಲೆಯ ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ಕೆಲವರು ಆಕಾಶದತ್ತ ಮಳೆಗಾಗಿ ಕಾಯುತ್ತಿದ್ದರೆ, ಇನ್ನು ಕೆಲವರು ತಮಗಿಷ್ಟವಾದ ಆಟಗಳನ್ನಾಡುತ್ತಿದ್ದಾರೆ. ಆಗಲೋ ಈಗಲೋ ಮಳೆ ಬರುವ ಮುನ್ಸೂಚನೆ, ಮನಸ್ಸಿಗೆ ಹಿತವೆನಿಸುವ ತಂಪಾದ ವಾತಾವರಣ, ಮಕ್ಕಳೆಲ್ಲ ಮಳೆ ಬರುತ್ತದೆ ಎಂದು ಕೂಗುತ್ತಲೇ ಮನೆ ಸೇರಿಕೊಂಡರು, ಮಳೆಯಿಂದ ಸ್ನಾನಕ್ಕೆ ಸಿದ್ದವಾಗಿ ಮೈಯೊಡ್ಡಿರುವ ಭೂತಾಯಿ, ಗಾಳಿಯ ರಭಸಕ್ಕೆ ಪಟ ಪಟ ಹೊಡೆದು ಕೊಳ್ಳುತಿದ್ದ ಕಿಟಕಿಯ ಬಾಗಿಲುಗಳು, ಪರದೆಗಳು, ತಮ್ಮನ್ನು ಬಂದಿಸುವವರಾರು? ಎಂದು ಪಟಪಟನೆ ಸದ್ದಿನೊಂದಿಗೆ, ಗಾಳಿಯನ್ನೇ ಪ್ರಶ್ನೆ ಮಾಡುತ್ತಾ ತಮ್ಮ ದಭರ್ಾರು ಮಾಡುತ್ತಿದ್ದವು. ಮಳೆರಾಯನ ಬರುವಿಕೆಗಾಗೆ ಭೂದೇವಿ ಸಮೇತ, ಈ ಭೂಮಿಯಲ್ಲಿನ ಎಲ್ಲಾ ಜೀವಿಗಳು ಕಾತುರತೆಯಿಂದ ಕಾಯುತ್ತಿದ್ದವು.
ಆದರೆ ಮೌನವಾಗಿ ಮಡುಗಟ್ಟಿದ್ದ ನೋವಿನಿಂದ ನನ್ನ ಕಣ್ಣಾಲೆಗಳಲ್ಲ್ಲಿ ನೀರು ತುಂಬಿದ್ದವು, ಅಲ್ಲದೆ ಮನದಲ್ಲಿ ಹತ್ತಾರು ಪ್ರಶ್ನೆನೆಗಳು ಮೂಡಿದ್ದವು, ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡುವವರಾರು? ಎಂದು ತಿಳಿಯದೇ ಮನ ಮಂಕಾಗಿತ್ತು. ನನ್ನ ಸ್ನೇಹಿತನನ್ನು ನೆನೆದ ನನ್ನ ಎದೆಯಾಂತಾರಳವಂತೂ ಏನೋ ಹೇಳಲಾಗದ ಮೂಖ ವೇದನೆಯನ್ನು ಅನುಭವಿಸುತ್ತಿತ್ತು. ಒಂದು ದಿನ ಕೂಡ ಒಬ್ಬರನ್ನೊಬ್ಬರು ಬಿಟ್ಟು ಇದ್ದ ನೆನಪಿಲ್ಲ, ಸಹಜವಾಗಿಯೇ ಆ ಅಗಲಿಕೆ ಇಬ್ಬರಲ್ಲೂ ಬೇಸರ ತಂದಿತ್ತು. ನನಗೇನೇ ಆದರೂ ನನ್ನನ್ನು ಜೋಪಾನ ಮಾಡುತ್ತೇನೆ ಎಂಬಂತೆ ನನ್ನ ಬಾಲ್ಯದ ಗೆಳೆಯ ಯಾವಾಗಲೂ ನನ್ನ ಜೊತೆ ಇರುತ್ತಿದ್ದ. ನನಗೆ ಸ್ವಲ್ಪ ನೋವಾದರೂ ತಾನು ಕುಗ್ಗಿಬಿಡುತ್ತಿದ್ದ, ಅಎಂಥದ್ದೋ ಹೇಳಲಾಗದ ಭಾವ ನಮ್ಮಬ್ಬರಲ್ಲಿ ಮನೆಮಾಡಿತ್ತು. ಒಂದು ಕ್ಷಣ ಅವನಿಲ್ಲವೆಂದರೂ ಮನ ಅವನಿಗಾಗಿ ಆತೋರೆಯುತ್ತಿತ್ತು. ಮನೆಯಲ್ಲಿ ಬಡತನವಿದ್ದರೂ ನಮ್ಮಿಬ್ಬರ ಸ್ನೇಹಕ್ಕೆ ಯಾವುದೇ ಕೊರತೆಯಿರಲಿಲ್ಲ. ಅವನಿಗಾಗಿ ನನ್ನ ಹೃದಯ, ನನಗಾಗಿ ಅವನು ಹೃದಯ ಸದಾ ಮಿಡಿಯುತ್ತಲಿದ್ದವು.
“ಜೀವನದಲ್ಲಿ ಪ್ರೀತಿ ಹುಟ್ಟಿ ಸಾಯಬಹುದು, ಆದರೆ ಸ್ನೇಹ ಹುಟ್ಟಿಸಾಯಬಾರದು”, ಕಳೆದು ಕೊಂಡ ಸ್ನೇಹವನ್ನು ನೆನೆದು, ಒಳಗೊಳಗೆ ಕುದಿಯುತ್ತಿತ್ತು ನನ್ನ ಮನ. ನಾನು ಈ ಭೂಮಿಗೆ ಬಂದಾಗಿನಿಂದಲೂ, ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಿದ್ದ. ನಾನವನ ಕೈ ಹಿಡಿದು ಅವನ ಜೊತೆ ಹೆಜ್ಜೆ ಹಾಕಿದ ಆ ದಿನಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿಲಿದ್ದ. ಅದೆಷ್ಟೋ ಬಾರಿ ಜಾತ್ರೆಯಲ್ಲಿ ನನ್ನನ್ನು ಸುತ್ತಾಡಿಸುತ್ತಾ ನನಗಿಷ್ಟವಾದ ಬಳೆ, ಟೇಪು, ಜಡೆಯಕುಚ್ಚು ತೆಗೆದುಕೊಟ್ಟು ನನ್ನನ್ನು ಖುಷಿಯಲ್ಲಿ ತೇಲಿಸುತ್ತಿದ್ದ. ಜಾತ್ರಯಲ್ಲಿನ ರಂಕುಲರಾಟೆಯಲ್ಲಿ ಕುಳಿತು ಮೇಲೋಗಿ ಕೇಳಗೆ ಬರುವಾಗ ನಾನು ಗಾಬರಿಯಿಂದ ಅವನ ಎದೆಗವಚಿಕೊಂಡು ಕೂತುಬಿಡುತ್ತಿದ್ದೆ. ಅವನೂ ಅಷ್ಟೆ ಪ್ರೀತಿಯಿಂದ ನನ್ನನ್ನು ಅಪ್ಪಿ ಭಯ ಪಡಬೇಡ ಏನೋ ಆಗದು ನಾನಿರುವೆನೆಂದು ದೈರ್ಯತುಂಬುತ್ತಿದ್ದ. ನಾ ನಡೆಯುವಾಗ ನನ್ನ ಕಾಲಿಗೇನಾದರೂ ಚುಚ್ಚಿದರೆ ಸಾಕು, ಅವನ ಕಣ್ಣಲ್ಲಿ ರಕ್ತವೇ ಬಂತೇನೋ ಎಂಬಷ್ಟು ಆತಂಕ ಅವನಲ್ಲಿ ಮನೆ ಮಾಡುತ್ತಿತ್ತು. ಹೀಗೆ ಅದೆಷ್ಟೋ ವರ್ಷಗಳ ನಮ್ಮ ಸ್ನೇಹಕ್ಕೆ ಒಂದು ದಿನ ಕಡವಾಣ ಬಿದ್ದಿತು. ನನಗೆ ಮದುವೆ ಆಯಿತು ನಾನು ಗಂಡನ ಮನೆ ಸೇರಿದೆ. ಆದರೆ ಆ ಸ್ನೇಹದ ನೆನಪನಂತೂ ನನ್ನನ್ನು ಕಾಡುತ್ತಲಿತ್ತು.

ಮಳೆ ಬಂದು ನಿಂತು ಹೋಯಿತು, ಗಾಳಿ ತನ್ನ ರಭಸ ತಗ್ಗಿಸಿತು, ಕಿಟಕಿ ಬಾಗಿಲುಗಳು, ಪರದೆಗಳು ತಮ್ಮ ಸದ್ದನ್ನು ನಿಲ್ಲಿಸಿದ್ದವು, ಎಲ್ಲದಕ್ಕೂ ಕೊನೆಯಿದೆ ಎಂಬ ಸೂಚನೆ ನೀಡುವಂತಿತ್ತು ಆ ಮಳೆ ಬಂದು ನಿಂತ ವಾತಾವರಣ. ಬದುಕಲ್ಲಿ ಉತ್ತರ ಸಿಗದ ಪ್ರಶ್ನೆಗಳಿಗೆ ಕೊನೆ ಇದೆ, ಎಲ್ಲರ ಬದುಕಿನಲಿಯೂ ಇದು ಸಹಜವೆಂಬ ಸತ್ಯವನ್ನು ಮನದಟ್ಟು ಮಾಡುವಂತಿತ್ತು. ಅಂಥಾ ಜೀವದ ಗೆಳೆಯನನ್ನು ಬಿಟ್ಟು ನಾನು ಹೇಗೆ ಇರಲಿ? ಅವನು ನನ್ನಿಂದ ದೂರಾಗಿದ್ದಾನೆ ಅವನನ್ನು ಬಿಟ್ಟು ನಾ ಹೇಗೆ ಬದುಕಲಿ? ಅವನ ಕನಿಕರ, ಸ್ನೇಹ, ಕರುಣೆ, ಮಗುವಿನಂತ ಕಪಟವಿಲ್ಲದ ಮನಸ್ಸು, ಆ ಮುಸಿ ಮುಸಿ ನಗುವಿಗೆ ನಾ ಸೋತು ಬಿಟ್ಟಿದ್ದೆ. ನನ್ನ ಜೊತೆ ಮಾತಾಡಬೇಕು ಎಂಬ ತಾಪತ್ರಾಯವಂತು ಅವನ ಮನದಾಳದಲ್ಲಿತ್ತು. ನಾನು ಸಹ ಅವನ ಪ್ರತಿಯೊಂದು ಭಾವನೆಗೂ ಸ್ಪಂದಿಸುತ್ತಿದ್ದೆ. ನಮ್ಮಿಬ್ಬರಿಗೂ ಒಬ್ಬರ ಮೆಲೋಬ್ಬರಿಗೆ ಅತೀವ ಕಾಳಜಿಯಿತ್ತು. ಬಾಲ್ಯದ ಸ್ನೇಹದ ಆ ಕ್ಷಣಗಳು ಎಲ್ಲೋ ಕಳೆದು ಮಾಯಾವಾಗಿಬಿಟ್ಟಿದ್ದವು. ಕಳೆದು ಹೋದ ಆ ಕಾಲ ನನ್ನ ಮನಪಟಲದಿಂದ ಮಾಯಾವಾಗಿರಲಿಲ್ಲ. ಕಳೆದುಕೊಂಡ ಆ ಬಾಲ್ಯದ ಘಟನೆಗಳ ನೆನದ ನನ್ನ ಮನ, ಆಗಾಗ ನೆನಪಿನಾಳಕ್ಕೆ ನುಗ್ಗಿ ಹಳೆಯ ಸ್ನೇಹದ ನೆನಪುಗಳನ್ನು ಮೆಲುಕು ಹಾಕುತ್ತಾ, ಮನಸ್ಸು ಹೃದಯಕ್ಕೆ ಏನೋ ಹಗುವಾದ ಭಾವ ಮೂಡಿಸುತ್ತಿತ್ತು. ಮತ್ತೆ ಸ್ನೇಹವೆಂಬ ಸಾಗರಕ್ಕೆ ಜಿಗಿದು ಎಲ್ಲವನ್ನು ಹಂಚಿಕೊಳ್ಳುವ ಆಸೆ ನನ್ನಲ್ಲಿ. ಸ್ನೇಹಿತನ ಹುಡುಕಾಟದಲ್ಲಿ ನನ್ನ ಮನ ಸೋತು ಕತ್ತಲೆಯಲ್ಲಿ ಕುಳಿತಿತ್ತು.
ಹೀಗೆ ಹಲವು ವರ್ಷಗಳೇ ಕಳೆದವು. ನಾನು ನನ್ನ ಸಂಸಾರದ ಜಂಜಾಟದಲ್ಲಿ ಆ ಸ್ನೇಹಿತನ ನೆನಪನ್ನು ಮರೆಯಲಾಗದೇ ಒದ್ದಾಡುತ್ತಾ ಜೀವನ ಸಾಗಿಸುತ್ತಿದ್ದೆ. ಆಗಾಗ ಅವನನ್ನು ನೋಡಲು ಊರಿಗೆ ಹೋಗಿ ಬರುತ್ತಿದ್ದೆ. ದಿಡೀರನೆ ಒಂದು ದಿನ ನನಗೆ ನಮ್ಮ ಊರಿಂದ ಕರೆ ಬಂದಿತು. ನಿನ್ನ ಸ್ನೇಹಿತನಿಗೆ ತುಂಬಾ ಉಷಾರಿಲ್ಲ, ಅವನೀಗ ಆಸ್ಪತ್ರೆಯಲ್ಲಿ ಇದ್ದಾನೆ, ನೀನು ಒಮ್ಮೆ ಬಂದು ನೋಡಿಕೊಂಡು ಹೋಗು, ಎಂದು ಹೇಳಿಬಿಟ್ಟರು. ಆ ಆಘಾತವನ್ನು ತಡೆಯದೆ ನಾನು ಆತಂಕದಿಂದಲೇ ಹೊರಟೆ. ಅವನನ್ನು ನೋಡುವ ಶಕ್ತಿ ನನ್ನಲ್ಲಿ ಇರಲಿಲ್ಲ, ಇದೇ ಯೋಚನೆಯಲ್ಲಿಯೇ ನಾನು ಆಸ್ಪತ್ರೆಗೆ ಹೋದೆ, ಆಗ ಸಮಯ ಸಂಜೆ 6.30 ಆಗಿತ್ತು. ಅವನನ್ನು ನೋಡುವ, ಮಾತನಾಡಿಸುವ ಆಸೆ ಮನದಲ್ಲಿದ್ದರೂ, ಅವನಿಗೆ ಆರೋಗ್ಯ ಸರಿಯಿಲ್ಲದೆ ಆಸ್ಪತ್ರೆ ಸೇರಿರುವನೆಂಬ ಕಟೋರ ಸತ್ಯವನ್ನು ನಾನು ಅರಗಿಸಿಕೊಳ್ಳದಾದೆ. ಹೇಗೋ ದೈರ್ಯ ಮಾಡಿ ಅವನ ಮುಂದೆ ನಿಂತೆ. ಆ ಆಸ್ಪತ್ರೆಯ ಬೆಡ್ನ ಮೇಲೆ ಅಂಗಾತವಾಗಿ, ಅರೆ ಪ್ರಜ್ನೆಯವಸ್ಥೆಯಲ್ಲಿ ಮಲಗಿದ್ದ, ನನ್ನ ಬಾಲ್ಯ ಸ್ನೇಹಿತನನ್ನು ಕಂಡ ನಾನು ಆಘಾತಕ್ಕೊಳಗಾದೆ. ಬೇಡವೆಂದರೂ ದುಃಖ ಉಮ್ಮಳಿಸಿ ಬರುತ್ತಲಿತ್ತು. ಹೇಗೋ ಸುದಾರಿಸಿಕೊಂಡು ಅವನ ಹೆಸರಿಡಿದು ಕರೆದಾಗ, ಅವನಲ್ಲಿ ಏನೋ ಒಂದು ಸಂಚಲನವಾಗಿತ್ತು ಅನಿಸುತ್ತೆ. ಕಣ್ಣು ಬಿಡಲು ಪ್ರಯತ್ನಿಸುತ್ತಿದ್ದ, ಆದರೂ ಅವನಿಂದ ಕಣ್ಣು ಬಿಟ್ಟು ನನ್ನ ನೋಡಲು ಸಾಧ್ಯವಾಗಲೇ ಇಲ್ಲ್ಲ. ನಾನು ಮೆಲ್ಲನೆ ಅವನ ಕೈ ಸ್ಪರ್ಶಮಾಡಿದ ಕೊಡಲೆ ಅವನಿಗೆ ನಾನೇ ಬಂದಿರುವೆನೆಂದು ಗೊತ್ತಾಗಿರಬೇಕು. ಆಗ ಅವನಿಂದ ನನ್ನನ್ನು ನೋಡಿ ಮಾತನಾಡಿಸುವ ಶಕ್ತಿ ಇಲ್ಲದೇ, ಎರಡು ಕಣ್ಣಾಲೆಗಳಲ್ಲಿ ನೀರುನ್ನು ಹರಿಸುತ್ತಲಿದ್ದ. ಹೊಟ್ಟೆ ಬೆನ್ನಿಗೆ ಹತ್ತಿಕೊಂಡಿತ್ತು, ಮೂಳೆಗಳ ಮೇಲೆ ಬರೀ ಚರ್ಮದ ಹೊದಿಕೆ ಮಾತ್ರ ಕಾಣುತ್ತಲಿತ್ತು. ದೇಹದ ಯಾವ ಭಾಗಕ್ಕೆ ಕಣ್ಣಾಯಿಸಿದರೂ ಬರೀ ಮೂಳೆಗಳೇ ಕಾಣುತ್ತಿದ್ದವು. ನನಗಂತೂ ಅವನ ಆ ಸ್ಥಿತಿ ಕಂಡು ಕರುಳು ಕಿತ್ತುಬರುತ್ತಿತ್ತು. ಅವನು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದ, ಇನ್ನೂ ನನ್ನ ಕತೆ ಮುಗಿಯಿತೆಂಬ ಸೂಚನೆ ನನಗೆ ನೀಡುತ್ತಲಿದ್ದಂತೆ ನನಗೆ ಭಾಸವಾಗುತ್ತಿತ್ತು. ನಾನು ಸಹ ಅಳಲಾರಂಭಿಸಿದ್ದೆ, ಇದನ್ನು ಕಂಡ ನನ್ನ ಮನೆಯವರೆಲ್ಲರೂ ಅಳಲಾರಂಭಿಸಿದ್ದರು. ಅಷ್ಟರಲ್ಲಿ ನಸ್ಸ್ ಬಂದು ಏನಿದು ಗಲಾಟೆ?…ಎಲ್ಲರು ಹೊರಗೆ ಹೋಗಿ ಎಂದು ಗದರಿಸಿದಾಗ, ಎಲ್ಲರು ನನ್ನನ್ನು ಸಮಾಧಾನ ಮಾಡಿ ಹೊರ ಕರೆತಂದರು.
ನೀನು ಇಲ್ಲಿದ್ದರೆ ಅವನನ್ನು ನೋಡಿ ದುಃಖ ಪಡುವೆ ನೀನಿನ್ನು ಊರಿಗೆ ಹೊರಡು, ನಾಳೆ ಬೆಳಿಗ್ಗೆ ಮತ್ತೆ ಬಂದು ನೋಡುವೆಯಂತೆ ಎಂದು ಎಲ್ಲರೂ ನನ್ನನ್ನೂ ಊರಿಗೆ ಕಳುಹಿಸಲು ಸಿದ್ದರಾದರು. ನನಗೆ ಅವನನ್ನು ಬಿಟ್ಟು ಹೋಗುವ ಮನಸ್ಸಿಲ್ಲದಿದ್ದರೂ ಹೊರಡಲೇ ಬೇಕಾದ ಅನಿವಾರ್ಯತೆ, ಭಾರವಾದ ಮನಸ್ಸಿನಿಂದಲೇ ಊರಿನತ್ತ ಹೆಜ್ಜೆ ಹಾಕಿದೆ. ಆದರೂ ಅವನನ್ನು ನೆನೆದು ಮನ ದುಃಖಿಸುತ್ತಲೇ ಇತ್ತು. ಅವನು ಬದುಕಿ ಬರುವನೆಂಬ ನಂಬಿಕೆ ನನಗೆ ಇಲ್ಲದಾಗಿತ್ತು. ಅವನ ಯೋಚನೆಯಲ್ಲಿಯೇ ದುಃಖಿಸುತ್ತಲಿದ್ದೆ. ಹೀಗೆ ಅವನ ಯೋಚನೆಯಲ್ಲಿ ಊಟ ನಿದ್ರೆ ಯಾವುದೂ ಬೇಡವಾಗಿತ್ತು. ಹಾಗೆ ಗರ ಬಡಿದವಳಂತೆ ಕುಳಿತುಬಿಟ್ಟಿದ್ದೆ.
ರಾತ್ರಿ ಸುಮಾರು 1 ಗಂಟೆಯಾಗಿರಬೇಕು. ಮತ್ತೆ ನನ್ನ ಮೊಬೈಲ್ ಸದ್ದು ಮಾಡಿತ್ತು, ತುಂಬಾ ಗಾಬರಿಯಾಯಿತು ಎದೆ ಬಡಿತ ಜೊರಾಯಿತು, ನನ್ನ ಗೆಳೆಯನಿಗೇನಾಯಿತೋ ಎಂಬ ಗಾಬರಿಯಲ್ಲೇ ಹಲೊ ಎಂದೆ…ಆ ಕಡೆಯಿಂದ ಅಳುವ ಧ್ವನಿಯಲ್ಲಿ ಹೇಳಿದರು ಎದೆ ಗಟಗಟ್ಟಿ ಮಾಡಿಕೋ, ಸಹನೆಯಿಂದ ಕೇಳು ಇನ್ನು ನಿನ್ನ ಗೆಳೆಯನಿಲ್ಲ, ಎಲ್ಲಾ ಸಂಬಂಧಿಕರಿಗೂ ಹೇಳಿಬಿಡು ಎಂದು ಕಾಲ್ಕಟ್ ಮಾಡಿದರು. ನನ್ನ ಮನವೆಲ್ಲ ಸ್ಮಶಾನ ಮೌನ ಆವರಿಸಿಬಿಟ್ಟಿತು. ಮನೆಯವರೆಲ್ಲ ಗಾಬರಿಯಿಂದ ಬಂದು ನನ್ನನ್ನು ಬಡಿದೆಬ್ಬಿಸಿ ಏನಾಯಿತು ಎಂದು ಕೇಳಿದರು, ಆಗ ನನ್ನಲ್ಲಿ ಮಡುವು ಕಟ್ಟಿದ್ದ ದುಃಖದ ಕಟ್ಟೆ ಹೊಡೆಯಿತು. ಮನೆಯ ಎಲ್ಲರಿಗೂ ಹೇಳಿದೆ ಅಪ್ಪ ಇನ್ನಿಲ್ಲ ನಮ್ಮನ್ನೆಲ್ಲರನ್ನು ಬಿಟ್ಟು ಮತ್ತೆಂದು ಬಾರದ ಲೋಕದತ್ತ ಪಯಣ ಹೊರಟುಬಿಟ್ಟರು…ನೆಮ್ಮದಿಯ ಚಿರ ನಿದ್ರೆಗೆ ಜಾರಿದರು…ಎಂದು ಮಾತೇ ಹೊರಡದೆ ಬಿಕ್ಕುತ್ತ ಬಿಕ್ಕುತ್ತಾ ಹೇಳಿದೆ.
ಸತ್ತಿದ್ದು ಬೇರೆ ಯಾರೂ ಅಲ್ಲ ನನ್ನ ಸ್ನೇಹಿತನಂತಿದ್ದ, ನನಗೆ ತೊದಲು ನುಡಿ ಕಲಿಸಿದ, ಕೈಹಿಡಿದು ನಡೆಸಿದ, ನನ್ನ ಪುಟ್ಟ ಕಾಲ್ಗಳಿಂದ ತನ್ನ ಎದೆಮೇಲೆ ತುಳಿಸಿಕೊಂಡ, ಜೀವನದಲ್ಲಿ ಉತ್ತಮ ರೀತಿಯಲ್ಲಿ ಬದುಕುವ ದಾರಿ ತೋರಿಸಿದ, ಅಪರೂಪದ ಸ್ನೇಹಿತನಾದ ನನ್ನಪ್ಪ. ತಂದೆಯಾಗಿ ನನ್ನನ್ನು ಕಾಪಾಡಿದ, ಸ್ನೇಹಿತನಾಗಿ ಉತ್ತಮ ಮಾರ್ಗದರ್ಶನ ನೀಡಿದ, ಈ ಬದುಕಿನ ಬಂಡಿಯೊಳಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದ, ಈ ಬಾಳಿನಲ್ಲಿ ಅಡಿಗಡಿಗೂ ಬರುವ ಕಷ್ಟಗಳಿಗೆ ಎದುರಾಗುವ ಪ್ರಶ್ನೆಗಳನ್ನು ಲೆಕ್ಕಿಸಲು ಸಾಧ್ಯವಿಲ್ಲವಾದಾಗ, ಕೆಲವಕ್ಕೆ ಉತ್ತರ ಸಿಕ್ಕರೆ, ಇನ್ನೂ ಕೆಲವು ಪ್ರಶ್ನೆಗಳಿಗಳಿಗೆ ಉತ್ತರವಿಲ್ಲದೆ ಪ್ರಶ್ನೆಗಳಾಗಿಯೇ ಉಳಿದಾಗ, ಈ ಕಾಲದೊಂದಿಗೆ ರಾಜಿಮಾಡಿಕೊಂಡು ನಿತ್ಯವೂ ಕುದಿಯುತ್ತಿರುವ ನನ್ನೊಡಲು ಅನುಭವಿಸುವ ಯಾತನೆ, ದಿಗಿಲು, ಕಂಗಾಲುಗಳೊಂದಿಗೆ ನಾನು ಮಂಕಾಗಿ ಕುಳಿತಾಗ, ನನ್ನಪ್ಪ ಸ್ನೇಹಿತನಾಗಿ, ತಂದೆಯಾಗಿ ಈ ಜೀವನದ ಪರಧಿಯ ಬೇಲಿಯಿಂದ ಹೊರ ಬಾ, ನಿನ್ನ ಯೋಚನೆಗಳು ಬದುಕನ್ನು ನುಂಗಿಹಾಕಲು ಬಿಡಬೇಡ ಅಂದರಿಂದಾಚೆ ಬಾ, ಬದುಕನ್ನು ಸುಂದರವಾಗಿ ಬದುಕಬಹುದು, ಅದು ನಿನ್ನ ಕೈಯಲ್ಲಿದೆ ಎಂದು ದೈರ್ಯ ತುಂಬಿದ ಅದೇ ಸ್ನೇಹಿತ ಇಂದು ಇಲ್ಲವಾಗಿರುವುದು…
ನನ್ನ ಮೌನದ ಕಡಲಂತೂ ಅಪ್ಪನ ಸಾವಿನಲ್ಲಿ ಬಂಧಿಯಾಗಿತ್ತು. ನಾನು ನನ್ನ ಅಪ್ಪನೊಟ್ಟಿಗೆ ಸಮಾಧಿಯಗಬಾರದೇ? ಎಂಬಷ್ಟು ನನ್ನ ಅಂತರಾಳ ಕುದಿಯುತ್ತಿತ್ತು. ಅಯ್ಯೋ ಮೂಕ ಮೌನದ ಮನವೇ, ಈ ಬಂಧವಿಂದು ಬಿಡದೆ ಅಂಟಿಕೊಂಡು, ಕಂಗಂಟ್ಟುಗಳಾಗಿ ಬಿಟ್ಟಿದೆ, ಆ ಕಂಟುಗಳನ್ನು ಬಿಡಿಸಿಕೊಳ್ಳುವ ದಾರಿ ತಿಳಿಯದೇ ಕೊರಗಿದೆ ನನ್ನ ಮನವೀಗ. ಒಟ್ಟಿನಲ್ಲಿ ನಾನು ಅನಾಥಳಾಗಿಬಿಟ್ಟಿದ್ದೆ. ಕ್ಷಣ ಕ್ಷಣವೂ ನನಗೆ ತಂದೆಯಾದ, ಗುರುವಾದ, ಸ್ನೇಹಿತನಾದ ಮತ್ತು ತನ್ನ ಕಿರು ಬರೆಳಿನ ತುದಿಗೆ ಆಸರೆಯಾದ ಆ ಮೂತರ್ಿಯ ಅಂತರಂಗವೆಲ್ಲಿ ಹೋಯ್ತು? ಎಂದು ಹುಡುಕಾಡುತ್ತಿದ್ದೆ ಆದರೂ ಯಾವುದನ್ನೂ ತೋರ್ಪಡಿಸಲಾಗದೆ ಅಡಿಗಡಿಗೆ ನರಳುತ್ತಿತ್ತು ನನ್ನ ಮನ. ಈ ಮನೋವೇಧನೆ ನನ್ನ ಒಡಲ ಕಣ ಕಣವನ್ನು ಸುಡಲಾರಂಭಿಸಿತ್ತು…ನನ್ನನ್ನು ಹೀಗೆ ಕತ್ತ್ತಲಲ್ಲಿ ತಳ್ಳಿ ನಿನೆಲ್ಲಿ ಹೋಗಿ ಬಿಟ್ಟೆ…ಓ ಆತ್ಮವೇ…ನೀನೇಕೆ ಅಪ್ಪನಿಂದ ದೂರಾದೆ? ನನ್ನ ಮನದ ಎದೆಯ ಕೋಣೆಯೊಳಗೆ…ನನ್ನ ಅಂತರಾತ್ಮ ಕೊರಗುತ್ತಾ ಕೊತಗುತ್ತಾ ಘಾಸಿಗೊಂಡುಬಿಟ್ಟಿದೆ. ಅಪ್ಪನ್ನು ಕಳೆದುಕೊಂಡ ನಾನು ಅವರು ಮತ್ತೆ ಬಾರರೆಂಬ ಸತ್ಯ ತಿಳಿದಿದ್ದರೂ, ಬರುವರೇ! ಎಂಬ ಭ್ರಮೆಯಲ್ಲಿ ಮೂರ್ಖಳಾಗಿಬಿಟ್ಟಿದ್ದೇನೆ. ಇನ್ನೊಮ್ಮೆ ನನ್ನ ಎದೆಯಂಗಳದಲ್ಲಿ, ಮುಚ್ಚಿಟ್ಟ ನೋವಿನ ಕಡಲು ಕಟ್ಟೆಯೊಡೆದು ಭೋರ್ಗರೆಯಬಾರದೇ? ಮಂಕಾಗಿರುವ ನನ್ನ ಮನ ಅದರಲ್ಲಿ ಮಿಂದೇಳಬಾರದೇ?…ಆ ಸಾವಿನ ಪ್ರತಿಮೆ ಇನ್ನೆಂದು ಜೀವಂತವಾಗಿ ಬಾರದೆಂಬ ಅರಿವು ಮಂಕುಬಡಿದ ನನ್ನಾತ್ಮಕ್ಕೇಕೆ ತಿಳಿಯುತ್ತಲ್ಲ…
ಅಪ್ಪನ ಸಾವು ನನ್ನ ನೋಡಿ ಅಟ್ಟಹಾಸದಿಂದ ನಗುವಂತೆ ಭಾಸವಾಗುತ್ತಿದೆ. ನನ್ನನ್ನು ಬಿಟ್ಟು ಬದುಕುವುದನ್ನು ಕಲಿ ಎಂದು ಅಣಗಿಸುತ್ತಿದೆ. ನನ್ನ ಅಂಟಿಕೊಂಡಿರುವ ನಿನ್ನೊಳಗಿನ ಮಾಯೆಯನ್ನು ಬಿಟ್ಟು ಬದುಕು ಮಗಳೇ ಎಂದು ಬುದ್ಧಿ ಹೇಳುತ್ತಿದೆ. ಅಳಬೇಕೆಂದರೂ ಕಣ್ಣೀರು ಬತ್ತಿದೆ. ಅಪ್ಪನೊಂದಿಗೆ ಬದುಕಿದೆ ಆ ದಿನಗಳು ಪದೆ ಪದೇ ನನ್ನನ್ನು ಕಾಡುತ್ತಿವೆ. ಅಪ್ಪ ಈ ಮಗಳಿಗೆ ಬದುಕುವ ಶಕ್ತಿ ಕೊಡು. ನನ್ನ ಮೈ ಮನವೆಲ್ಲ ಅಚ್ಚುತ್ತಿರುವ ನಿನ್ನ ಗುರುತುಗಳು ಮಾಸಿಹೋಗುವಂತೆ ಮಾಡು…ದಿಕ್ಕೆಟ್ಟು ಓಡುತ್ತಿದೆ ನನ್ನ ಮನ, ನೀ ಇಲ್ಲದ ಈ ಜೀವನ ಉಸಿರು ಕಟ್ಟಿದೆ, ಉಸಿರಾಡಲು ನನಗೆ ದಾರಿ ತೋರಿಸು. ಬದುಕುವ ಆಸೆ ಚಿಗುರಿಸು, ಮತ್ತೆ ಕನಸುಗಳು ಹೊಸದಾಗಿ ಜನ್ಮತಾಳಲಿ ಬರಡಾಗಿರುವ ನನ್ನ ಜೀವನದಲ್ಲಿ.
ಈ ಜೀವನವೇ ಒಂದು ಪಯಣ. ಈ ಸುದೀರ್ಘ ಪಯಣದಲ್ಲಿ ದಿನಕ್ಕೊಬ್ಬರಂತೆ ಪರಿಚಯವಾಗುತ್ತಿರುತ್ತಾರೆ. ದಿನ ಕಳೆದಂತೆಲ್ಲಾ ಅವರೂ ಮತ್ತು ಅವರ ನೆನೆಪು ಮಾಸಿಹೋಗುತ್ತವೆ. ಆದರೆ ಕೆಲವರು ಮಾತ್ರ ನಮ್ಮಿಂದ ದೂರಾಗುವ ಮುನ್ನವೇ ನಮ್ಮ ಮನಸ್ಸಿನಲ್ಲಿ ಅಳಿಸಲಾಗದ ಚಾಪನ್ನು ಒತ್ತಿಬಿಟ್ಟಿರುತ್ತಾರೆ. ಅಂಥಾ ಅಪರೂಪದ! ನನ್ನಪ್ಪನಂಥಾ ವ್ಯಕ್ತಿಗಳೇನಾದರು ದೂರಾದರೆ, ಅವರ ನೆನಪು ಸದಾ ನಮ್ಮನ್ನು ಕಾಡುತ್ತಲೇ ಇರುತ್ತದೆ. ಮತ್ತೊಮ್ಮೆ ಅವರು ನಮ್ಮ ಜೀವನದಲ್ಲಿ ಬರಬಾರದೇ? ಎಂದು ಮನ ಸದಾ ಹಂಬಲಿಸುತ್ತಿರುತ್ತದೆ. ನನ್ನ ಸ್ನೇಹಿತನಂತಿದ್ದ ನನ್ನಪ್ಪನೊಟ್ಟಿಗೆ ಇನ್ನೊಮ್ಮೆ ಪಯಣಿಸುವ ಭಾಗ್ಯವಿಲ್ಲದಾಗಿದೆ ನನಗೆ. ಮತ್ತೆ ಬರುವನೇ ಈ ಜೀವನದ ಆ ಗೆಳೆಯ?…
ಅದೊಂದು ನನ್ನ ಜೀವನದಲ್ಲಿ ಬಂದ ದೊಡ್ಡ ಕರಾಳ ದಿನ. ಅದನ್ನು ಮರೆಯಲಾಗದ ಕೆಟ್ಟ ದಿನ. ಈ ಜೀವನದಲ್ಲಿ ಅದ್ಭುತ ಸ್ನೇಹಿತನನ್ನು ಕಳೆದುಕೊಂಡ ದಿನ. ಎಲ್ಲರ ಮುಂದೆ ಅಳಲಾಗದೆ, ನಾಲ್ಕು ಗೋಡೆಗಳ ಮಧ್ಯೆ ಒಮ್ಮೆಲೆ ಮೌನ ಧರಿಸಿ ಕುಳಿತುಬಿಟ್ಟೆ. ಆ ಮಟ್ಟಕ್ಕೆ ನನ್ನನ್ನು ತನ್ನ ಸ್ನೇಹಿತೆಯಾಗಿ, ಮಗಳಾಗಿ ಕಾಪಾಡಿದ ಆ ಜೀವ ಇಂದು ನಿಶಬ್ದವಾಗಿ ತನ್ನ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸಿಬಿಟ್ಟಿತ್ತು. ಅನಿರೀಕ್ಷೀತವಾಗಿ ಇದಿರಾದ ಸಾವಿನ ಪ್ರತಿಮೆತಿಯನ್ನು ನೋಡುವ ದೈರ್ಯ ನನ್ನಲ್ಲಿರಲಿಲ್ಲ. ನನ್ನನ್ನು ಆ ಮಟ್ಟಕ್ಕೆ ಧೃತಿಗೆಡಿಸಿತ್ತು ನನ್ನಪ್ಪನ ಸಾವಿನ ಪ್ರತಿಮೆ ಆ ಕ್ಷಣ. ನನಗೆ ಆಗ ಹುಚ್ಚೇ ಹಿಡಿದಷ್ಟು ಭಯ, ಆತಂಕ, ದುಗುಡ, ನೀರವ ಮೌನ, ಅಪ್ಪನಿಲ್ಲದ ಈ ಜಗತ್ತು ನನಗೂ ಬೇಡವಾಗಿತ್ತು. ಅಂಥಾ ತಂದೆ ಈಗ ನನ್ನ ಜೀವನದಲ್ಲಿ ಬರೀ ನೆನಪಾಗಿ, ಗೊಡೆಯ ಮೇಲಿನ ಚಿತ್ರವಾಗಿಬಿಟ್ಟಿದ್ದಾರೆ. ಈಗ ನನಗೆ ಪ್ರತೀ ಕ್ಷಣ ನೆನಪಾಗುತ್ತಿದೆ…ನನ್ನಪ್ಪನ ನೆನಪು…ಬರೀ ನೆನೆಪು…ಬರೀ ನೆನಪು…
ಎಪ್ಪತ್ತರ ನನ್ನಪ್ಪ
ಆಕಾಶದತ್ತ ಪಯಣ
ಹೋರಟೇ ಬಿಟ್ಟ
ನನ್ನೀಲ್ಲಿ ಬಿಟ್ಟು
ಅಲ್ಲಿರುವ ನಕ್ಷತ್ರಗಳ
ಎತ್ತಿ ಆಡಿಸಲೆಂದು…
ಎತ್ತಿ ಆಡಿಸಲೆಂದು…
 

‍ಲೇಖಕರು G

5 September, 2014

8 Comments

  1. ravishankar

    Tumbha channagi bandiade….

  2. ravishankar

    Its touching article…eradu sari odide…innu odbekanisutte…

  3. Rudranna

    hrudaya tattuva lekhana

  4. n.sujatha

    ಧನ್ಯವಾದಗಳು ರವಿ ಸರ್… ಸರ್…ಓದಿ ಓದಿ ನೋವನ್ನು ಮರೆಯುವಾಸೆ ಸಾರ್…ಕಳೆದುಕೊಂಡ ದುಃಖ ನಿಲ್ಲುತ್ತಿಲ್ಲ…

  5. Rudranna

    yako gottilla ee lekhana matte matte odabeku annisitu. mooru bari odiddene. 14 varshagala hinde nanninda dooravada tandeya nenapu bahala kaditu

  6. ಸುಜಾತಾ ವಿಶ್ವನಾಥ್

    ಧನ್ಯವಾದಗಳು ರುದ್ರಣ್ಣ ಸಾರ್ …ಅಪ್ಪನನ್ನು ಕಳೆದುಕೊಂಡ ದುಃಖ ಇನ್ನೂ ನನ್ನ ಎದೆಯಾಂತರಾಳದಲ್ಲಿ ನೋವಿನ ಕಟ್ಟೆಯನ್ನು ಕಟ್ಟಿಕೊಂಡಿದೆ. ತಂದೆಯ ನೆನಪನ್ನು ಮರಯುವುದು ಬಹಳ ಕಷ್ಟ….

  7. Nandhu K V Chetty

    An eye cathing and heart touching article with the magical phrase of you mam. It indeed recalls interactions with father we have in our early days and intimacy that exists between good frends.
    Especially your last lines
    ಎಪ್ಪತ್ತರ ನನ್ನಪ್ಪ
    ಆಕಾಶದತ್ತ ಪಯಣ
    ಹೋರಟೇ ಬಿಟ್ಟ
    ನನ್ನೀಲ್ಲಿ ಬಿಟ್ಟು
    ಅಲ್ಲಿರುವ ನಕ್ಷತ್ರಗಳ
    ಎತ್ತಿ ಆಡಿಸಲೆಂದು…
    ಎತ್ತಿ ಆಡಿಸಲೆಂದು…
    Can not be forgotton till my last breath 🙂

  8. ಸುಜಾತಾ ವಿಶ್ವನಾಥ್

    ಧನ್ಯವಾದಗಳು ನಂದು ಅವರೆ….ಮತ್ತೊಮ್ಮೆ ಎಲ್ಲರಿಗೂ ನನ್ನ ಧನ್ಯವಾದಗಳು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading