ಸೋಷಿಯಲ್ ಮೀಡಿಯಾದಲ್ಲಿ ಗಂಡಸರು ಉತ್ಪಾದಿಸುವ ಮಹಿಳಾ ಲೇಖಕಿಯರು..

‘ಸೋಷಿಯಲ್ ಮೀಡಿಯಾದಲ್ಲಿ
ಗಂಡಸರು ಉತ್ಪಾದಿಸುವ ಮಹಿಳಾ ಕವಿ/ಲೇಖಕಿ/ಚಿಂತಕಿಯರು’ ಎನ್ನುವ ಲೇಖನವನ್ನು ಅರುಣಕುಮಾರ್ ಬರೆದಿದ್ದಾರೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ 

[email protected]ಗೆ ಕಳಿಸಿಕೊಡಿ

ಅರುಣ ಜೋಳದಕೂಡ್ಲಿಗಿ 

ಪುರುಷ ಲೇಖಕರು ಪ್ರತಿಭೆಯಿದ್ದೂ ಅವಕಾಶ ವಂಚಿತ ಲೇಖಕಿಯರನ್ನು ಮುನ್ನಲೆಗೆ ತಂದು ಪರಿಚಯಿಸಿದ್ದಕ್ಕೆ ದೊಡ್ಡ ಪರಂಪರೆಯೇ ಇದೆ. ಲಂಕೇಶರು ಮತ್ತವರ ಪತ್ರಿಕೆ ತತಕ್ಷಣ ನೆನಪಿಗೆ‌ ಬರುವ ಸಾಕ್ಷ್ಯ…

ಹೀಗೆ ಮುನ್ನಲೆಗೆ ತರುವಲ್ಲಿ ಮಹಿಳೆಯರ ಪ್ರಖರ ಪ್ರತಿಭೆ ಜೊತೆಗೆ ಸಹಜವಾದ ವಿರುದ್ದ ಲಿಂಗದ ಆಕರ್ಷಣೆ ಇರುವುದು ಸುಳ್ಳಲ್ಲ.
ಹೀಗೆ ಮುನ್ನಲೆಗೆ ತರುವ ಭರದಲ್ಲಿ ಕೆಲವು ಅಂದದ ಮಹಿಳೆಯರು ಕನಿಷ್ಠ ಪ್ರತಿಭೆಯಲ್ಲಿ ಗರಿಷ್ಠ ಪ್ರಚಾರ ಅವಕಾಶ ಪಡೆದದ್ದೂ ಇದೆ. ಮತ್ತವರು ಈಗ ಮರೆತು ಹೋದದ್ದೂ ವಾಸ್ತವ. ನಿಜ ಪ್ರತಿಭೆಯಿದ್ದೂ ಗಂಡಸು ಲೇಖಕರಿಂದ ಅವಕಾಶ ಪಡೆದವರು ದೊಡ್ಡ ಲೇಖಕಿಯರಾಗಿ ಪರಿಚಯಿಸಿದ ಲೇಖಕರಿಗಿಂತಲೂ ಎತ್ತರದಲ್ಲಿರುವುದೂ ನಮ್ಮ ಕಣ್ಣಮುಂದೆ ಇದೆ.

ಒನಕೆ ಓಬವ್ವನ ಗಂಡ ಊಟಕ್ಕೆ ಕೂರದಿದ್ದರೆ ಅವಳ ದೈರ್ಯ ಸಾಹಸ ಲೋಕಕ್ಕೆ ತಿಳಿಯುತ್ತಿರಲಿಲ್ಲ..ಹಾಗೆಯೇ ಗಂಡನ ಅಕಾಲಿಕ ಮರಣ ಸಂಭವಿಸಿದ ಕಾರಣಕ್ಕೇ ಜಾನ್ಸಿರಾಣಿ ಲಕ್ಷ್ಮೀಬಾಯಿಯನ್ನು ಒಳಗೊಂಡಂತೆ ಹತ್ತಾರು ರಾಣಿಯರು ತಮ್ಮ ದೈರ್ಯ ಸಾಹಸವನ್ನು ತೋರಲಾಗುತ್ತಿರಲಿಲ್ಲ. ಇದನ್ನು ಬರಹಕ್ಕೆ ಹೋಲಿಸಿಕೊಂಡರೆ ಸೃಜನಶೀಲತೆ ಯಾವ ಲಿಂಗಕ್ಕೂ ಸೀಮಿತವಲ್ಲ, ತೋರ್ಪಡಿಕೆಗೆ ಅವಕಾಶ ದಕ್ಕಬೇಕಷ್ಟೆ ಎನ್ನುವುದನ್ನು ಸೂಚಿಸುತ್ತದೆ. ಇದರಲ್ಲಿ ಗಂಡು ಪ್ರಥಮ ದರ್ಜೆ ಹೆಣ್ಣು ದ್ವಿತೀಯ ದರ್ಜೆಯ ಶ್ರೇಣೀಕರಣ ಮಣ್ಣಾಗುವುದನ್ನು ಕಾಣಬಹುದು. ಒಟ್ಟಾರೆ ಇದನ್ನು ಪರಸ್ಪರ ಪ್ರೋತ್ಸಾಹಕರ ಬೆಳವಣಿಗೆ ಎಂದು ಪರಿಭಾವಿಸಬಹುದು.

ಇದೀಗ ಸೊಷಿಯಲ್ ಮೀಡಿಯಾದಲ್ಲೂ ಗಂಡಸರು ಮಹಿಳಾ ಕವಯಿತ್ರಿ/ಲೇಖಕಿ/ಚಿಂತಕಿಯರನ್ನು‌ ಬೆಳೆಸುತ್ತಿದ್ದಾರೆ. ಹಿಂದೆ ಲೇಖಕ ಚಿಂತಕರು ಮಾತ್ರ ಕೆಲವರನ್ನು ಗುರುತಿಸಿ ಬೆಳೆಯಲು ಅವಕಾಶ ಮಾಡುತ್ತಿದ್ದರು. ಇದರಲ್ಲಿ ಆರಂಭಕ್ಕೆ ಪ್ರತಿಭೆಯೇ ಮಾನದಂಡವಾಗುತ್ತಿತ್ತು. ಇದೀಗ ಈ ಬೆಳೆಸುವ ಅವಕಾಶ ಕೇವಲ ಚಿಂತಕ ಲೇಖಕರಿಗೆ‌ ಮಾತ್ರವಲ್ಲದೆ ಬರಹ ಮಾಡದ ಓದುಗ ಪುರುಷರಿಗೂ ಲಭ್ಯವಾಗಿದೆ.

ಇದೀಗ ಸೋಷಿಯಲ್ ಮೀಡಿಯಾದ ಚುಟುಕು ಓದುವರ್ಗವೂ ಮಹಿಳಾ ಕವಿ/ಲೇಖಕಿ/ಚಿಂತಕಿಯರನ್ನು‌ ಬೆಳೆಸುತ್ತಿದೆ. ಈ ಬೆಳೆಸುವ ವಿಮರ್ಶೆ ಹೇಗಿರುತ್ತೆ ಅಂದರೆ  ಮೊದಲನೆಯದಾಗಿ ಏನನ್ನೂ ಅಕ್ಷರದಲ್ಲಿ ಸೂಚಿಸದ ಸಿಂಬಲ್ಲುಗಳಲ್ಲಿರುತ್ತೆ. ಲೈಕು,ಹೆಬ್ಬೆರಳು ಸೆಟೆಸುವುದು..ಇತ್ಯಾದಿ. ಇನ್ನು ಅಕ್ಷರ ರೂಪದಲ್ಲಿ ಸೂಪರ್, ಬಿವ್ಟಿಫುಲ್, ವಂಡರ್ ಫುಲ್ ಇತ್ಯಾದಿ. ಈ ಎಲ್ಲದರಲ್ಲೂ ಎಂಥದ್ದೇ ಬರಹಕ್ಕೂ ಶೇ 90 ರಷ್ಟು‌ ಮೆಚ್ಚುಗೆಯ ಬೆಂಬಲ..ಇದರಲ್ಲಿ ಶೇ 10 ರ ಭಿನ್ನಾಭಿಪ್ರಾಯಕ್ಕೆ ಕೈಯೊರಸಿ ಬಿಸಾಕುವ ಟಿಶ್ಶು ಪೇಪರಿನ ಸ್ಥಾನ.

ಇಂತಹ ಗಂಡಸರ ಲೈಕು ಕಮೆಂಟಾದಿಗಳಿಂದ ಹೊರಹೊಮ್ಮುವ ಲೇಖಕಿ/ಕವಯಿತ್ರಿ/ಚಿಂತಕಿಯರನ್ನು ಪ್ರೋತ್ಸಾಹದಾಯಕ ಬೆಳವಣಿಗೆ ಎಂದು ಕರೆಯದೆ ಗಂಡಸರು ಉತ್ಪಾದಿಸುತ್ತಿರುವ ಕವಯಿತ್ರಿ/ಲೇಖಕಿ/ಚಿಂತಕಿಯರು ಎಂದು ಕರೆಯುವೆ. ಇದರಲ್ಲೂ ನಿಜ ಪ್ರತಿಭೆಯಿದ್ದ ಮಹಿಳೆಯರೂ ಇದ್ದಾರೆ. ಆದರೆ ಅವರು ಈ ಲೈಕು ಕಮೆಂಟಾದಿಗಳಿಗೆ ಉಬ್ಬದೆ, ಅವನ್ನೆಲ್ಲಾ ಅನುಮಾನದಿಂದ ನೋಡುತ್ತಾ, ವಿಮರ್ಶೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ ತಮ್ಮ ಬರಹವನ್ನು ಎಚ್ಚರದಿಂದ ಕಾಯ್ದುಕೊಂಡಿದ್ದಾರೆ.

ಆದರೆ ಈ ಲೈಕು ಕಮೆಂಟಾದಿಗಳಿಗೆ ಉಬ್ಬಿ ತೋಚಿದ್ದನ್ನೆಲ್ಲಾ ಗೀಚುವ ಮಹಿಳೆಯರ ಸಂಖ್ಯೆ ದೊಡ್ಡದಿದೆ. ಇವರ ಬರಹಕ್ಕೆ‌ ನಿಷ್ಠುರ ವಿಮರ್ಶೆ ಬಂದರೆ, ಅಂತಹ ವಿಮರ್ಶೆಗವರು ಕಿವಿಯಾಗಿ ತಿದ್ದಿಕೊಂಡರೆ ಅವರೂ ಘನವಾದದ್ದನ್ನು ಬರೆಯಬಲ್ಲರು. ಆದರೆ ಇಂತಹವರು ಈ ಲೈಕು ಕಮೆಂಟಾದಿಗಳ ಮೋಹದಲ್ಲಿ ಕಳೆದು ವಿಮರ್ಶೆ ಟೀಕೆಗೆ ಕಿವುಡಾದದ್ದೇ ಹೆಚ್ಚು.

ಅಂತಹ ಮಹಿಳೆಯರು ಆತ್ಮಾವಲೋಕನ‌ಮಾಡಿಕೊಳ್ಳಲು‌ ಇನ್ನೂ ಸಮಯಾವಕಾಶವಿದೆ.

ಈ ಟಿಪ್ಪಣಿಯೇ ಗಂಡು ಪ್ರಧಾನ ಸಮಾಜದ ಪ್ರತಿಸ್ಪಂದನೆ, ಗಂಡಾಳ್ವಿಕೆ‌ ಸಮಾಜದ ಪ್ರತಿಬಿಂಬ ಎಂದು ದೂಷಿಸುವ ಸಾಧ್ಯತೆ ಇದೆ. ಕೆಲವು ಮಹಿಳೆಯರು ಕಡು ಕೋಪವನ್ನೂ ತೋರಬಹುದು. ಆದರೆ ಈ ತರಹದ ಗಂಡಸರ ಹುಸಿ ಪ್ರತಿಕ್ರಿಯೆ ಪ್ರೋತ್ಸಾಹಗಳಿಂದ ರೂಪುಗೊಂಡ ಲೇಖಕಿ/ಚಿಂತಕಿ/ಕವಯಿತ್ರಿಯರು ತನ್ನ ಹೆಣ್ಣುಭಾಷೆ ಅಥವಾ ಲಿಂಗನಿರಸನದ ಭಾಷೆಯನ್ನು ಮರೆತು, ಗಂಡುಭಾಷೆಯನ್ನೆ ಅಭ್ಯಾಸ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಮಹಿಳೆಯರ ಬರಹಗಳೂ ಗಂಡಾಳ್ವಿಕೆ ಸಮಾಜದ‌ ನಡಾವಳಿಗೆ ಮುದ್ರೆ ಒತ್ತುವ ಅಪಾಯವಿದೆ ಎನ್ನುವ ಆತಂಕದಲ್ಲಿ ಈ ಟಿಪ್ಪಣಿ ಬರೆದಿರುವೆ..

ಹಾಗಾದರೆ, ಹೆಣ್ಣುಮಕ್ಕಳು ಉತ್ಪಾದಿಸುವ ಗಂಡಸು ಕವಿ/ಲೇಖಕ/ಚಿಂತಕರಿಲ್ಲವೇ ಎಂದು ಕೇಳಬಹುದು, ಹೀಗೆ ಹೆಣ್ಣು ಉತ್ಪದಿಸಿದ ಬಹುಪಾಲು ಬರಹಗಾರರು ತನ್ನ ‘ಗಂಡು’ಭಾಷೆಯನ್ನೇ ಇನ್ನಷ್ಟು ಬೆಳೆಸುತ್ತಾರೆಯೇ ವಿನಃ ಲಿಂಗನಿರಸನದ ಭಾಷೆಯನ್ನು ರೂಪಿಸಿಕೊಳ್ಳಲಾರರು. ಉಳಿದಂತೆ ಅದರ ಸ್ವರೂಪ ಬೇರೆಯಾಗಿದೆ ಮುಂದೆಂದಾದರೂ ಆ ಬಗ್ಗೆಯೂ ವಿವರವಾಗಿ ಬರೆಯುವೆ.

‍ಲೇಖಕರು avadhi

July 10, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Radhika

    Male writers are selfmade and female writers exist because there are men who press Like on fb posts! Great analysis!
    Male ego speaks! Utterly discriminating writeup this one.

    ಪ್ರತಿಕ್ರಿಯೆ
    • Ashalatha, Mangaluru

      ಹೌದು, ಈ ಲೇಖನ ಓದುವಾಗ ಪೂರ್ವಾಗ್ರಹ ಪೀಡಿತ ಮನಸ್ಥಿತಿ ಎದ್ದು ಕಾಣುತ್ತಿದೆ. ಅವಧಿಯಲ್ಲಿ ಇಂತಹಾ ಲೇಖನವನ್ನು ನಿರೀಕ್ಷಿಸಿರಲಿಲ್ಲ.

      ಪ್ರತಿಕ್ರಿಯೆ
    • Chi na hally kirana

      ಸೋಷಿಯಲ್ ಮೀಡಿಯಗಳಲ್ಲಿ ಪುರುಷರ ಯಕಃಶ್ಚಿತ್ ಕಾಮೆಂಟಗಳಿಂದಾಗಿ ಹೆಚ್ಚೆಚ್ಚು ಸೃಜನಶೀಲ ಮಹಿಳಾ ಸಾಹಿತಿಗಳು ಉಗಮವಾಗುತ್ತಿದ್ದರೆ ಎಂಬ ನಿಮ್ಮ ಸಂಶೋಧನೆಗೆ ನೂರ ಒಂದು ನಮಸ್ಕಾರಗಳು, ಇದರಿಂದ ಯಾವ ಪುರುಷಾರ್ಥ ಸಾದಿಸಿದಂತಾಯ್ತು ನೀವೇ ಹೇಳಿ..ಸ್ವಾಮಿ…..

      ಪ್ರತಿಕ್ರಿಯೆ
  2. Sarojini Padasalgi

    ಪ್ರತಿಕ್ರಿಯೆ ತೋರಿಸಲೂ ಮನಸ್ಸು ಬಾರದ ಅರ್ಥವಿಲ್ಲದ ಬರಹ

    ಪ್ರತಿಕ್ರಿಯೆ
  3. Sudha Hegde

    ನಾನಂತೂ ವಾದಿಸುತ್ತಾ, ನನ್ನ ಸಮಯವನ್ನು ವ್ಯರ್ಥಗೊಳಿಸಲಾರೆ. ಪ್ರತಿಕ್ರಿಯೆಗೆ ಯೋಗ್ಯವಾದ ವಿಚಾರ ಇದಲ್ಲ. ಇವುಗಳನ್ನೆಲ್ಲ ದಾಟಿ ದಶಕಗಳೇ ಸಂದಿವೆ.

    ಪ್ರತಿಕ್ರಿಯೆ
  4. Chaitrika Naik

    ತುಂಬಾ ಪೂರ್ವಾಗ್ರಹ ಪೀಡಿತ ಬರಹ ಿದು. ಪ್ರತಿಭೆಯೆ ಇಲ್ಲ ಎಂದ ಮೇಲೆ ಬೆಳೆಸುವುದೆಲ್ಲಿಂದ ಬಂತು. ಹಾಗೆ ಲೈಕ್ ಗಳಿಗೆ ಕಾಯುವ ಬರಹಗಾರರು ಬೇಗ ಆಸಕ್ತಿ ಕಳೆದುಕೊಳ್ಳುತ್ತಾರೆ.

    ಪ್ರತಿಕ್ರಿಯೆ
  5. Sindhu Rao

    What nonsense is this? Is this written really by Aruj Joladakudligi? Or a proxy writer and a male.c.p*g. of course.
    Please apologize and remove this.

    Did not expect this from Avadhi.

    Regards,
    Sindhu

    ಪ್ರತಿಕ್ರಿಯೆ
  6. Sandhya naik

    ಹಾಗೇಯೇ ಮಹಿಳೆಯರ ಲೈಕು, ಸ್ಟಿಕ್ಕರ್ ಕಾಮೆಂಟುಗಳಿಂದ ಪುರುಷ ಲೇಖಕರು ಸೃಷ್ಟಿಯಾಗುತ್ತಿಲ್ಲವೇ? ಬರೀ ಓದುಗರಲ್ಲದ ಮಹಿಳಾರಾಧಕ ಪುರುಷರ ಲೈಕುಗಳಿಗೆ ಪೊಳ್ಳು ಬರಹಗಳ ಲೇಖಕಿ ಪ್ರಸಿದ್ಧಿ ಹೊಂದುತ್ತಾಳೆಂದರೆ , ಪ್ರಸಿದ್ಧ ಲೇಖಕಿ ಎಂದು ನಿರ್ಧರಿಸುವ ವಿಮರ್ಶಕ ಮೂರ್ಖನೇ?

    ಪ್ರತಿಕ್ರಿಯೆ
  7. prathibha nandakumar

    ಅಪಕ್ವ ಧೋರಣೆ. ಚರ್ಚೆ ಕೂಡಾ ಅಗತ್ಯವಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: