ಸ್ತ್ರೀವಾದ ಮತ್ತು ದಲಿತ ಮಹಿಳೆ

ಸುವರ್ಣ ಸಿ

ಸ 1936 ರಲ್ಲಿ ಲಾಹೋರ್ ನಲ್ಲಿ ಜತ್ -ಪತ್ ತೊಡಕ್ ಮಂಡಲ್ ಸಂಘಟನೆಯನ್ನು ಉದ್ದೇಶಿಸಿ ಸಂವಿಧಾ ನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಅವರು ಜಾತಿ ನಿಮರ್ೂಲನೆಯನ್ನು ಕುರಿತು ಆಡಿದ ಈ ಮಾತುಗಳು ನೆನಪಾಗುತ್ತದೆ.
“ what is your ideal  society ? If you do not want caste is a question that is bound to  be asked of  you. If you ask me, my ideal would be a society based on liberty , equality and feternity all ideal society should be mobile, should be full of channels for conveying a channels taking place in one past to other parts In an ideal society there should be many interests consciously communicated and shared’’ ಅಂಬೇಡ್ಕರ್ ಪದೇ ಪದೇ ಹೇಳುವ ಈ Ideal Society  ಎನ್ನುವುದು ಸಾಮಾಜಿಕ ನ್ಯಾಯ ಪರಿಕಲ್ಪನೆಯ ಸಮಾಜ ಅಷ್ಟೇ. ಅಂಬೇಡ್ಕರ್ ಅವರು ಹೇಳಿರುವ ಈ ಮಾತನ್ನು ಯಾಕೆ ಇಲ್ಲಿ ನೆನಪಿಸುತ್ತಿದ್ದೇನೆ ಅಂದರೆ , ಭಾರತದ ಶ್ರೇಣಿಕೃತ ಸಮಾಜದ ವ್ಯವಸ್ಥೆಯಲ್ಲಿ `ಜಾತಿ’ ಎನ್ನುವುದು ಸಮಾಜಕ್ಕೆ ಅಂಟಿರುವ ಒಂದು ಬಗೆಯ “ಕ್ಯಾನ್ಸರ್.” ಈ ಪಿಡುಗನ್ನು ಸಂಪೂರ್ಣವಾಗಿ ಬೇರು ಸಹಿತ ಕಿತ್ತೋಗೆಯ ಬೇಕು ಎನ್ನುವ ಮನಸ್ಸುಗಳು ಈ ಆಧುನಿಕ ಯುಗದ ಸಮಾಜದಲ್ಲಿಯೂ ಕೂಡ ಇಲ್ಲದೆ ಇರುವುದರಿಂದಲೇ ಅಸಮಾನತೆ, ಲಿಂಗತಾರತಮ್ಯತೆ , ದೌರ್ಜನ್ಯ, ಅಸ್ಪೃಶ್ಯತೆ , ಬಾಲ್ಯವಿವಾಹ ,ಮಹಿಳೆಯರ ಮೇಲೆ ಅತ್ಯಾಚಾರ , ದೇವದಾಸಿಪದ್ದತಿ, ಮೂಢನಂಬಿಕೆಗಳಿಂದಾಗಿ ಶೋಷಣೆಗಳು ಇನ್ನೂ ಜೀವಂತವಾಗಿದ್ದು , ದೇವರು , ಧರ್ಮದ ಹೆಸರಿನಲ್ಲಿ ದಲಿತ ಮಹಿಳೆಯರ ಮೇಲೆ ಆಧುನಿಕ ಯುಗದಲ್ಲಿಯೂ ಕೂಡ ನಿರಂತರ ದೌರ್ಜನ್ಯ ಮತ್ತು ಶೋಷಣೆ ನಡೆಯುತ್ತಿರುವುದು ನೋವಿನ ಸಂಗತಿ.
ಭಾರತವು ಪುರುಷ ಪ್ರಧಾನ ಸಮಾಜದ ರಾಷ್ಟ್ರ. ಈ ರಾಷ್ಟ್ರ ಜಾಗತೀಕರಣ, ಉದಾರಿಕರಣ ಹಾಗೂ ಆಧುನಿಕರಣದ ಹಿನ್ನಲೆಯಿಂದ ವೈಜ್ಞಾನಿಕ, ವೈಚಾರಿಕವಾಗಿ ಎಷ್ಟೇ ಅಭಿವೃದ್ಧಿಸಾಧಿಸುತ್ತಿದ್ದರೂ ಕೂಡ ಮಹಿಳೆ ಮಾತ್ರ ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ಇಂದಿಗೂ ಒಂದು ಚೌಕಟ್ಟಿನ ಪಂಜರದೊಳಗೆ ಬಂಧಿಯಾಗಿ ಬದುಕುತ್ತಿದ್ದಾಳೆ. ಈ ಅಸಮಾನತೆಯನ್ನು ಸಹಿಸದ ಸ್ತ್ರೀ ಪರ ಚಿಂತಕಿಯರು ಸ್ತ್ರೀವಾದಿಗಳು ಇದರ ವಿರುದ್ಧ ಸಿಡಿದೆದ್ದು, ಲಿಂಗಸಮಾನತೆಗಾಗಿ ಆಕ್ರೋಶದ ಕೂಗು ಹುಯಿಲೆಬ್ಬಿಸಿದ್ದಾರೆ. ಆದರೆ ಜಡ್ಡುಗಟ್ಟಿರುವ ಪುರುಷರ ಕಿವಿಗಳಿವೆ ಇವರ ಕೂಗು ಕೇಳಿದರೂ . . . ಕೂಡ ಜಾಣಕಿವುಡರಾಗಿ ವರ್ತಿಸುತ್ತಿರುವುದು , ಅಸಮಾನತೆಯ ಸಮಾಜ ಇಂದಿಗೂ ಭದ್ರಕೋಟೆಯಾಗಿದೆ .

.ಶ್ರೇಣಿಕೃತ ಸಮಾಜದಲ್ಲಿ ಮಹಿಳೆ ಅಂದ ತಕ್ಷಣ ಎಲ್ಲ ಜಾತಿಗಳ ಮಹಿಳೆಯರನ್ನೂ ದಲಿತರ ಗುಂಪಿಗೆೆ ಸೇರಿಸಲಾಗುತ್ತದೆ. ಯಾವ ಜಾತಿಯವರು ಆದರೂ ಆಕೆ ದ್ವಿತೀಯ ದಜರ್ೆಯ ಪ್ರಜೆ. ಎಲ್ಲಾ ಮಹಿಳೆಯರ ನೋವು ಒಂದೇ. ದಲಿತ ಮಹಿಳೆ , ಮೇಲ್ವರ್ಗದ ಮಹಿಳೆ ಎಂದು ವಿಂಗಡಿಸುವುದು ಸರಿಯಲ್ಲ ಎನ್ನುವುದು ಬಹುತೇಕ ಸ್ತ್ರೀವಾದಿ ಚಿಂತಕಿಯರ ಅಭಿಪ್ರಾಯ.. ಇವರ ಅಭಿಪ್ರಾಯದಂತೆ ಮೇಲ್ವರ್ಗದ ಮಹಿಳೆಯೂ ತಾನು ಕೆಳಜಾತಿಯ ಮಹಿಳೆಗೆ ಸಮಾನಳು ಎಂದು ಪ್ರೀತಿಯಿಂದ ಘನತೆಯಿಂದ ಒಪ್ಪಿಕೊಂಡು ಸಂವೇದಿಸಿ ಬಂದರೆ ಅದರಂತಹ ದೊಡ್ಡ ಬದಲಾವಣೆ ಇನ್ನೊಂದಿರಲಾರದು. ಆದರೆ ವಾಸ್ತವವಾಗಿ ನೋಡಿದರೆ ಯಾವ ಮಹಿಳೆಯೂ ತಾನು ಕೆಳಜಾತಿಯ ಮಹಿಳೆಗೆ ಸಮಾನಳು ಎಂದು ಪ್ರೀತಿಯಿಂದ ಘನತೆಯಿಂದ ಒಪ್ಪಿಕೊಂಡು ಸಂವೇದಿಸುವುದಿಲ್ಲ ಹಾಗಾದರೆ ಸ್ತ್ರೀವಾದ ಎಂದರೇನು ? ದಲಿತ ಮಹಿಳೆ ಎಂದರೇನು ?
ಸ್ತ್ರೀವಾದ ಎಂದರೆ ಲಿಂಗತಾರತಮ್ಯ, ಪುರುಷಪ್ರಧಾನತೆ ಮತ್ತು ಪಿತೃಪ್ರಧಾನತೆಯನ್ನು ಗುರುತಿಸುವ ಹಾಗೂ ಅದನ್ನು ಪ್ರಶ್ನಿಸುವ ತಾತ್ವಿಕತೆ. ದಲಿತ ಮಹಿಳೆ ಎಂದರೆ ಪರಿಶಿಷ್ಟಜಾತಿ ಮತ್ತು ಪಂಗಡಗಳಿಗೆ ಸೇರಿದ ಹೆಣ್ಣುಮಕ್ಕಳು ಎಂದು ಗುರುತಿಸಲಾಗುತ್ತದೆ. ದಲಿತ ಮಹಿಳೆ ಬೇರೆ ವರ್ಗದ ಜಾತಿಯ ಹೆಣ್ಣುಮಕ್ಕಳಿಗಿಂತಲೂ ವಿಭಿನ್ನ ಕಾರಣ ದಲಿತ ಹೆಣ್ಣುಮಕ್ಕಳ ಆಥರ್ಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿನ್ಯಾಸವೆ ಭಿನ್ನವಾಗಿದೆ ಈ ಮಹಿಳೆ ಸಮಾಜದಲ್ಲಿ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾಗಿ ಮೇಲ್ವರ್ಗದ ಪುರುಷರು ಮತ್ತು ಮಹಿಳೆಯರಿಂದ ದೌರ್ಜನ್ಯ , ಶೋಷಣೆಗೆ ಒಳಗಾಗಿ ಬಡತನ, ಹಸಿವು , ಹಿಂಸೆ ಜಾತಿ ತಾರತಮ್ಯ , ಕಡಿಮೆ ಕೂಲಿಯ ಸಂಕೋಲೆಯಲ್ಲಿ ಸಮಾಜದಲ್ಲಿ ಬದುಕು ಸಾಗಿಸುತ್ತಿರುವವಳೇ ದಲಿತ ಮಹಿಳೆ ಆಗಾಗಿ ದಲಿತ ಮಹಿಳೆಯನ್ನು ಬರೀ ಮಹಿಳೆ ಎಂದು ಸಂಬೋದಿಸುವುದು ತಪ್ಪಾಗುತ್ತದೆ ಏನೋ ಎನ್ನುವುದು ನನ್ನ ಅಭಿಪ್ರಾಯ.
ಸ್ತ್ರೀವಾದಿಗಳು ಲಿಂಗಸಮಾನತೆಗಾಗಿ ಬೊಬ್ಬೆ ಹೊಡೆಯುತ್ತಾರೆ, ಮೇಲ್ವರ್ಗದ ಮಹಿಳೆಯರ ಮೇಲೆ ದೌರ್ಜನ್ಯ, ಶೋಷಣೆಗಳು ನಡೆದಾಗ ಇಡೀ ಲೋಕಕ್ಕೆ ಮಾರ್ದನಿಸುವಂತೆ ಕೂಗುತ್ತಾರೆ ಆದರೆ ಅದೇ ದೌರ್ಜನ್ಯಕ್ಕೆ ಶೋಷಣೆಗೆ ಒಬ್ಬ ದಲಿತ ಮಹಿಳೆ ಒಳಗಾದರೆ , ಅವಳ ಪರ ನಿಂತು ಗಟ್ಟಿಯಾದ ದ್ವನಿ ಎತ್ತುವುದಿಲ್ಲ ಯಾಕೆ ? ಇವರಿಗೆ ಒಬ್ಬ ದಲಿತ ಮಹಿಳೆ ಮಹಿಳೆಯಂತೆ ಕಾಣಿಸುವುದಿಲ್ಲವೇ ? ಅವಳ ಸಂಕಟ, ನೋವು ನೋವಲ್ಲವೇ ? ಸಲಿಂಗ ಸಮಾನತೆಯೇ ಇಲ್ಲದ ಮೇಲೆ ಲಿಂಗಸಮಾನತೆಗಾಗಿ ಸ್ತ್ರೀವಾದಿಗಳು ಬೊಬ್ಬೆಹೊಡೆಯುವುದರಲ್ಲಿ ಯಾವ ಅರ್ಥ ಇದೆ. ಮಹಿಳಾ ಚಳುವಳಿಗಳು ಜೆಂಡರ್ ಪ್ರಶ್ನೆಯನ್ನು ಸಮಾಜದ ಮುಂದೆ ತಂದು ಅದಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆಯೇ ಹೊರತು ಸಮಾಜದೊಳಗಿನ ಜಾತಿಪ್ರಶ್ನೆಯನ್ನಾಗಲಿ, ಮಹಿಳಾಚಳವಳಿಯೊಳಗಿನ ಜಾತಿ ಪ್ರಶ್ನೆಯ ಬಗ್ಗೆಯಾಗಲಿ ಸರಿಯಾದ ನಿಲುವು ಮತ್ತು ಸಂವೇದನೆಯೊಂದಿಗೆ ಕಾರ್ಯನಿರ್ವಹಿಸದೆ ಇರುವುದರಿಂದ ದಲಿತಮಹಿಳೆಯ ನೋವು ನೋವಾಗಿ ಕಾಣದಿರುವುದು ಎಂದು ಹೇಳಿದರೆ ತಪ್ಪಾಗಲಾರದು.
ದಲಿತರ ಸಾಮಾಜಿಕ, ರಾಜಕೀಯ, ಆಥರ್ಿಕ ಸ್ಥಿತಿಯನ್ನು ಅವಲೋಕಿಸಿದರೆ ಬೇರೆ ಜಾತಿ, ವರ್ಗದ ಜನರ ಸಾಮಾಜಿಕ ರಾಜಕೀಯ ಆಥರ್ಿಕ ಸ್ಥಿತಿಗಿಂತ ಭಿನ್ನವಾಗಿದೆ ಅವರು ಹಾಗೆಯೇ ಉಳಿಯಲು ಮೂಲಕಾರಣ ರಾಜಕೀಯ ಹುನ್ನಾರ ಆದ್ದರಿಂದ ದಲಿತ ಮಹಿಳೆಯರ ಬದುಕು ಕೂಡ ಬೇರೆಲ್ಲಾ ಜಾತಿಯ, ಧರ್ಮದ ಮಹಿಳೆಯರ ಬದುಕಿಗಿಂತ ವಿಭಿನ್ನವಾಗಿದೆ. ಈ ಕಾರಣವಾಗಿಯೇ ದಲಿತಮಹಿಳೆಯನ್ನು ಸಮಾಜದ ಎಲ್ಲ ಮಹಿಳೆಯರಂತೆ ನೋಡಲು ಸಾಧ್ಯವಿಲ್ಲ.
19ನೇ ಶತಮಾನದಲ್ಲಿ ಉಂಟಾದ ಸಾಮಾಜಿಕ ಕ್ರಾಂತಿಯಿಂದಾಗಿ ಬಾಲ್ಯವಿವಾಹ ನಿಷೇಧ , ವಿಧವಾ ಪುನರ್ ವಿವಾಹ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಇವು ಜಾರಿಯಾದರೂ ಕೂಡ ತಳಸಮುದಾಯದ ಮಹಿಳೆಯರನ್ನು ಇವು ಒಳಗೊಳ್ಳಲೇ ಇಲ್ಲ. ಇವೆಲ್ಲವೂ ಆಗಿದ್ದು ಮೇಲ್ವರ್ಗದ ಮಹಿಳೆಯರಲ್ಲಿ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ4ರಷ್ಟು ದಲಿತಮಹಿಳೆಯರು ಇಂದಿಗೂ ಕೂಡ ಕುಗ್ರಾಮಗಳಲ್ಲಿ ವಾಸ ಮಾಡುತ್ತಾ ಅವರ ಸಾಂಪ್ರದಾಯಿಕ ವೃತ್ತಿಗಳಾದ ಕಸಗುಡಿಸುವ , ಮಲಹೋರುವ , ಚಪ್ಪಲಿ ಹೋಲಿಯುವ , ದೇವದಾಸಿ , ಕೂಲಿಯಾಳು ಅಥವಾ ಜೀತದಾಳುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ.ಬಿ.ಆರ್ ಅಂಬೇಡ್ಕರ್ ಕಟ್ಟಿಕೊಟ್ಟ ತತ್ವ , ಸಂವಿಧಾನ ನೀಡಿದ ಸಾಮಾಜಿಕ ನ್ಯಾಯದ ಸೌಲಭ್ಯ ತಳಸಮೂದಾಯದ ಮಹಿಳೆಯರಲ್ಲಿ ಅಂಶಿಕವಾಗಿ ದಕ್ಕಿರುವುದರಿಂದ ಇತ್ತೀಚೆಗಷ್ಟೇ ಸಾರ್ವಜನಿಕ ವಲಯಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದು ಗಾಮೆರ್ಂಟ್ಸ್ ,ಕಾಖರ್ಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವರ್ಗದ ಮಹಿಳೆಯರು ಕೂಡ ತಾವು ಮಾಡುತ್ತಿರುವ ಕೆಲಸದ ಸ್ಥಳಗಳಲ್ಲಿ ಅಧಿಕಾರ ದರ್ಪ ಸಾಧಿಸುವ ಪುರುಷರು ಮಹಿಳೆಯರ ಮೇಲೆ ಶೋಷಣೆ , ಅತ್ಯಾಚಾರ , ದೌರ್ಜನ್ಯ , ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಆದರೂ ಕೂಡ ಇವರಿಗೆ ಯಾವುದೇ ರಕ್ಷಣೆ ಇಲ್ಲ . ಯೂರೋಪಿಯನ್ ಪಾಲರ್ಿಮೆಂಟ್ 2006 ರ ಡಿಸೆಂಬರ್ ನಲ್ಲಿ ದಲಿತ ಮಾನವ ಹಕ್ಕುಗಳನ್ನು ಕುರಿತು ಭಾರತದಲ್ಲಿ ಒಂದು ಠರಾವನ್ನು ಮಂಡಿಸಿತು.
ಭಾರತದ ಹನ್ನೊಂದು ರಾಜ್ಯಗಳಲ್ಲಿ ಸಮೀಕ್ಷೆಯನ್ನು ನಡೆಸಿ ನೀಡಿದ ಈ ವರದಿಯಲ್ಲಿ ದಲಿತ ಹೆಣ್ಣುಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಅಂಕಿ ಅಂಶಗಳು ಆತಂಕಹುಟ್ಟಿಸುತ್ತದೆ. ಪ್ರತಿದಿನ ಮೂವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗುತ್ತದೆ. ಹದಿನೆಂಟು ಜನರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಲಾಗುತ್ತದೆ. ಪ್ರತಿ ಹದಿನೆಂಟು ನಿಮಿಷಕ್ಕೊಮ್ಮೆ ದಲಿತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇನ್ನೂ 2011ರ ನ್ಯಾಷನಲ್ ಕ್ರೈಮ್ ರೀಕಾಡರ್್ ಬ್ಯೂರೋ ಪ್ರಕಾರ ದೇಶದಲ್ಲಿ ಪ್ರತಿ 2 ದಿನಗಳಲ್ಲಿ ದಲಿತರ 3 ಕೊಲೆಗಳು , 20 ನಿಮಿಷಕ್ಕೊಂದು ಜಾತಿ ದೌರ್ಜನ್ಯ, ಅರ್ಧಗಂಟೆಗೊಮ್ಮೆ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿದೆ ಆದರೆ ಇವರ ಮೇಲೆ ನಡೆಯುವ ಅಕ್ರಮಣಗಳ ವಿರುದ್ಧ ಮೊಕದ್ಧಮೆಗಳನ್ನು ದಾಖಲು ಮಾಡಿದ್ದರೂ ಇವುಗಳಲ್ಲಿ ಶಿಕ್ಷೆಗೊಳಗಾದವರ ಸಂಖ್ಯೆ ಮಾತ್ರ ಶೇ5 ಕ್ಕಿಂತಲೂ ಕಡಿಮೆ ಕಾರಣ. ಪ್ರಬಲ ಜಾತಿಗಳ ರಾಜಕೀಯದ ಪ್ರಯೋಗದಿಂದಾಗಿ .
ಇನ್ನೂ ದಲಿತ ಮಹಿಳೆಯರ ಸಾಕ್ಷರತಾ ಪ್ರಮಾಣವು ಕೂಡ ದಲಿತೇತರ ಮಹಿಳೆಯರ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆಯಿರುವುದು ಸಮಸ್ಯೆಯ ಮತ್ತೊಂದು ಕರಾಳ ಮುಖ. ದಲಿತೇತರ ಮಹಿಳೆಯರ ಸಾಕ್ಷರತಾ ಪ್ರಮಾಣವು 1991-2001ರದಶಕದಲ್ಲಿ ಶೇ 29.21 ರಷ್ಟು ಬೆಳವಣಿಗೆ ಕಂಡಿದೆ . ಆದರೆ ದಲಿತ ಮಹಿಳೆಯರ ಸಾಕ್ಷರತೆಯು ಶೇ0.58ರಷ್ಟು ಬೆಳವಣಿಗೆ ಕಂಡಿದ್ದರೂ ಅದು ಅತ್ಯಂತ ಕೆಳಮಟ್ಟದಲ್ಲಿರುವುದು ಕಂಡು ಬರುತ್ತದೆ.
ದಲಿತ ಮಹಿಳೆಯನ್ನು ಈ ಸಮಾಜ ಕೇವಲ ಒಂದು ಭೋಗದ ವಸ್ತುವಾಗಿ ಕಾಣಲಾಗುತ್ತಿದೆಯೇ ಹೊರತು ಅವಳು ಒಬ್ಬಳು ಹೆಣ್ಣು ಅವಳಲ್ಲಿಯೂ ಸಂವೇದನೆಶೀಲತೆ ಇದೆ ಅವಳನ್ನು ಎಲ್ಲ ಮಹಿಳೆಯರಂತೆ ಮುಖ್ಯವಾಹಿನಿಗೆ ತರಬೇಕು ಎನ್ನುವ ಮನಸ್ಸುಗಳು ಇಲ್ಲದೇ ಇರುವುದು ದುರಂತ. ಕೇವಲ ತಮ್ಮ ರಾಜಕೀಯ ಬೆಳೆಯನ್ನು ಬೇಯಿಸಿಕೊಳ್ಳುವ ಸಲುವಾಗಿ ಅವಳ ಬಗ್ಗೆ ಅಲ್ಲಲ್ಲಿ ಕನಿಕರದ ಮಾತುಗಳು ಕೇಳಿಬರುತ್ತದೆ ಹೊರತು ಆಕೆಗವಿದುವರೆಗೂ ಯಾರು ಕೂಡ ರಾಜಕೀಯ, ಸಾಮಾಜಿಕ , ಆಥರ್ಿಕವಾಗಿ ಸಬಲಳನ್ನಾಗಿ ಮಾಡಲು ಮಾನಸಿಕವಾಗಿ ಬೆಂಬಲ ನೀಡುತ್ತಿಲ್ಲ. ಆದರೂ ಈ ತಳಸಮುದಾಯದ ಮಹಿಳೆಯರು ಅವರಿಗೆ ಆಗುತ್ತಿರುವ ಅವಮಾನ, ಹಿಂಸೆ ಎಲ್ಲವನ್ನೂ ಸಹಿಸಿಕೊಳ್ಳುತ್ತಾ ತಮ್ಮ ನೋವಿನ ಬೆಂಕಿಯ ಉಂಡೆಯನ್ನು ಒಡಲೊಳಗೆ ಹುದುಗಿಸಿಟ್ಟುಕೊಂಡು ಬದುಕು ಸಾಗಿಸಬೇಕಾಗಿದೆ. ಕಾರಣ ಅವರನ್ನು ಸದಾಬೆಂಬತ್ತಿ ಕಾಡುತ್ತಿರುವ ಬಡತನ. ಈ ಬಡತನದ ಬೇಗುದಿಯಲ್ಲಿ ನೊಂದು ಬೇಯುತ್ತಿರುವ ದಲಿತ ಮಹಿಳೆಯರು ಈಗ ಇರುವ ಕೆಲಸವೂ ಇಲ್ಲದೇ ಹೋದರೆ ದಿನನಿತ್ಯದ ಬದುಕು ಮತ್ತಷ್ಟೂ ಕ್ಲಿಷ್ಟಕರವಾಗುತ್ತದೆ ಎಂದುಕೊಂಡು ಅವರ ಮೇಲಾಗುವ ಯಾವುದೇ ದೌರ್ಜನ್ಯ, ಶೋಷಣೆಯನ್ನು ಪ್ರತಿಭಟಿಸಲು ಸಾಧ್ಯವಾಗುತ್ತಿಲ್ಲ .ಒಂದು ವೇಳೆ ಅವರು ಏನಾದರೂ ಈ ಸಮಾಜದಲ್ಲಿ ಪ್ರತಿಭಟಿಸಲು ಮುಂದಾದರೆ ಆ ಹೆಣ್ಣುಮಕ್ಕಳ ದನಿ ಕೇಳುವ ವ್ಯವಧಾನ ಸ್ತ್ರೀವಾದಿಗಳು ಸೇರಿದಂತೆ ಯಾರೊಬ್ಬರಿಗೂ ಇಲ್ಲ .ಯಾವಾಗ ಈ ಸಮಾಜ ದಲಿತ ಮಹಿಳೆಯ ನೋಡುವ ದೃಷ್ಟಿಕೋನ ಬದಲಾಗುತ್ತದೋ ಆವಾಗ ಈ ಸಮಾಜದಲ್ಲಿ ಅಸಮಾನತೆಯನ್ನು ತೊಡೆದು ಹಾಕಲು ಲಿಂಗಸಮಾನತೆಗಾಗಿ ಕೂಗುತ್ತಿರುವ ಕೂಗಿಗೆ ಬಲಬರುವುದರಲ್ಲಿ ಎರಡು ಮಾತಿಲ್ಲ ಅಲ್ಲವೇ ?
ಡಾ.ಬಿ.ಆರ್ .ಅಂಬೇಡ್ಕರ್ ಭಾರತದ ಸಂವಿಧಾನ ರಚಿಸುವುದಕ್ಕಿಂತ ಮುನ್ನವೇ ಅಂದರೆ ಜರ್ಮನಿಯ ಬಾನ್ ನಲ್ಲಿ ಅವರು ವಾಸವಿದ್ದ ಸಂದರ್ಭದಲ್ಲಿ “ ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆ ಯ ಕುರಿತು ಗಂಭೀರವಾಗಿ ಆಲೋಚಿಸಿ ಅವರ ಚಿಂತನೆಗಳನ್ನು ತಮ್ಮ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿ ಅಂತರ್ಗತಗೊಳಿಸಿಕೊಂಡರು. ಮಹಿಳೆಯರಿಗೆ ಧಾಮರ್ಿಕ , ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಸಂವಿಧಾನ ಬದ್ಧವಾಗಿ ನೀಡಲು ಶ್ರಮಿಸಿದ “ ಮೊಟ್ಟ ಮೊದಲ ಹೋರಾಟಗಾರ ಡಾ.ಬಿ.ಆರ್. ಅಂಬೇಡ್ಕರ್ . ಅವರು ನಡೆಸಿದ ಈ ಮಹಿಳಾ ಪರ ಹೋರಾಟದ ನಿಲುವು ಖಚಿತವಾದ ನಿಲುವು ಎಂದು ಈ ಸಮಾಜ ಪರಿಗಣಿಸದೇ ಅಸಮಾನತೆಯ ಸಂಘರ್ಷವೆಂದು ಪರಿಗಣಿಸಿದ ಪರಿಣಾಮವಾಗಿ ಇಂದಿಗೂ ಲಿಂಗತಾರತಮ್ಯತೆ ಜೀವಂತವಾಗಿರಲು ಕಾರಣವಾಗಿದೆ.
 

‍ಲೇಖಕರು G

April 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. bidaloti Ranganath

    ಅರ್ಥಪೂರ್ಣ ಲೇಖನ. ಸ್ತ್ರೀ ಸಂವೇದನಶೀಲವಾಗಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: