ನಾಟಕ
ಪಾತ್ರಗಳೆಲ್ಲ ಹೊರಟು ಹೋದ ಮೇಲೆ ಬೆಳಕು ಆರಿತು.
ರಂಗದ ಎದುರು ನಿರ್ದೇಶಕ ಮಾತ್ರ.
ಮೊದಲು ಅವನಿಗನ್ನಿಸಿದ್ದು
‘ಪಾತ್ರಗಳಿಲ್ಲದೆಯೂ ನಾಟಕ ಸಾಧ್ಯವೇ?’
ನಂತರ ಅಂದುಕೊಂಡ
‘ನಾನೂ ಒಂದು ಪಾತ್ರವೆ?’
ಚಪ್ಪಾಳೆ ತಟ್ಟಿತು ಜಗತ್ತು
ಪಾತ್ರಗಳೆಲ್ಲ ಹೊರಟು ಹೋದ ಮೇಲೆ ಬೆಳಕು ಆರಿತು.
ರಂಗದ ಎದುರು ನಿರ್ದೇಶಕ ಮಾತ್ರ.
ಮೊದಲು ಅವನಿಗನ್ನಿಸಿದ್ದು
‘ಪಾತ್ರಗಳಿಲ್ಲದೆಯೂ ನಾಟಕ ಸಾಧ್ಯವೇ?’
ನಂತರ ಅಂದುಕೊಂಡ
‘ನಾನೂ ಒಂದು ಪಾತ್ರವೆ?’
ಚಪ್ಪಾಳೆ ತಟ್ಟಿತು ಜಗತ್ತು
0 Comments