ಸೋತಿರಬಹುದು, ಆದರೆ ಸತ್ತಿಲ್ಲ..

ಸೋಮಶೇಖರ ಸಿರಾ

ಹೌದು ನಾವು ಸೋತಿದ್ದೇವೆ
ನೀನು ನಮ್ಮ ಬೆನ್ನ ಹಿಂದೆಯೇ
ಮುಸಿ ಮುಸಿ ನಗುತ್ತಿರಬಹುದು
ಆದರೆ ನಿನ್ನ ಹೃದಯ ಕಠೋರವಾಗುತ್ತಿರುವುದನ್ನು
ನೋಡಿ ನಾವು ಮರುಗುತ್ತಿದ್ದೇವೆ.

ಹೌದು ನಾವು ನಮ್ಮ ಜನರ
ಒಳಗಿನ ರಕ್ತ ಪಿಪಾಸುಗೆ ಸೋತಿದ್ದೇವೆ.
ನೀನು ‘ಅದನ್ನು’ ಹೀರಿ ಗೆದ್ದಿರಬಹುದು

ನೀವು ನಮ್ಮ ಇತಿಹಾಸ ಮರೆತಿರಬಹುದು
ಆದರೆ ನಮಗೆ ಅಲ್ಲಿ ಆದ ಗಾಯ ಇನ್ನೂ ಒಣಗಿಲ್ಲ
ಆದರೂ ನಿನ್ನ ಗಾಯಕ್ಕೆ ಮುಲಾಮು ಸವರಲು ನಿಂತಿದ್ದೇವೆ

ಆ ಕ್ರೂರತೆ ನಿನ್ನೊಳಗಿಲ್ಲ, ನಮ್ಮ ಜನಗಳ ಆ ಪಿರಾನ ಮೀನಿಗೆ ಗಾಳ ಹಾಕಿದೆ ಅಷ್ಟೇ.
ಆದರೆ ನೀನು ಅದರ ಹಲ್ಲುಗಳ ಮರೆತಿರುವೆ.

ಹೌದು ನಾವು ಹೀಗೆ ಸದಾ ಕುಟ್ಟುವ ಕುಟ್ಟಣ್ಣಗಳೇ
ಕುಡಿದು ಅಮಲೇರಿದಾಗ ಸಮಾನತೆಯ ಸೊಲ್ಲೆತ್ತುವವರೇ…….

ಆ ಗಟಾರದಲ್ಲಿ ಬಿದ್ದು ಅವನು ಈಗ ಸತ್ತಿರಬಹುದು
ಆದರೆ ಅವನ ಮಕ್ಕಳಿನ್ನೂ ಬದುಕಿದ್ದಾರೆ.

ನೀನು ಎದೆಯ ಮಧ್ಯ ಕೈಯಿಟ್ಟು ಹಾಡಬಹುದು
ನಾವು ಎದೆಯ ಹೊಕ್ಕು ಹಾಡುತ್ತೇವೆ

ಗುಂಡಿಗೆ ಎದೆ ಕೊಟ್ಟ ನಮಗೆ ಈವ್ಯಾವೂ
ಹೊಸತಲ್ಲ ಗೆಳೆಯ
ಹಳೆಯ ಗೆಳೆಯ

ಗರಿಕೆಯ ಕುಲದವರು ನಾವು
ಸೋತಿರಬಹುದು
ಆದರೆ ಸತ್ತಿಲ್ಲ

‍ಲೇಖಕರು avadhi

May 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: